'ಜೈಲರ್‌' ಸೂಪರ್ ಸಕ್ಸಸ್‌, 'ಕಾವಾಲಯ್ಯ' ಸಂಗೀತ ನಿರ್ದೇಶಕನಿಗೆ ಸಿಕ್ತು ದುಬಾರಿ ಗಿಫ್ಟ್‌

Published : Sep 05, 2023, 02:27 PM ISTUpdated : Sep 05, 2023, 02:53 PM IST

'ಜೈಲರ್' ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಸಖತ್ ಹಿಟ್ ಆಗಿದೆ. ಈಗಾಗಲೇ ಚಿತ್ರದ ಗಳಿಕೆ 633.23 ಕೋಟಿ ರೂ. ಮೀರಿದೆ. ಹೀಗಾಗಿ ಸನ್ ಪಿಕ್ಚರ್ಸ್ ಮುಖ್ಯಸ್ಥ ಕಲಾನಿಧಿ ಮಾರನ್, ನಟ ರಜನೀಕಾಂತ್‌, ನಿರ್ದೇಶಕ ನೆಲ್ಸನ್‌ಗೆ ಭಾರೀ ಗಿಫ್ಟ್‌ಗಳನ್ನು ನೀಡಿದ್ದಾರೆ. ಸದ್ಯ ಸಂಗೀತ ಸಂಯೋಜಕ ಅನಿರುದ್ಧ ರವಿಚಂದರ್‌ಗೆ ಚೆಕ್ ಮತ್ತು ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ.

PREV
19
'ಜೈಲರ್‌' ಸೂಪರ್ ಸಕ್ಸಸ್‌, 'ಕಾವಾಲಯ್ಯ' ಸಂಗೀತ ನಿರ್ದೇಶಕನಿಗೆ ಸಿಕ್ತು ದುಬಾರಿ ಗಿಫ್ಟ್‌

ಆಗಸ್ಟ್ 10 ರಂದು ಬಿಡುಗಡೆಯಾದ ರಜನಿಕಾಂತ್ ಅಭಿನಯದ 'ಜೈಲರ್' ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಸಖತ್ ಹಿಟ್ ಆಗಿದೆ. ಈಗಾಗಲೇ ಚಿತ್ರದ ಗಳಿಕೆ 633.23 ಕೋಟಿ ರೂ. ಮೀರಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರವು ಜಾಗತಿಕವಾಗಿ 700 ಕೋಟಿ ರೂಪಾಯಿಗಳನ್ನು ತಲುಪುವ ಗುರಿಯನ್ನು ಹೊಂದಿದೆ. 

29

ಚಿತ್ರದ ಯಶಸ್ಸಿನ ಮಧ್ಯೆ, ಸನ್ ಪಿಕ್ಚರ್ಸ್ ಮುಖ್ಯಸ್ಥ ಕಲಾನಿಧಿ ಮಾರನ್, ಸೂಪರ್‌ ಸ್ಟಾರ್‌ ರಜನಿಕಾಂತ್ ಅವರಿಗೆ ಚಲನಚಿತ್ರದಿಂದ ಗಳಿಸಿದ ಲಾಭದಿಂದ ಒಂದು ಪಾಲು ಅಂದರೆ ಬರೋಬ್ಬರಿ ಒಂದು ಕೋಟಿ ರೂ. ಹಾಗೂ ಹೊಚ್ಚ ಹೊಸ BMW X7 ಜೊತೆಗೆ ಉಡುಗೊರೆಯಾಗಿ ನೀಡಿದರು.

39

ಮಾತ್ರವಲ್ಲ ಚಿತ್ರದ ನಿರ್ದೇಶಕ ನೆಲ್ಸನ್ ಅವರಿಗೆ ಚೆಕ್‌ನ್ನು ಮತ್ತು ಕಾರನ್ನು ಉಡುಗೊರೆಯಾಗಿ ನೀಡಿದರು. ಈ ಬಗ್ಗೆ ಸನ್‌ ಪಿಕ್ಚರ್ಸ್‌ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಫೋಟೋವನ್ನು ಹಂಚಿಕೊಂಡಿದೆ.

49

ಇದೀಗ, ಸನ್ ಪಿಕ್ಚರ್ಸ್‌ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಮತ್ತೊಂದು ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಅದರಲ್ಲಿ ಕಲಾನಿಧಿ ಮಾರನ್ ಸಂಗೀತ ಸಂಯೋಜಕ ಅನಿರುದ್ಧ ರವಿಚಂದರ್‌ಗೆ ಚೆಕ್ ಮತ್ತು ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

59

ಅನಿರುದ್ಧ್ ರವಿಚಂದರ್ ಅವರೊಂದಿಗೆ ಕಲಾನಿಧಿ ಮಾರನ್ ಅವರ ಚಿತ್ರವನ್ನು ಹಂಚಿಕೊಂಡ ಸನ್ ಪಿಕ್ಚರ್ಸ್ ಹೀಗೆ ಬರೆದಿದೆ. 'ಕಲಾನಿಧಿ ಮಾರನ್ ಅವರು @anirudhofficial ಅವರನ್ನು ಅಭಿನಂದಿಸಿದರು. ಚೆಕ್ ಅನ್ನು ಹಸ್ತಾಂತರಿಸಿದರು. ಜೈಲರ್‌ ಸಕ್ಸಸ್‌ನ್ನು ಹೀಗೆ ಆಚರಿಸಲಾಯಿತು' ಎಂದು ಫೋಟೋ, ವಿಡಿಯೋ ಶೇರ್‌ ಮಾಡಲಾಗಿದೆ. 

69

ಅಧಿಕೃತ ಸನ್ ಪಿಕ್ಚರ್ಸ್ ಹ್ಯಾಂಡಲ್ ಮಾರನ್ ಅವರೊಂದಿಗೆ ಅನಿರುದ್ಧ್ ರವಿಚಂದರ್ ಒಳಗೊಂಡ 46 ನಿಮಿಷಗಳ ಅವಧಿಯ ವೀಡಿಯೊವನ್ನು ಹಂಚಿಕೊಂಡಿದೆ. 'ಬ್ಲಾಕ್‌ಬಸ್ಟರ್ ಜೈಲರ್ ಸೆಲಬ್ರೇಶನ್ ಆಚರಿಸಲು ಕಲಾನಿಧಿ ಮಾರನ್ ಹೊಚ್ಚಹೊಸ ಪೋರ್ಷೆ ಕಾರಿನ ಕೀಯನ್ನು @anirudhofficial ಅವರಿಗೆ ಹಸ್ತಾಂತರಿಸಿದರು' ಎಂದು ಬರೆದುಕೊಳ್ಳಲಾಗಿದೆ.

79

ರಜನಿಕಾಂತ್ ನೇತೃತ್ವದ ಆಕ್ಷನ್-ಥ್ರಿಲ್ಲರ್ ಸೋಮವಾರದ ವೇಳೆಗೆ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 637.79 ಕೋಟಿ ರೂಪಾಯಿಗಳನ್ನು ತಲುಪುವಲ್ಲಿ ಯಶಸ್ವಿಯಾಗಿದೆ ಎಂದು ಚಲನಚಿತ್ರ ವ್ಯಾಪಾರ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಹೇಳಿದ್ದಾರೆ. ಮೊದಲ ವಾರದಲ್ಲಿ 450.80 ಕೋಟಿ ರೂ., ಎರಡನೇ ವಾರದಲ್ಲಿ 124.18 ಕೋಟಿ ರೂ., ಮೂರನೇ ವಾರದಲ್ಲಿ 47.05 ಕೋಟಿ ರೂ. ಗಳಿಸಿದೆ.

89

ಹಲವು ದಾಖಲೆ ಹಿಂದಿಕ್ಕಿ ನಾಗಾಲೋಟದಿಂದ ಓಡುತ್ತಿರುವ ಜೈಲರ್​ ಚಿತ್ರ ಇದೀಗ ಓಟಿಟಿಯಲ್ಲಿ ಕಾಣಿಸಿಕೊಳ್ಳಲಿದ್ದು, ಇದಕ್ಕೆ ದಿನಾಂಕ ಫಿಕ್ಸ್​ ಮಾಡಲಾಗಿದೆ.  ಈ ಹಿಂದೆ ನೆಟ್‌ಫ್ಲಿಕ್ಸ್‌ ಮತ್ತು ಸನ್‌ ನೆಕ್ಸ್ಟ್ ಒಟಿಟಿಯಲ್ಲಿ ಜೈಲರ್‌ ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಬಹುದು ಎಂಬ ಸುದ್ದಿ ಹರಿದಾಡಿತ್ತು.

99

ಇದೀಗ ಜೈಲರ್‌ ಸಿನಿಮಾ ಅಮೆಜಾನ್‌ ಪ್ರೈಂನಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ ಎಂದು ಸ್ವತಃ ಪ್ರೈಂ ಅಧಿಕೃತ ಘೋಷಣೆ ಮಾಡಿದೆ.  ಸೆಪ್ಟೆಂಬರ್‌ 7ರಂದು ಅಮೆಜಾನ್‌ ಪ್ರೈಂನಲ್ಲಿ ತಮಿಳು, ತೆಲುಗು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

click me!

Recommended Stories