ಕಾಶ್ಮೀರದಲ್ಲಿ ಹೊಸ ಜೋಡಿ ಮೌನಿ ರಾಯ್‌ ಮತ್ತು ಸೂರಜ್‌ , ಪೋಟೋಗಳು

Published : Feb 09, 2022, 09:00 PM IST

ಬಾಲಿವುಡ್ ಮತ್ತು ಕಿರುತೆರೆ ನಟಿ ಮೌನಿ ರಾಯ್ (Mouni roy)ಈ ದಿನಗಳಲ್ಲಿ ತಮ್ಮ ಪತಿ ಸೂರಜ್ ನಂಬಿಯಾರ್ (Sooraj Nabmiar) ಅವರೊಂದಿಗೆ ಹನಿಮೂನ್ ( honeymoon)  ಆಚರಿಸುತ್ತಿದ್ದಾರೆ. ಇಬ್ಬರೂ ಕಾಶ್ಮೀರವನ್ನು ತಮ್ಮ ಮಧುಚಂದ್ರದ ತಾಣವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲಿನ ಫೋಟೋಗಳನ್ನು ನಟಿ ನಿರಂತರವಾಗಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ (Social Media) ಹಂಚಿಕೊಳ್ಳುತ್ತಿದ್ದಾರೆ. ಕೆಲವೊಮ್ಮೆ ಅವರು ತಮ್ಮ ಪತಿ ಸೂರಜ್ ನಂಬಿಯಾರ್ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದನ್ನು ಕಾಣಬಹುದು ಮತ್ತು ಕೆಲವೊಮ್ಮೆ ಅವರು ಹಿಮದ ನಡುವೆ ಆಡುತ್ತಿದ್ದರು. ಅಷ್ಟೇ ಅಲ್ಲ, ಹನಿಮೂನ್ ಅವಧಿಯಲ್ಲಿ ಪುಸ್ತಕ ಓದುವುದನ್ನು ಸಹ ಕಾಣಬಹುದು. ಮೌನಿಯ ಮಧುಚಂದ್ರದ ಕೆಲವು ಫೋಟೋಗಳು ಇಲ್ಲಿವೆ.

PREV
17
ಕಾಶ್ಮೀರದಲ್ಲಿ ಹೊಸ ಜೋಡಿ ಮೌನಿ ರಾಯ್‌ ಮತ್ತು ಸೂರಜ್‌ , ಪೋಟೋಗಳು

ಮೌನಿ ಮತ್ತು ಸೂರಜ್ ನಂಬಿಯಾರ್ ಇತ್ತೀಚೆಗೆ ಗೋವಾದಲ್ಲಿ ಅದ್ಧೂರಿ ವಿವಾಹದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯ ಪೂರ್ವ ಮತ್ತು ನಂತರದ ಸೆಲೆಬ್ರೆಷನ್‌ ಫೋಟೋಗಳು  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ರತಿ ಸಮಾರಂಭದಲ್ಲಿ ಅಭಿಮಾನಿಗಳು ಮೌನಿಯ ವಿಭಿನ್ನ ಲುಕ್‌ಗೆ ಫಿದಾ ಆಗಿದ್ದಾರೆ. 
 

 

27

ಮೌನಿ ರಾಯ್‌ ಅವರು ಹನಿಮೂನ್‌ನಲ್ಲೂ ಸಹ ವಿವಿಧ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿಯ ತಮ್ಮ ಪತಿ ಸೂರಜ್ ನಂಬಿಯಾರ್ ಜೊತೆ ಎಂಜಾಯ್‌ ಮಾಡುತ್ತಿದ್ದಾರೆ. ಫೋಟೋಗಳನ್ನು ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

37

ಹಿಮದ ನಡುವೆ ಮೌನಿ ವಿಭಿನ್ನ ಪೋಸ್‌ ನೀಡಿದ್ದಾರೆ. ಹಳದಿ ಜಾಕೆಟ್ ಮತ್ತು ಕಪ್ಪು ಪ್ಯಾಂಟ್‌ನಲ್ಲಿ ಮಿಂಚಿದ್ರೆದಾರೆ. ಅವರು ತನ್ನ ಕೂದಲನ್ನು ಕಟ್ಟದೆ ಹಾಗೇ ಬಿಟ್ಟಿದ್ದಾರೆ.
 

47

ಹಿಮದ ಕಣಿವೆಗಳಲ್ಲಿ, ಹನಿಮೂನ್‌ ಸೆಲೆಬ್ರೆಟ್‌ ಮಾಡುತ್ತಿದ್ದಾರೆ ಹೊಸ ಜೋಡಿ. ಇದರ ಜೊತೆ  ಮೌನಿ ರಾಯ್‌ ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುವುದನ್ನು ಸಹ ಕಾಣಬಹುದು. ಅವರು ಪುಸ್ತಕದ ಹಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ

57

ಮೌನಿ ಅವರ ಫೋಟೋಗಳನ್ನು ನೋಡಿದ ಅವರ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ. ಅವರ ಪ್ರತಿ ಚಿತ್ರಕ್ಕೂ ಲಕ್ಷಾಂತರ ಲೈಕ್‌ಗಳು ಬರುತ್ತಿವೆ. ಅಭಿಮಾನಿಗಳು ಹಾರ್ಟ್ ಮತ್ತು ಫೈರ್ ಎಮೋಜಿಯನ್ನು ನಿರಂತರವಾಗಿ ಹಂಚಿಕೊಳ್ಳುತ್ತಿದ್ದಾರೆ.


 

67

ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಜನವರಿ 27 ರಂದು ಗೋವಾದಲ್ಲಿ ವಿವಾಹವಾದರು. ಕೊರೋನಾದಿಂದಾಗಿ, ಎರಡೂ ಕಡೆಯ ಕುಟುಂಬ ಸದಸ್ಯರು ಮತ್ತು ಅತ್ಯಂತ ಆಪ್ತರು ಮಾತ್ರ ಅವರ ಮದುವೆಯಲ್ಲಿ ಹಾಜರಿದ್ದರು.


 

77

ಮೌನಿ ರಾಯ್ ಅವರ ಪತಿ ಸೂರಜ್ ನಂಬಿಯಾರ್ ಬ್ಯಾಂಕರ್ ಆಗಿದ್ದು, ದುಬೈನಲ್ಲಿ ವಾಸಿಸುತ್ತಿದ್ದಾರೆ. ಸೂರಜ್ ಮತ್ತು ಮೌನಿ ಮೊದಲ ಬಾರಿಗೆ ಡಿಸೆಂಬರ್ 2019 ರಲ್ಲಿ ದುಬೈನ ನೈಟ್‌ಕ್ಲಬ್‌ನಲ್ಲಿ ಭೇಟಿಯಾದರು. ಹೊಸ ವರ್ಷವನ್ನು ಆಚರಿಸಲು ಇಬ್ಬರೂ ಅಲ್ಲಿಗೆ ಬಂದಿದ್ದರು. ಆ ಭೇಟಿ ಸ್ನೇಹವಾಗಿ ನಂತರ ಪ್ರೀತಿಗೆ ತಿರುಗಿತ್ತು.

Read more Photos on
click me!

Recommended Stories