Jahnvi Kapoor: ಪೋಸ್ ಕೊಡಮ್ಮಾ ಅಂದ್ರೆ ಹಿಂಗಾ ಮಾಡೋದು ?

First Published | Nov 20, 2021, 4:34 PM IST

ಬಾಲಿವುಡ್(Bollywood) ನಟಿ ಜಾಹ್ನವಿ ಕಪೂರ್(Janhvi Kapoor) ಅಂದ್ರೆ ಸುಮ್ನೇನಾ ? ಸಖತ್ ಡಿಮ್ಯಾಂಡ್‌ನಲ್ಲಿರೋ ಯುವ ನಟಿ ಆಕೆ. ಆದ್ರೆ ಪೋಸ್ ಕೊಡಮ್ಮಾ ಅಂದ್ರೆ ಎಷ್ಟು ತುಂಟಿಯಾಗ್ತಾರೆ ನೋಡಿ ಶ್ರೀದೇವಿ(Sridevi) ಪುತ್ರಿ. ಇಲ್ನೋಡಿ ಫೋಟೋಸ್

ಜಾಹ್ನವಿ ಕಪೂರ್ ತನ್ನ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರದಿದ್ದರೆ ಕ್ರೇಜಿಯಾಗುತ್ತಾರೆ. ನಟಿ ತನ್ನ ಸಮಯವನ್ನು ಪ್ರಯಾಣದಲ್ಲಿ ಕಳೆಯುತ್ತಾರೆ. ಸದ್ಯದ ಹೊಸ ನಿಲ್ದಾಣ: ಲಾಸ್ ಏಂಜಲೀಸ್. ನಟಿ ಲಾಸ್ ಏಂಜಲೀಸ್‌ನಲ್ಲಿ ತನ್ನ ಬ್ಯೂಟಿಫುಲ್ ಡೇಸ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಫೋಟೋಗಳಲ್ಲಿ ನಟಿ ಲಾಸ್‌ ಏಂಜಲೀಸ್‌ನ ಬೀದಿಗಳಲ್ಲಿ ಅಡ್ಡಾಡುವುದನ್ನು ಕಾಣಬಹುದು. ಜಾನ್ವಿಯ ಲುಕ್ ಕ್ಲಾಸಿಕ್ ಆಗಿತ್ತು. ಅವರು ಹೊಂದಾಣಿಕೆಯ ಗಾತ್ರದ ಬ್ಲೇಜರ್ ಅನ್ನು ಧರಿಸಿದ್ದರು. ಪ್ರಯಾಣಕ್ಕಾಗಿ ಒಂದು ಜೋಡಿ ಬೂಟುಗಳನ್ನು ಚೂಸ್ ಮಾಡಿದ್ದರು ನಟಿ.

Tap to resize

ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ ಹನಿ ನಾನು ಮನೆಯಲ್ಲಿದ್ದೇನೆ. ಒಂದು ನಿಮಿಷಕ್ಕಿಂತ ಕಡಿಮೆ ಕಾಲ ಲಾಸ್‌ ಏಂಜಲೀಸ್ ಎಂದು ನಟಿ ಪೋಸ್ಟ್‌ಗೆ ಶೀರ್ಷಿಕೆ ಕೊಟ್ಟಿದ್ದಾರೆ. ಜಾಹ್ನವಿ ಅವರ ಸಹೋದರ ಅರ್ಜುನ್ ಕಪೂರ್, ಇದು ವಿಶ್ವ ಪ್ರವಾಸ ಎಂದು ಪ್ರತಿಕ್ರಿಯಿಸಿದ್ದಾರೆ. ಆಕೆಯ ಚಿಕ್ಕಪ್ಪ ಸಂಜಯ್ ಕಪೂರ್ ನೀವು ಅದೃಷ್ಟವಂತರು ಎಂದು ಬರೆದಿದ್ದಾರೆ.

ಅಂದಹಾಗೆ ಇದರಲ್ಲಿ ಸಖತ್ ಫನ್ನಿಯಾಗಿರುವ ಫೋಟೋ ಒಂದಿದೆ. ನಾಲಗೆ ಹೊರಗೆ ಹಾಕಿ ಮೆಳ್ಳೆಗಣ್ಣು ತೋರಿಸಿ ಮಸ್ತಿ ಮಾಡಿದ್ದಾರೆ ಜಾಹ್ನವಿ ಕಪೂರ್. ಇದು ಇನ್ನಷ್ಟು ಫನ್ನಿಯಾಗಿದೆ.

ಜಾಹ್ನವಿ ಕಪೂರ್ ದಿವಂಗತ ನಟಿ ಶ್ರೀದೇವಿ ಮತ್ತು ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರಿ. ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಓದುತ್ತಿರುವ ಆಕೆಯ ಸಹೋದರಿ ಖುಷಿಗೆ ನಟಿಯಾಗುವ ಹಂಬಲವಿದೆ. ಅರ್ಜುನ್ ಮತ್ತು ಅಂಶುಲಾ ಬೋನಿ ಅವರ ಮೊದಲ ಪತ್ನಿ ಮತ್ತು ಚಲನಚಿತ್ರ ನಿರ್ಮಾಪಕ ಮೋನಾ ಶೌರಿ ಅವರ ಮಕ್ಕಳು

ಕೆಲಸದ ವಿಷಯದಲ್ಲಿ ಜಾನ್ವಿ ಕಪೂರ್ ಕೊನೆಯದಾಗಿ ರಾಜ್‌ಕುಮಾರ್ ರಾವ್ ಮತ್ತು ವರುಣ್ ಶರ್ಮಾ ಅವರೊಂದಿಗೆ ಹಾರರ್ ಸಿನಿಮಾ ರೂಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇಶಾನ್ ಖಟ್ಟರ್ ಎದುರು 2018 ರ ಸಿನಿಮಾ ಧಡಕ್‌ನೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ.

ನಟಿ ನೆಟ್‌ಫ್ಲಿಕ್ಸ್‌ನ ಘೋಸ್ಟ್ ಸ್ಟೋರೀಸ್ ಮತ್ತು ಗುಂಜಾನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್‌ನಂತಹ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಇನ್ನು ದೋಸ್ತಾನಾ 2ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಮೊದಲು ಕಾರ್ತಿಕ್ ಆರ್ಯನ್ ನಟಿಸಲು ಉದ್ದೇಶಿಸಲಾಗಿತ್ತು. ಚಿತ್ರದ ಪರಿಷ್ಕೃತ ಪಾತ್ರವರ್ಗವನ್ನು ಸದ್ಯಕ್ಕೆ ಎನೌನ್ಸ್ ಮಾಡಿಲ್ಲ. ಅವರು ಗುಡ್ ಲಕ್ ಜೆರ್ರಿಯಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ

Latest Videos

click me!