ಸಲ್ಮಾನ್‌ ಖಾನ್‌ನ ಸುಲ್ತಾನ್‌ ಚಿತ್ರದಿಂದ ಮೃಣಾಲ್‌ ಠಾಕೂರ್‌ ಹೊರ ಬರಲು ಕಾರಣ ಫಿಸಿಕ್!

Published : Sep 06, 2023, 04:34 PM IST

 ಅಲಿ ಅಬ್ಬಾಸ್ ಜಾಫರ್ ಅವರ ನಿರ್ದೇಶನದ  ಸಲ್ಮಾನ್ ಖಾನ್-ಅನುಷ್ಕಾ ಶರ್ಮಾ (Salman Khan -Anushka Sharma)  ಅವರ 2016 ರ ಚಲನಚಿತ್ರ ಸುಲ್ತಾನ್ (Sultan)  ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಯಶಸ್ಸನ್ನು ಕಂಡಿತು. ಆದರೆ ಅನುಷ್ಕಾ ಪಾತ್ರಕ್ಕೆ ಮೃಣಾಲ್ ಠಾಕೂರ್  (Mrunal Thakur) ಮೊದಲ ಆಯ್ಕೆ ಎಂದು ನಿಮಗೆ ತಿಳಿದಿದೆಯೇ? ಹೌದು,  ಈ ವಿಷಯವನ್ನು ಸ್ವತತಃ ಸಲ್ಮಾನ್‌ ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ ಮೃಣಾಲ್ ಠಾಕೂರ್ ಅವರನ್ನು ಕೈ ಬಿಡಲು ಕಾರಣವೇನು ಗೊತ್ತಾ?

PREV
18
ಸಲ್ಮಾನ್‌ ಖಾನ್‌ನ  ಸುಲ್ತಾನ್‌ ಚಿತ್ರದಿಂದ ಮೃಣಾಲ್‌ ಠಾಕೂರ್‌ ಹೊರ ಬರಲು ಕಾರಣ ಫಿಸಿಕ್!

ಸುಲ್ತಾನ್ ಮೃಣಾಲ್ ಠಾಕೂರ್ ಮತ್ತು ಶಾಹಿದ್ ಕಪೂರ್ ತಮ್ಮ ಚಿತ್ರ ಜೆರ್ಸಿ ಪ್ರಚಾರಕ್ಕಾಗಿ ಬಿಗ್ ಬಾಸ್ ವೀಕೆಂಡ್ ಕಾ ವಾರ್ ಸಂಚಿಕೆಯಲ್ಲಿ ಅತಿಥಿಗಳಾಗಿ ಆಗಮಿಸಿದಾಗ ಸಲ್ಮಾನ್ ಈ ವಿಷಯವನ್ನು ಬಹಿರಂಗಪಡಿಸಿದರು. 

28

ಸುಲ್ತಾನ್ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಅವರೊಂದಿಗೆ ಮೃಣಾಲ್ ಅವರ ಪನ್ವೆಲ್ ಫಾರ್ಮ್‌ಹೌಸ್‌ಗೆ ಭೇಟಿ ನೀಡಿದ್ದರು ಎಂದು ಸೂಪರ್‌ಸ್ಟಾರ್ ಬಹಿರಂಗಪಡಿಸಿದರು, ಆಗ ಅವರು ಕುಸ್ತಿಪಟುವಿನಂತೆ ಕಾಣುತ್ತಿರಲಿಲ್ಲ ಎಂದು ಸಲ್ಮಾನ್‌ ಹೇಳಿದ್ದರು.

38

ಮೃಣಾಲ್ ನನ್ನ ಫಾರ್ಮ್‌ಹೌಸ್‌ಗೆ (ಪನ್ವೆಲ್‌ನಲ್ಲಿರುವ) ಬಂದಿದ್ದರು. ಅಲಿ (ಸುಲ್ತಾನ್‌ನ ನಿರ್ದೇಶಕ ಅಬ್ಬಾಸ್ ಜಾಫರ್) ಅವಳನ್ನು ಕರೆತಂದಿದ್ದರು.'ಮೃಣಾಲ್ ಈ ಪಾತ್ರವನ್ನು ಪಡೆಯಲು ಏಕೆ ವಿಫಲರಾದರು ಎಂಬುದನ್ನು ವಿವರಿಸುತ್ತಾ,  ಆ ಸಮಯದಲ್ಲಿ, ಅವಳು ಕುಸ್ತಿಪಟುವಾಗಿ ಕಾಣಲಿಲ್ಲ' ಎಂದು ಸಲ್ಮಾನ್‌  ಬಹಿರಂಗಪಡಿಸಿದ್ದರು.

48

ಸುಲ್ತಾನ್ ಕುಸ್ತಿಪಟು ಸುಲ್ತಾನ್ ಅಲಿ ಖಾನ್ ಅವರ ಪ್ರಯಾಣದ ಸುತ್ತ ಸುತ್ತುತ್ತದೆ,  ಈ ಚಿತ್ರದಲ್ಲಿ ಅನುಷ್ಕಾ ಶರ್ಮಾ ಅರ್ಫಾ ಪಾತ್ರದಲ್ಲಿ ನಟಿಸಿದ್ದಾರೆ, ಸ್ವತಃ ಕುಸ್ತಿಪಟು ಪಾತ್ರದಲ್ಲಿ ಅನುಷ್ಕಾ ಸಲ್ಮಾನ್‌ಗೆ ಜೋಡಿಯಾಗಿದ್ದಾರೆ. 

58

ಹನು ರಾಘವಪುಡಿ ನಿರ್ದೇಶನದ ಸೀತಾ ರಾಮಂ ಪ್ರೇಮಕಥಯ ಮೃಣಾಲ್‌ ಠಾಕೂರ್‌ ಅವರು ತೆಲುಗು ರಾಜ್ಯಗಳಲ್ಲಿ ಸಖತ್‌ ಹವಾ ಸೃಷ್ಟಿಸಿದ್ದಾರೆ.

68

ಸೀತಾ ರಾಮಂ ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ಮೃಣಾಲ್ಯಶಸ್ವಿ ಚೊಚ್ಚಲ ಪ್ರವೇಶದ ನಂತರ, VD13 ಅವರು ಕೆಲಸ ಮಾಡುತ್ತಿರುವ ಮುಂದಿನ ತೆಲುಗು ಚಿತ್ರವಾಗಿದೆ.

78

ಪರಶುರಾಮ್ ನಿರ್ದೇಶನದ ಮತ್ತು ದಿಲ್ ರಾಜು ಮತ್ತು ಶಿರಿಶ್ ನಿರ್ಮಾಣದ ವಿಡಿ 13 ಸಿನಿಮಾ  ಮೃಣಾಲ್ ಠಾಕೂರ್ ಮತ್ತು ವಿಜಯ್ ದೇವರಕೊಂಡ ಅಭಿನಯದ ರೊಮ್ಯಾಂಟಿಕ್ ಚಿತ್ರ. ಇದನ್ನು 2024ರ ಸಂಕ್ರಾಂತಿಗೆ ಬಿಡುಗಡೆ ಮಾಡುವುದಾಗಿ ಘೋಷಿಸಿಲಾಗಿದೆ.

88

ನಾನಿ ಮತ್ತು ಮೃಣಾಲ್ ಠಾಕೂರ್ ಪ್ರಮುಖ ಪಾತ್ರಗಳೊಂದಿಗೆ, ಹಾಯ್ ನನ್ನಾ ಚಲನಚಿತ್ರದ ಬಿಡುಗಡೆಗೆ ಎಲ್ಲರೂ ಎದರು ನೋಡುತ್ತಿದ್ದಾರೆ. ಶೌರ್ಯುವ್ ನಿರ್ದೇಶನದ ಈ ಚಿತ್ರವನ್ನು ಭಾವನಾತ್ಮಕ ನಾಟಕ ಎಂದು ಹೇಳಲಾಗಿದೆ. ಚಿತ್ರದಲ್ಲಿ ಕಿಯಾರಾ ಖನ್ನಾ, ಶ್ರುತಿ ಹಾಸನ್ ಮತ್ತು ಅಂಗದ್ ಬೇಡಿ ಕೂಡ ನಟಿಸಿದ್ದಾರೆ. ಇದನ್ನು 21 ಡಿಸೆಂಬರ್ 2023 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

Read more Photos on
click me!

Recommended Stories