ಹೀರೋಗಳು ಸಿನಿಮಾದ ಹೈಲೈಟ್ ಆಗಿರಬಹುದು. ಆದರೆ ನಟಿಯರೂ ಚಿತ್ರದ ಸಕ್ಸಸ್‌ಗೆ ಅಷ್ಟೇ ಮುಖ್ಯ. ಭಾರತದ ಕೆಲವು ಟಾಪ್ ನಟಿಯರು ಕೆಲವೊಮ್ಮೆ ಹೀರೋಗಳಿಗಿಂತ ಹೆಚ್ಚಿನ ಸ್ಯಾಲರಿಯನ್ನು ಪಡೆದಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅಂತಹ ಒಂದು ಯಶಸ್ಸಿನ ಕಥೆಯೆಂದರೆ, ಈ ಬಾಲಿವುಡ್ ನಾಯಕಿ.
ತನ್ನ ಸಮಕಾಲೀನರಿಗಿಂತ ಹೆಚ್ಚು ಬ್ಲಾಕ್‌ಬಸ್ಟರ್‌ಗಳಲ್ಲಿ ನಟಿಸಿದ್ದಾರೆ, ಬಾಕ್ಸ್ ಆಫೀಸ್‌ನಲ್ಲಿ ಒಂದೆರಡಲ್ಲ ಬರೋಬ್ಬರಿ 4000 ಕೋಟಿ ಗಳಿಸಿದ್ದಾರೆ. ಇದು ಹಿಂದಿ ಚಲನಚಿತ್ರ ಇತಿಹಾಸದಲ್ಲಿ ಎಲ್ಲರಿಗಿಂತ ಹೆಚ್ಚು ಮೊತ್ತವಾಗಿದೆ..
ಬಾಲಿವುಡ್ ಇತಿಹಾಸದಲ್ಲಿ ಕರೀನಾ ಕಪೂರ್ ನಟಿಸಿದ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಯಾವುದೇ ನಟಿಯ ಸಿನಿಮಾಗಿಂತ ಹೆಚ್ಚಿನ ಹಣವನ್ನು ಗಳಿಸಿವೆ. ಬಾಕ್ಸ್ ಆಫೀಸ್ ಇಂಡಿಯಾದ ಪ್ರಕಾರ, ಕರೀನಾ 23 ಯಶಸ್ವಿ ಚಲನಚಿತ್ರಗಳೊಂದಿಗೆ ಅತ್ಯಂತ ಯಶಸ್ವಿ ಆಧುನಿಕ ಕಾಲದ ಬಾಲಿವುಡ್ ನಾಯಕಿಯಾಗಿದ್ದಾರೆ, ಅವರ ಸಹೋದರಿ ಕರಿಷ್ಮಾ, ಕತ್ರಿನಾ (ಇಬ್ಬರೂ 22), ಮತ್ತು ರಾಣಿ ಮುಖರ್ಜಿ (21) ನಂತರದ ಸ್ಥಾನದಲ್ಲಿದ್ದಾರೆ.
Kareena kapoor
ಇನ್ನುಳಿದಂತೆ ಪ್ರಿಯಾಂಕಾ ಚೋಪ್ರಾ (18) ಮತ್ತು ಕಾಜೋಲ್ (14) ಲಿಸ್ಟ್‌ನಲ್ಲಿದ್ದಾರೆ. ಈ 23 ಚಲನಚಿತ್ರಗಳು ಬಜರಂಗಿ ಭಾಯಿಜಾನ್ ಮತ್ತು 3 ಈಡಿಯಟ್ಸ್ ನಂಥಾ 2 ಸಾರ್ವಕಾಲಿಕ ಬ್ಲಾಕ್‌ಬಸ್ಟರ್‌ಗಳು ಮತ್ತು ಕಭಿ ಖುಷಿ ಕಭಿ ಗಮ್, ಐತ್ರಾಜ್, ಜಬ್ ವಿ ಮೆಟ್, ಬಾಡಿಗಾರ್ಡ್ ಮತ್ತು ಗುಡ್ ನ್ಯೂಜ್‌ನಂತಹ ಹಲವಾರು ಹಿಟ್‌ಗಳು ಮತ್ತು ಬ್ಲಾಕ್‌ಬಸ್ಟರ್‌ಗಳನ್ನು ಒಳಗೊಂಡಿವೆ. ಈ ಎಲ್ಲಾ ಚಿತ್ರಗಳು ಆಕೆಗೆ ಗಲ್ಲಾಪೆಟ್ಟಿಗೆಯಲ್ಲಿ ವಿಶ್ವಾದ್ಯಂತ 4000 ಕೋಟಿ ರೂ. ಗಳಿಸಲು ಕಾರಣವಾಗಿದೆ.
ಕರೀನಾ ತನ್ನ ಸಮಕಾಲೀನರಾದ ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ ಮತ್ತು ದೀಪಿಕಾ ಪಡುಕೋಣೆಗಿಂತ ಬಾಲಿವುಡ್ ಸಂಭಾವನೆಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲಲು ಕಾರಣ ಅವರು ಬಾಲಿವುಡ್ ಇತಿಹಾಸದಲ್ಲಿ ಕೆಲವು ದೊಡ್ಡ ಹಿಟ್‌ಗಳಲ್ಲಿ ಭಾಗವಾಗಿದ್ದಾರೆ. ಇದರಲ್ಲಿ ಬಜರಂಗಿ ಭಾಯಿಜಾನ್ ಕೂಡ ಸೇರಿದೆ. ಇದು ವಿಶ್ವದಾದ್ಯಂತ 918 ಕೋಟಿ ರೂ. ಗಳಿಸಿದೆ.
ಕರೀನಾ ಹೊರತುಪಡಿಸಿ, ಅತಿ ಹೆಚ್ಚು ಹಣ ಗಳಿಸಿದ ಇನ್ನೂ ಕೆಲವು ಭಾರತೀಯ ನಟಿಯರಿದ್ದಾರೆ. ಅವರ ಚಿತ್ರಗಳು 3000 ಕೋಟಿ ರೂ. ಗಳಿಸಿಎ. ಇವರಲ್ಲಿ ದೀಪಿಕಾ ಪಡುಕೋಣೆ ಮತ್ತು ಅನುಷ್ಕಾ ಶರ್ಮಾ ಸೇರಿದ್ದಾರೆ. ಅನುಷ್ಕಾ ಶೆಟ್ಟಿ ಮತ್ತು ತಮನ್ನಾ ಭಾಟಿಯಾ ಬಾಹುಬಲಿ ಫ್ರ್ಯಾಂಚೈಸ್ ಕೃಪೆಯಿಂದ ಪಟ್ಟಿಗೆ ಸೇರಿದ್ದಾರೆ, ಇದು ಕೇವಲ 2400 ಕೋಟಿ ರೂ.
ಇತರ ನಟಿಯರು ಯಶಸ್ವಿ ಚಲನಚಿತ್ರಗಳನ್ನು ಹೊಂದಿದ್ದಾರೆ, ವಿಶೇಷವಾಗಿ ದೀಪಿಕಾ ಪಡುಕೋಣೆ ಬಾಜಿರಾವ್ ಮಸ್ತಾನಿ, ಪದ್ಮಾವತ್ ಅಂಥಾ ಹಲವು ಹಿಟ್ ಸಿನಿಮಾ ನೀಡಿದ್ದಾರೆ. ಆದರೆ ಅವರ ಒಟ್ಟು ಮೊತ್ತವು ಕರೀನಾ ಅವರ ಅಂಕಿ ಅಂಶಕ್ಕಿಂತ ಕಡಿಮೆಯಾಗಿದೆ. ಸೌತ್‌ನಲ್ಲಿ, ಸಮಂತಾ, ನಯನತಾರಾ, ಅಥವಾ ಅನುಷ್ಕಾ ಶೆಟ್ಟಿಯಂತಹ ದೊಡ್ಡ ನಟಿಯರು ಸಹ ಕರೀನಾ ಸಂಭಾವನೆಯನ್ನು ಮೀರಿಸಿಲ್ಲ.
ಐಶ್ವರ್ಯಾ ರೈ, ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್ ಮತ್ತು ನಯನತಾರಾ ಅವರ ಚಲನಚಿತ್ರಗಳು ರೂ 2000 ಕೋಟಿ ಗಳಿಸಿವೆ, ನಂತರ ಫಾತಿಮಾ ಸನಾ ಶೇಖ್ ಮತ್ತು ಸನ್ಯಾ ಮಲ್ಹೋತ್ರಾ ಅವರು 2024 ಕೋಟಿ ಗಳಿಸಿದ ದಂಗಲ್‌ನಲ್ಲಿ ನಟಿಸುವ ಮೂಲಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.