Vicky Kaushal ಜೊತೆಗಿನ ರೊಮ್ಯಾಂಟಿಕ್‌ ಫೋಟೋ ಶೇರ್‌ ಮಾಡಿದ Katrina kaif

First Published | Mar 20, 2022, 6:08 PM IST

ಈ ಬಾರಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಯ ನಂತರ ಮೊದಲ ಹೋಳಿ ಆಗಿತ್ತು.  ಈ ಜೋಡಿ ಶೂಟಿಂಗ್‌ನಿಂದ ಬಿಡುವು ಮಾಡಿಕೊಂಡು ಕುಟುಂಬ ಸಮೇತ ಹೋಳಿ ಆಚರಿಸಿದ್ದಾರೆ. ಹೋಳಿ ಹಬ್ಬದ ಹಿಂದಿನ ರಾತ್ರಿ ಕತ್ರಿನಾ ಕೈಫ್ (Katrina Kaif) ತನ್ನ ಪತಿ ವಿಕ್ಕಿ ಕೌಶಲ್‌  (Vicky Kaushal) ಜೊತೆಗಿನ  ರೊಮ್ಯಾಂಟಿಕ್  ಫೋಟೋವನ್ನು ಹಂಚಿಕೊಂಡಿದ್ದಾರೆ. ಕತ್ರಿನಾ ಕೈಫ್ ಪತಿ ವಿಕ್ಕಿ ಕೌಶಲ್ ಅವರೊಂದಿಗಿನ ಕೆಲವು ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.

Katrina kaif Shares Romantic Photos with Husband Vicky Kaushal a night before Holi

ಈ ಫೋಟೋಗಳಲ್ಲಿ, ಕತ್ರೀನಾ ಕೈಫ್ ಸೋಫಾದ ಮೇಲೆ ವಿಕ್ಕಿ ಕೌಶಲ್ ಅವರ ಕೈಯನ್ನು ಹಿಡಿದುಕೊಂಡು ಶಾರ್ಟ್ ಡ್ರೆಸ್‌ನಲ್ಲಿ ಕುಳಿತಿರುವುದನ್ನು ಕಾಣಬಹುದು. ವಿಕ್ಕಿ ಕತ್ರಿನಾ ಅವರ ಹಿಂದೆ  ಕುಳಿತಿದ್ದಾರೆ. ಇಬ್ಬರ ಕೆಮಿಸ್ಟ್ರಿಫೋಟೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

Katrina kaif Shares Romantic Photos with Husband Vicky Kaushal a night before Holi

ಫೋಟೋದಲ್ಲಿ ಕತ್ರಿನಾ ಸ್ಕೈ ಬ್ಲೂ ಡ್ರೆಸ್‌ನಲ್ಲಿ ಕಾಣಿಸಿಕೊಂಡರೆ, ಅವರ ಪತಿ ವಿಕ್ಕಿ ಕಪ್ಪು ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಫೋಟೋವನ್ನು ಹಂಚಿಕೊಳ್ಳುವಾಗ, ಕಳೆದ ರಾತ್ರಿಯ ಫೋಟೋ ಎಂದು ಕ್ಯಾಪ್ಷನ್‌ನಲ್ಲಿ ಕತ್ರಿನಾ ಕೈಫ್ ಬರೆದಿದ್ದಾರೆ.

Tap to resize

ಕತ್ರಿನಾ ಅವರ ಫೋಟೋಗೆ ಜನರು ಸಾಕಷ್ಟು ಸಂಖ್ಯೆಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಬೆಂಕಿ ಮತ್ತು ಕೆಲವರು ಹೃದಯದ ಇಮೋಜಿಗಳ ಮೂಲಕ ಇಬ್ಬರನ್ನೂ ಹೊಗಳಿದ್ದಾರೆ. ಗಾರ್ಜಿಯಸ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Katrina kaif Shares Romantic Photos with Husband Vicky Kaushal a night before Holi

ಯಾರಾದರೂ ಇಷ್ಟು ಸುಂದರವಾಗಿರಲು ಹೇಗೆ ಸಾಧ್ಯ ಎಂದು ಇನ್ನೊಬ್ಬರು ಹೇಳಿದರು. ಧರ್ಮ ಪ್ರೊಡಕ್ಷನ್ಸ್ ಸಿಇಒ ಅಪೂರ್ವ ಮೆಹ್ತಾ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಈ ದಂಪತಿ ಕಾಣಿಸಿಕೊಂಡಿದ್ದಾರೆ.

ಕೆಲಸದ ಮುಂಭಾಗದಲ್ಲಿ, ಕತ್ರಿನಾ  ಸಲ್ಮಾನ್ ಖಾನ್ ಅವರೊಂದಿಗೆ ಟೈಗರ್ 3 ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಕತ್ರಿನಾ ಕೈಫ್ ಅಭಿನಯದ ಹಲವು ಚಿತ್ರಗಳು ಬಿಡುಗಡೆಗೆ ಸಿದ್ಧವಾಗುತ್ತಿವೆ. ಇವುಗಳಲ್ಲಿ ಮೆರ್ರಿ ಕ್ರಿಸ್ಮಸ್, ಟೈಗರ್ 3, ಫೋನ್ ಭೂತ್ ಸೇರಿವೆ. 

ಸೆಪ್ಟಂಬರ್ 9, 2021 ರಂದು, ಕತ್ರಿನಾ ಕೈಫ್ ರಾಜಸ್ಥಾನದ ಫೋರ್ಟ್ ಬರ್ವಾರಾದಲ್ಲಿ ವಿಕ್ಕಿ ಕೌಶಲ್ ಅವರೊಂದಿಗೆ ಸಪ್ತಪದಿ ತುಳಿದರು  ಮದುವೆಯಾದ ಕೆಲವೇ ದಿನಗಳಲ್ಲಿ, ಇಬ್ಬರೂ ಹನಿಮೂನ್‌ಗೆ ಹೋದರು ಮತ್ತು ಅದರ ನಂತರ, ಈಗ ಅವರು ತಮ್ಮ ಕೆಲಸದ ಕಮಿಟ್‌ಮೆಂಟ್‌ಗಳನ್ನು ಪೂರೈಸುವಲ್ಲಿ ಬ್ಯುಸಿಯಾಗಿದ್ದಾರೆ.

ವಿಕ್ಕಿ ಕೌಶಲ್ ಇಂದೋರ್‌ನಲ್ಲಿ ಶೂಟಿಂಗ್ ಮಾಡುತ್ತಿರುವ ಚಿತ್ರದಲ್ಲಿ ಸಾರಾ ಅಲಿ ಖಾನ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಕೆಲವು ದಿನಗಳ ಹಿಂದೆ, ಇಬ್ಬರೂ ಕೂಡ ಚಿತ್ರೀಕರಣದಲ್ಲಿ ಕಾಣಿಸಿಕೊಂಡಿದ್ದರು. 

Latest Videos

click me!