ವಿಚ್ಚೇದನೆ ನಂತ್ರ ಸಮಂತಾ ಮಾಜಿ ಪತಿಯ ಮೊದಲ ಪೋಸ್ಟ್, ಎಲ್ಲವೂ ಪ್ರೀತಿ ಬಗ್ಗೆ

Published : Nov 20, 2021, 06:06 PM ISTUpdated : Nov 20, 2021, 06:32 PM IST

ವಿಚ್ಚೇದನೆಯಾದ ನಂತರ ಸಮಂತಾ(Samantha) ಬಹಳಷ್ಟು ಪೋಸ್ಟ್ ಹಾಕಿದ್ದರೂ ಅವರ ಪತಿ ನಾಗ ಚೈತನ್ಯ(Naga Chaitanya) ಸೈಲೆಂಟಾಗಿದ್ದರು. ಈಗ ಅವರು ಸೋಷಿಯಲ್ ಮೀಡಿಯಾದಲ್ಲಿ ಮೊದಲ ಪೋಸ್ಟ್ ಹಾಕಿದ್ದಾರೆ. ಅದೂ ಪ್ರೀತಿಯ ಬಗ್ಗೆ. ಏನದು ನೋಡಿ

PREV
16
ವಿಚ್ಚೇದನೆ ನಂತ್ರ ಸಮಂತಾ ಮಾಜಿ ಪತಿಯ ಮೊದಲ ಪೋಸ್ಟ್, ಎಲ್ಲವೂ ಪ್ರೀತಿ ಬಗ್ಗೆ

ನಾಗ ಚೈತನ್ಯ(Naga chaitanya) ಅವರು ಶನಿವಾರ ನವೆಂಬರ್ 20ರಂದು ಸಮಂತಾ(Samantha) ಅವರೊಂದಿಗೆ ಬೇರ್ಪಟ್ಟ ನಂತರ ತಮ್ಮ ಮೊದಲ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅವರು ಇತ್ತೀಚೆಗೆ ಓದಿದ ಪುಸ್ತಕದ ಫೋಟೋವನ್ನು ಹಂಚಿಕೊಂಡಿದ್ದಾರೆ ಅದನ್ನು 'ಜೀವನಕ್ಕೆ ಪ್ರೇಮ ಪತ್ರ' ಎಂದು ಕರೆದಿದ್ದಾರೆ..

26
Naga

ಹಲವಾರು ಸಂದರ್ಶನಗಳಲ್ಲಿ, ಚಾಯ್ ಅವರು ತುಂಬಾ ಖಾಸಗಿ ವ್ಯಕ್ತಿಯಾಗಿರುವುದರಿಂದ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರಲು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ. ಇದುವರೆಗೆ ಅವರು ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಕೇವಲ 52 ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

36

ಅಕ್ಟೋಬರ್ 2 ರಂದು ಸಮಂತಾ ಮತ್ತು ನಾಗ ಚೈತನ್ಯ ಅವರು ಹೊಂದಾಣಿಕೆಯಾಗದ ಭಿನ್ನಾಭಿಪ್ರಾಯಗಳಿಂದ ಬೇರೆಯಾಗಲು ನಿರ್ಧರಿಸಿ ವಿಚ್ಚೇದನೆ ಘೋಷಿಸಿದರು. ದಂಪತಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಎನೌನ್ಸ್‌ಮೆಂಟ್ ಹಂಚಿಕೊಂಡ ನಂತರ, ಚಾಯ್ ಈಗ ಒಂದು ತಿಂಗಳಿನಿಂದ Instagram ನಿಂದ ದೂರವಿದ್ದರು.

46

ನವೆಂಬರ್ 20ರಂದು ನಾಗ ಚೈತನ್ಯ ಅವರು ಇತ್ತೀಚೆಗೆ ಓದಿದ ಪುಸ್ತಕದ ಫೋಟೋವನ್ನು Instagramನಲ್ಲಿ ಶೇರ್ ಮಾಡಿದ್ದಾರೆ. ಮ್ಯಾಥ್ಯೂ ಮೆಕನೌಘೆಯವರ ಗ್ರೀನ್‌ಲೈಟ್ಸ್‌ನಿಂದ ಅವರು ವಿಸ್ಮಯಗೊಂಡಿರುವುದಾಗಿ ಹೇಳಿದ್ದಾರೆ.

 

56

ಫೋಟೋವನ್ನು ಹಂಚಿಕೊಂಡ ಅವರು, ಜೀವನಕ್ಕೆ ಪ್ರೇಮ ಪತ್ರ. ನಿಮ್ಮ ಪ್ರಯಾಣವನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.. ಈ ಓದು ನನಗೆ ಹಸಿರು ದೀಪವಾಗಿದೆ .. ಗೌರವ ಸರ್! ಎಂದು ಬರೆದಿದ್ದಾರೆ.

66

ತಮ್ಮ ವಿವಾಹ ವಾರ್ಷಿಕೋತ್ಸವದ ಕೆಲವು ದಿನಗಳ ಮೊದಲು ಸಮಂತಾ ಮತ್ತು ನಾಗ ಚೈತನ್ಯ ತಮ್ಮ ವಿಚ್ಚೇದನೆ ಘೋಷಿಸಿದರು. ದಂಪತಿಗಳು ಮೂರು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದಾರೆ.  2017 ರಲ್ಲಿ ಗೋವಾದಲ್ಲಿ ನಡೆದ ಡೆಸ್ಟಿನೇಶನ್ ವೆಡ್ಡಿಂಗ್‌ನಲ್ಲಿ ಇವರಿಬ್ಬರೂ ವಿವಾಹವಾದರು.

Read more Photos on
click me!

Recommended Stories