ಬಿಕಿನಿಯಲ್ಲಿ ಕಿಲ್ಲರ್‌ ಪೋಸ್‌ ನೀಡಿದ Mouni Roy

First Published | Mar 20, 2022, 6:15 PM IST

ನಟಿ ಮೌನಿ ರಾಯ್ (Mouni Roy) ಈ ದಿನಗಳಲ್ಲಿ ಶ್ರೀಲಂಕಾದಲ್ಲಿ ರಜೆಯನ್ನು ಆನಂದಿಸುತ್ತಿದ್ದಾರೆ. ಮೌನಿ ತಮ್ಮ ಕೆಲವು ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಗ್ರೇ ಕಲರ್‌  ಬಿಕಿನಿಯಲ್ಲಿ ಕಿಲ್ಲರ್‌ ಪೋಸ್ ನೀಡುತ್ತಿದ್ದಾರೆ. ಮೌನಿ ರಾಯ್ ಅವರ ಈ ಸ್ಟೈಲ್ ನೋಡಿ ಜನ ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. 
 

Mouni Roy shares bikini photos actress enjyoing vaccation in Srilanka

ಮೌನಿ ರಾಯ್‌ ಶೇರ್‌ ಮಾಡಿರುವ ಫೋಟೋಕ್ಕೆ Belle of the ball ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಮೌನಿ ಅವರ ಈ ಹಾಟ್‌ ಫೋಟೋಗಳು ಪಡ್ಡೆಯುವಕರ ನಿದ್ರೆ ಕೆಡಿಸಿದೆ.

ಫೋಟೋಗಳಿಗೆ ಜನರು ತೀವ್ರವಾಗಿ ಕಮೆಂಟ್ ಮಾಡುತ್ತಿದ್ದಾರೆ. ಹಾಟಿ ಎಂದು ಒಬ್ಬ ವ್ಯಕ್ತಿ ಬರೆದಿದ್ದಾರೆ. ಸೆಕ್ಸಿ ಮೌನಿ ಎಂದು ಮತ್ತೊಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. ಇದರೊಂದಿಗೆ ಹಲವರು ಫೈರ್ ಮತ್ತು ಹಾರ್ಟ್ ಇಮೋಜಿಯನ್ನೂ ಕಮೆಂಟ್ ಮಾಡಿದ್ದಾರೆ.

Tap to resize

ಮೌನಿ ರಾಯ್ ಈ ವರ್ಷ ಜನವರಿ 27 ರಂದು ಗೋವಾದಲ್ಲಿ ಗೆಳೆಯ ಸೂರಜ್ ನಂಬಿಯಾರ್ ಅವರನ್ನು ವಿವಾಹವಾದರು. ಮದುವೆಯ ನಂತರ ದಂಪತಿ ಹನಿಮೂನ್‌ಗಾಗಿ ಕಾಶ್ಮೀರಕ್ಕೆ ತೆರಳಿದ್ದರು.ಹನಿಮೂನ್ ಟ್ರಿಪ್‌ನ ಕೆಲವು ಫೋಟೋಗಳನ್ನು ಸಹ ಮೌನಿ ಹಂಚಿಕೊಂಡಿದ್ದಾರೆ. ಇದರಲ್ಲಿ ದಂಪತಿಗಳು ಹಿಮಭರಿತ ಸ್ಥಳ ಮತ್ತು ಹೋಟೆಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಮೌನಿ ರಾಯ್ ಅವರ ಪತಿ ಸೂರಜ್ ನಂಬಿಯಾರ್ ಬ್ಯಾಂಕರ್ ಆಗಿದ್ದು, ದುಬೈನಲ್ಲಿ ವಾಸಿಸುತ್ತಿದ್ದಾರೆ. ಸೂರಜ್ ಮತ್ತು ಮೌನಿ ಮೊದಲ ಬಾರಿಗೆ ಡಿಸೆಂಬರ್ 2019 ರಲ್ಲಿ ದುಬೈನ ನೈಟ್‌ಕ್ಲಬ್‌ನಲ್ಲಿ ಭೇಟಿಯಾದರು.

ಹೊಸ ವರ್ಷವನ್ನು ಆಚರಿಸಲು ಇಬ್ಬರೂ ಅಲ್ಲಿಗೆ ಬಂದಿದ್ದರು. ನಿಧಾನವಾಗಿ ಇಬ್ಬರ ನಡುವೆ ಮಾತು ಶುರುವಾಯಿತು.ನಂತರ ಸೂರಜ್ ಮತ್ತು ಮೌನಿ ಒಬ್ಬರನ್ನೊಬ್ಬರು ಇಷ್ಟಪಡಲು ಪ್ರಾರಂಭಿಸಿದರು ಮತ್ತು ಡೇಟಿಂಗ್ ಪ್ರಾರಂಭಿಸಿದರು.

Mouni Roy shares bikini photos actress enjyoing vaccation in Srilanka

ವರದಿಗಳ ಪ್ರಕಾರ  ಮೌನಿ ರಾಯ್, ಸೂರಜ್ ನಂಬಿಯಾರ್ ಅವರ ಕುಟುಂಬದೊಂದಿಗೆ ಮದುವೆಯ ಬಗ್ಗೆ ಮಾತನಾಡಲು ತನ್ನ ಸ್ನೇಹಿತೆ ಮಂದಿರಾ ಬೇಡಿಯ ಸಹಾಯ ತೆಗೆದು ಕೊಂಡಿದ್ದರು.

ಇದಾದ ನಂತರ, ಮೌನಿ ಮತ್ತು ಸೂರಜ್ ಅವರ ಕುಟುಂಬವು ಮಂದಿರಾ ಬೇಡಿ ಅವರ ಮನೆಯಲ್ಲಿ ಮೊದಲ ಬಾರಿಗೆ ಭೇಟಿಯಾದರು. ಮೌನಿಯ ಮದುವೆಯ ಪ್ರತಿಯೊಂದು ಶಾಶ್ತ್ರಗಳಲ್ಲೂ ಮಂದಿರಾ ಬೇಡಿ ಮುಂಚೂಣಿಯಲ್ಲಿರಲು ಇದೇ ಕಾರಣ.

Mouni Roy shares bikini photos actress enjyoing vaccation in Srilanka

ಬಂಗಾಳಿ ಕುಟುಂಬದಲ್ಲಿ ಜನಿಸಿದ ಮೌನಿ ಸೆಂಟ್ರಲ್ ಸ್ಕೂಲ್‌ನಲ್ಲಿ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದಳು ಮತ್ತು ನಂತರ ಜಾಮಿಯಾ ಮಿಲಿಯಾ ಇಸ್ಲಾಮಿಯಾದಿಂದ ಸಮೂಹ ಸಂವಹನವನ್ನು ಅಧ್ಯಯನ ಮಾಡಿದರು ಆದರೆ ಅವರು ತನ್ನ ಓದನ್ನು ಮಧ್ಯದಲ್ಲಿ ಬಿಟ್ಟು ನಟನೆಯನ್ನು ಪ್ರಾರಂಭಿಸಿದರು .

2007 ರಲ್ಲಿ, ಅವರು ಟಿವಿಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅದರ ನಂತರ ಅವರು ಇನ್ನೂ ಕೆಲವು ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದರು. ಮೌನಿ ರಾಯ್ ಟಿವಿ ಧಾರಾವಾಹಿ 'ದೇವೋನ್ ಕೆ ದೇವ್...ಮಹಾದೇವ್' ನಿಂದ ಮನ್ನಣೆ ಪಡೆದರು. ಇದರಲ್ಲಿ ಮೌನಿ ತಾಯಿ ಸತಿಯ ಪಾತ್ರ ನಿರ್ವಹಿಸಿದ್ದಾರೆ.

ಅದೇ ಸಮಯದಲ್ಲಿ, ಮೋಹಿತ್ ರೈನಾ ಸಹ ಅವರೊಂದಿಗೆ ಧಾರಾವಾಹಿಯಲ್ಲಿ ಕೆಲಸ ಮಾಡಿದರು. ಈ ಕಾರ್ಯಕ್ರಮದ ಸೆಟ್‌ನಲ್ಲಿ ಮೋಹಿತ್ ಮತ್ತು ಮೌನಿ ಸಂಬಂಧ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಮೌನಿ ಮತ್ತು ಮೋಹಿತ್  ಕೆಲವು ವರ್ಷಗಳ ಸಂಬಂಧದ ನಂತರ 2018 ರಲ್ಲಿ ಬೇರ್ಪಟ್ಟರು. 

'ನಾನು ಒಂಟಿಯಾಗಿದ್ದೇನೆ ಮತ್ತು ಬಹಳ ಸಮಯದಿಂದ ಹೀಗೆಯೇ ಬದುಕುತ್ತಿದ್ದೇನೆ. ಮೋಹಿತ್ ಮತ್ತು ನಾನು ಇನ್ನು ಸ್ನೇಹಿತರಲ್ಲ ಮತ್ತು ಇನ್ನು ಮುಂದೆ ನಮ್ಮ ನಡುವೆ ಏನೂ ಇಲ್ಲ' ಎಂದು ಸಂದರ್ಶನವೊಂದರಲ್ಲಿ ಮೌನಿಯೇ ಹೇಳಿದ್ದರು. 
 

ಮೌನಿ ರಾಯ್ ಶೀಘ್ರದಲ್ಲೇ ಅಯನ್ ಮುಖರ್ಜಿ ಅವರ 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.   ಅಮಿತಾಬ್ ಬಚ್ಚನ್, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕೂಡ ಈ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಮೌನಿ 2018 ರ ಗೋಲ್ಡ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರ ಪತ್ನಿಯಾಗಿ ನಟಿಸಿದ್ದಾರೆ.

Latest Videos

click me!