ಐಪಿಎಲ್ ಸಂಸ್ಥಾಪಕ ಮತ್ತು ಸಂಕಷ್ಟದಲ್ಲಿರುವ ಉದ್ಯಮಿ ಲಲಿತ್ ಮೋದಿ ಕಳೆದ ವರ್ಷ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರೊಂದಿಗಿನ ಸ್ನೇಹಶೀಲ ಚಿತ್ರಗಳನ್ನು ಪೋಸ್ಟ್ ಮಾಡಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದರು. ಜೊತೆಗೆ ಸುಶ್ಮಿತಾ ಮೇಲಿನ ಪ್ರೀತಿಯನ್ನು ಹೇಳಿಕೊಂಡಿದ್ದರು. ಇನ್ನೇನು ಇವರಿಬ್ಬರ ಮದುವೆಯೇ ಆಗಿ ಹೋಗಿದೆ ಎಂದು ಸುದ್ದಿಯಾಗಿತ್ತು. ಈ ವಿಷಯದ ಬಗ್ಗೆ ಸುಶ್ಮಿತಾ ಮೌನ ವಹಿಸಿದ್ದರೂ, ಲಲಿತ್ ಮೋದಿ ಒಂದು ದಿನದವರೆಗೂ ಸಾಮಾಜಿಕ ಮಾಧ್ಯಮದಲ್ಲಿ ಪ್ರೀತಿಯ ಪೋಸ್ಟ್ ಇತ್ತು. ಇನ್ನೂ ಕೂಡ ಪೋಸ್ಟ್ ಹಾಗೆಯೇ ಇದೆ. ಈಗ, 90 ರ ದಶಕದ ಮತ್ತೊಂದು ಭಾರತದ ಪ್ರಸಿದ್ದ ರೂಪದರ್ಶಿ ಉಜ್ವಲಾ ರಾವುತ್‌ನಲ್ಲಿ ಮೋದಿ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ
ಇತ್ತೀಚೆಗೆ, ಖ್ಯಾತ ವಕೀಲ ಮತ್ತು ಭಾರತದ ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ಲಂಡನ್‌ನಲ್ಲಿ ತಮ್ಮ ಮೂರನೇ ವಿವಾಹವಾದರು. ಸಾಳ್ವೆ ಮತ್ತು ಅವರ ಪತ್ನಿ ತ್ರಿನಾ ಅವರು ಬ್ರಿಟಿಷ್ ರಾಜಧಾನಿ ಲಂಡನ್‌ನಲ್ಲಿ ಪಾರ್ಟಿ ಏರ್ಪಡಿಸಿದರು, ಇದರಲ್ಲಿ ಕೆಲವು ಗಮನಾರ್ಹ ಭಾರತೀಯ ಉದ್ಯಮಿಗಳು, ವಕೀಲರು ಮತ್ತು ಅಂಬಾನಿಗಳು ಸೇರಿದಂತೆ ಸಮಾಜದ ಹಲವು ಗಣ್ಯರು ಭಾಗವಹಿಸಿದ್ದರು. ಈ ಅತಿಥ್ಯದಲ್ಲಿ ಪ್ರಸ್ತುತ ಲಂಡನ್‌ನಲ್ಲಿ ನೆಲೆಸಿರುವ ಲಲಿತ್ ಮೋದಿ ಕೂಡ ಇದ್ದರು.
ಆರತಕ್ಷತೆಯಲ್ಲಿ ಹಂಚಿಕೊಂಡ ಚಿತ್ರಗಳಲ್ಲಿ, ಮೋದಿ ಉಜ್ವಲಾ ರಾವತ್ ಅವರೊಂದಿಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಮಾಧ್ಯಮಗಳ ವರದಿ ಪ್ರಕಾರ ಉಜ್ವಲಾ ಅವರು ಲಲಿತ್ ಮೋದಿ ಅವರ 'ಗೆಳತಿ' ಎಂದು ಉಲ್ಲೇಖಿಸಿದ್ದು, ಜೋಡಿ ಡೇಟಿಂಗ್ ನಲ್ಲಿದ್ದಾರೆ ಎಂದು ವರದಿ ಮಾಡಿವೆ.
ವೈರಲ್ ಆದ ಫೋಟೋದಲ್ಲಿ ಲಲಿತ್ ಮೋದಿ - ಕಪ್ಪು ಸೂಟ್ ಧರಿಸಿ - ಮೆಟ್ಟಿಲುಗಳ ಮೇಲೆ ಪೋಸ್ ನೀಡಿದರೆ, ಉಜ್ವಲಾ ಲ್ಯಾವೆಂಡರ್ ಗೌನ್ ಧರಿಸಿ, ಮೆಟ್ಟಿಲಿನ ಕೆಳಗೆ ಕುಳಿತು ಫೋಸ್ ನೀಡಿದ್ದಾರೆ. ಇಬ್ಬರೂ ಖುಷಿಯಿಂದ ನಗುತ್ತಿದ್ದಾರೆ.
ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯನ್ನು ಲಲಿತ್ ಮೋದಿ ಆಗಲಿ ಅಥವಾ ಉಜ್ವಲಾ ರಾವತ್ ಆಗಲಿ ನಿರಾಕರಿಸಿಲ್ಲ ಅಥವಾ ಖಚಿತಪಡಿಸಿಲ್ಲ. ಕಳೆದ ವರ್ಷ ಉದ್ಯಮಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಶೇರ್ ಮಾಡಿದ ನಂತರ ಮೋದಿ ಮತ್ತು ಸುಶ್ಮಿತಾ ಅವರ ಸಂಬಂಧವು ತುಂಬಾ ಚರ್ಚೆಯಾಗಿತ್ತು. ಆದಾಗ್ಯೂ, ಅವರಿಬ್ಬರ ಸಂಬಂಧ ಈಗ ಹೀಗಿದೆ ಎಂಬುದು ರಹಸ್ಯವಾಗಿಯೇ ಉಳಿದಿದೆ. ಏಕೆಂದರೆ ಸುಶ್ಮಿತಾ ಅದನ್ನು ಎಂದಿಗೂ ಸಾರ್ವಜನಿಕವಾಗಿ ಒಪ್ಪಿಕೊಂಡಿಲ್ಲ, ಅದರ ಬಗ್ಗೆ ಮಾತನಾಡಿಲ್ಲ.
ಐಪಿಎಲ್ ಅವ್ಯವಹಾರ ಮತ್ತು ಸಾಲ ವಂಚನೆ ವಿಚಾರವಾಗಿ 59 ವರ್ಷದ ಲಲಿತ್ ಮೋದಿ ಭಾರತದಿಂದ ಪರಾರಿಯಾಗಿ ಲಂಡನ್‌ನಲ್ಲಿ ನೆಲೆಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಸ್ಥಾಪಕ ಮತ್ತು ಮೊದಲ ಕಮಿಷನರ್ ಎಂದು ಹೆಚ್ಚು ಹೆಸರುವಾಸಿಯಾದ ಮೋದಿ ಶ್ರೀಮಂತ ಮೋದಿ ವ್ಯಾಪಾರ ಕುಟುಂಬದ ಕುಡಿ ಮತ್ತು ಗಾಡ್‌ಫ್ರೇ ಫಿಲಿಪ್ಸ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.
45 ವರ್ಷದ ಉಜ್ವಲಾ ರಾವುತ್ ಅವರು 90 ರ ದಶಕದಲ್ಲಿ ಪ್ರಮುಖ ರೂಪದರ್ಶಿಯಾಗಿದ್ದರು ಮತ್ತು 1996 ರ ಮಿಸ್ ಇಂಡಿಯಾದಲ್ಲಿ ಫೈನಲಿಸ್ಟ್ ಆಗಿದ್ದರು. ವಿಕ್ಟೋರಿಯಾಸ್ ಸೀಕ್ರೆಟ್ ಫ್ಯಾಶನ್ ಶೋಗಾಗಿ ನಡೆದ ಮೊದಲ ಭಾರತೀಯರಲ್ಲಿ ಈಕೆ ಕೂಡ ಒಬ್ಬರು.