ಭಾರತದ ಅತ್ಯಂತ ಶ್ರೀಮಂತ ಬಾಲನಟಿ ಈಕೆ, ಕೇವಲ 17 ವರ್ಷದಲ್ಲೇ ಸಂಭಾವನೆ ಭರ್ತಿ 10 ಕೋಟಿ!

Published : Sep 07, 2023, 09:49 AM ISTUpdated : Sep 07, 2023, 09:50 AM IST

ಈ ಸ್ಟಾರ್ ಕಿಡ್ ಹಲವು ವರ್ಷಗಳಿಂದ ತಮಿಳು ಮತ್ತು ಹಿಂದಿ ಚಿತ್ರರಂಗದ ಹಿಟ್‌ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಸದ್ಯ ಆಕೆ ಭಾರತದ ಅತ್ಯಂತ ಶ್ರೀಮಂತ ಬಾಲನಟಿಯೆಂದು ಗುರುತಿಸಿಕೊಂಡಿದ್ದಾರೆ. ಕೇವಲ 17 ವರ್ಷದಲ್ಲೇ ಈಕೆಯ ಸಂಭಾವನೆ ಭರ್ತಿ 10 ಕೋಟಿ.

PREV
17
ಭಾರತದ ಅತ್ಯಂತ ಶ್ರೀಮಂತ ಬಾಲನಟಿ ಈಕೆ, ಕೇವಲ 17 ವರ್ಷದಲ್ಲೇ ಸಂಭಾವನೆ ಭರ್ತಿ 10 ಕೋಟಿ!

17 ವರ್ಷದ ಬಾಲನಟಿ ಕೆಲವು ಟಾಪ್ ಚಲನಚಿತ್ರ ನಟಿಯರಷ್ಟೇ ಜನಪ್ರಿಯ ಮತ್ತು ಶ್ರೀಮಂತೆಯಾಗಬಹುದು ಎಂಬುದನ್ನು ಊಹಿಸುವುದು ಕಷ್ಟ. ಆದರೆ ಈ ಬಾಲನಟಿ ಅದನ್ನು ಸಾಧಿಸಿದ್ದಾರೆ. ತಮಿಳುನಾಡಿನ ಈ ಸ್ಟಾರ್ ಕಿಡ್ ಹಲವು ವರ್ಷಗಳಿಂದ ತಮಿಳು ಮತ್ತು ಹಿಂದಿ ಚಿತ್ರರಂಗದ ಹಿಟ್‌ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಸದ್ಯ ಆಕೆ ಭಾರತದ ಅತ್ಯಂತ ಶ್ರೀಮಂತ ಬಾಲನಟಿಯೆಂದು ಗುರುತಿಸಿಕೊಂಡಿದ್ದಾರೆ.

27

2023ರ ವೇಳೆಗೆ 10 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯದೊಂದಿಗೆ ಭಾರತದ ಅತ್ಯಂತ ಶ್ರೀಮಂತ ಬಾಲನಟಿ ಎಂಬ ದಾಖಲೆಯನ್ನು ಸಾರಾ ಅರ್ಜುನ್ ಹೊಂದಿದ್ದಾರೆ. 2006ರಲ್ಲಿ ಜನಿಸಿದ ನಟಿ, 5ನೇ ವಯಸ್ಸಿನಲ್ಲಿ ಹಿಂದಿ ಚಲನಚಿತ್ರ 404 ಮತ್ತು ತಮಿಳಿನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 

37

ತಮಿಳಿನ 'ದೈವ ತಿರುಮಗಳ್‌' ಚಿತ್ರದಲ್ಲಿ ಖ್ಯಾತ ನಟ ವಿಕ್ರಮ್ ಅವರ ಮಗಳ ಪಾತ್ರವನ್ನು ನಿರ್ವಹಿಸಿದ್ದು ಎಲ್ಲರ ಮೆಚ್ಚುಗೆ ಪಾತ್ರವಾಯಿತು. ಮಾತ್ರವಲ್ಲ ಚಿತ್ರ ಸೂಪರ್ ಹಿಟ್ ಸಹ ಆಯಿತು. ಆ ನಂತರ ಈ ಬಾಲ ನಟಿ ಸೂಪರ್‌ಸ್ಟಾರ್‌ಗಳೊಂದಿಗೆ ದೊಡ್ಡ ಬಜೆಟ್ ಚಿತ್ರಗಳಲ್ಲಿ ನಟಿಸುವುದನ್ನು ಮುಂದುವರೆಸಿದರು, 

47

ಸಲ್ಮಾನ್ ಖಾನ್ ಅವರ ಜೈ ಹೋ, ಇಮ್ರಾನ್ ಹಶ್ಮಿ ಅವರ ಏಕ್ ಥಿ ದಯಾನ್, ಐಶ್ವರ್ಯಾ ರೈ ಅವರ ಜಜ್ಬಾದಲ್ಲಿ ಅಭಿನಯಿಸಿದರು. ನಾಸರ್ ಜೊತೆ ನಟಿಸಿದ ಸೈವಂನಲ್ಲಿನ ಪ್ರಮುಖ ಪಾತ್ರಕ್ಕಾಗಿ ವಿಶೇಷವಾಗಿ ಪ್ರಶಂಸಿಸಲ್ಪಟ್ಟರು.

57

ಸಾರಾ ಅರ್ಜುನ್ ಹಿರಿಯ ನಟ ರಾಜ್ ಅರ್ಜುನ್ ಅವರ ಮಗಳು. ರಾಜ್ ಅರ್ಜುನ್‌, ಎರಡು ದಶಕಗಳಿಂದ ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಹೆಸರು ಅಭಿನಯಿಸುತ್ತಿದ್ದಾರೆ. ಅನುರಾಗ್ ಕಶ್ಯಪ್ ಅವರ ಬ್ಲ್ಯಾಕ್ ಫ್ರೈಡೇ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ನಂತರ ಅವರು ರೌಡಿ ರಾಥೋರ್, ರಯೀಸ್, ಸೀಕ್ರೆಟ್ ಸೂಪರ್ ಸ್ಟಾರ್, ಡಿಯರ್ ಕಾಮ್ರೇಡ್ ಮತ್ತು ತಲೈವಿಯಂತಹ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

67

2021ರಲ್ಲಿ, ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ಯುವ ನಂದಿನಿ (ಐಶ್ವರ್ಯ ರೈ ನಿರ್ವಹಿಸಿದ ಪಾತ್ರ) ಪಾತ್ರದಲ್ಲಿ ಸಾರಾ ಅವರಿಗೆ ದೊಡ್ಡ ಬ್ರೇಕ್ ಸಿಕ್ಕಿತು. ಅವರು ಭಾಗ 1ರಲ್ಲಿ ಅತಿಥಿ ಪಾತ್ರವನ್ನು ಹೊಂದಿದ್ದರು ಆದರೆ ಭಾಗ 2ರಲ್ಲಿ ದೊಡ್ಡದಾದ, ಹೆಚ್ಚು ಅರ್ಥಪೂರ್ಣ ಪಾತ್ರವನ್ನು ಹೊಂದಿದ್ದರು

77

ಒಟ್ಟಾಗಿ, ಎರಡು ಭಾಗಗಳ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ರೂ 800 ಕೋಟಿಗೂ ಹೆಚ್ಚು ಗಳಿಸಿತು. ಭಾರತದಾದ್ಯಂತ ಸಾರಾಗೆ ಹೆಚ್ಚಿನ ಮನ್ನಣೆಯನ್ನು ನೀಡಿತು. ನಟಿ ಈಗ ಬಾಲನಟಿ ಪಾತ್ರವನ್ನು ಬಿಟ್ಟು ಹೀರೋಯಿನ್ ಪಾತ್ರಗಳತ್ತ ಗಮನಹರಿಸುತ್ತಿದ್ದಾರೆ ಎಂಬ ವದಂತಿಗಳಿವೆ. ಶೀಘ್ರದಲ್ಲೇ ದಳಪತಿ ವಿಜಯ್ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಸುದ್ದಿ ಇನ್ನೂ ಕನ್‌ಫರ್ಮ್ ಆಗಿಲ್ಲ.

click me!

Recommended Stories