ಕೆಜಿಎಫ್-2 ದಾಖಲೆ ಮೇಲೆ ಕಣ್ಣಿಟ್ಟಿದ್ದ L2:ಎಂಪುರಾನ್ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್! ಮೋಹನ್‌ಲಾಲ್‌ಗೆ ಶಾಕ್!

Published : Mar 28, 2025, 06:58 PM ISTUpdated : Mar 28, 2025, 08:16 PM IST

ಕನ್ನಡಿಗ ಯಶ್ ಅವರ ಕೆಜಿಎಫ್ ಸಿನಿಮಾ ಬಾಕ್ಸ್ ಆಫೀಸ್ ದಾಖಲೆ ಮುರಿಯಲು ಕಣ್ಣಿಟ್ಟಿದ್ದ ಮೋಹನ್‌ಲಾಲ್, ಪೃಥ್ವಿರಾಜ್ ಸುಕುಮಾರನ್ ಅಭಿನಯದ L2: ಎಂಪುರಾನ್ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ. ಈ ಮೂಲಕ ಚಿತ್ರತಂಡಕ್ಕೆ ಶಾಕಿಂಗ್ ಮೇಲೆ ಶಾಕ್ ಕೊಟ್ಟಂತಾಗಿದೆ. ಸಿನಿಮಾದ ಕಲೆಕ್ಷನ್‌ಗೆ ಹೊಡೆತ ಬೀಳುತ್ತಾ ಎಂಬ ಭಯ ಶುರುವಾಗಿದೆ.  

PREV
15
ಕೆಜಿಎಫ್-2 ದಾಖಲೆ ಮೇಲೆ ಕಣ್ಣಿಟ್ಟಿದ್ದ L2:ಎಂಪುರಾನ್ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್! ಮೋಹನ್‌ಲಾಲ್‌ಗೆ ಶಾಕ್!

ಕೇರಳದಲ್ಲಿ ಕೆಜಿಎಫ್-2 ಸಿನಿಮಾದ ಫಸ್ಟ್ ಡೇ ಕಲೆಕ್ಷನ್ ವಿಚಾರದಲ್ಲಿ ಈಗಲೇ ಅತ್ಯಧಿಕ ಹಣ ಸಂಗ್ರಹಿಸಿದ ಸಿನಿಮಾಗಳಲ್ಲಿ 2ನೇ ಸ್ಥಾನದಲ್ಲಿದೆ. ಈ ದಾಖಲೆಯನ್ನು ಮೋಹನ್‌ಲಾಲ್ ಅವರ ಎಲ್‌2:ಎಂಪೂರನ್ ಸಿನಿಮಾ ಮುರಿಯಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಇದೀಗ ಮೋಹನ್‌ಲಾಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ಒಟ್ಟಿಗೆ ನಟಿಸಿದ ಎಲ್‌2:ಎಂಪುರನ್ ಸಿನಿಮಾ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ Filmyzilla, Movierulez ಹಾಗು Telegramನಂತಹ ವೆಬ್‌ಸೈಟ್‌ಗಳಲ್ಲಿ ಲೀಕ್ ಆಗಿದ್ದು, ಚಿತ್ರತಂಡಕ್ಕೆ ಶಾಕ್ ಆಗಿದೆ.

25

HD ಕ್ವಾಲಿಟಿಯಲ್ಲಿ ಲೀಕ್ ಆದ ಎಂಪುರಾನ್: ಸಿನಿಮಾ ಲೀಕ್ ಆಗದಂತೆ ಚಿತ್ರತಂಡ ಎಷ್ಟೇ ಪ್ರಯತ್ನ ಪಟ್ಟರೂ, ಎಂಪುರಾನ್ ಸಿನಿಮಾ HD ಗುಣಮಟ್ಟದಲ್ಲಿ ಕೆಲವು ವೆಬ್‌ಸೈಟ್‌ಗಳಲ್ಲಿ ಲೀಕ್ ಆಗಿದೆ. ಇದರಿಂದ ಸಿನಿಮಾದ ಕಲೆಕ್ಷನ್‌ಗೆ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ಚಿತ್ರತಂಡ ಚಿಂತಿಸುತ್ತಿದೆ.


 

35

ಎಂಪುರಾನ್ ಚಿತ್ರತಂಡದವರು ಸೈಬರ್ ಕ್ರೈಂನಲ್ಲಿ ದೂರು ದಾಖಲಿಸಿದ್ದಾರೆ. ಕಾನೂನು ಬಾಹಿರವಾಗಿ ಡೌನ್‌ಲೋಡ್ ಮಾಡುವವರನ್ನು ಪತ್ತೆಹಚ್ಚಿ, ಬಂಧಿಸುವ ಕ್ರಮ ಕೈಗೊಳ್ಳಲಾಗಿದೆ. ಕೆಲವು ವೆಬ್‌ಸೈಟ್‌ಗಳಿಂದ ಸಿನಿಮಾವನ್ನು ತೆಗೆದುಹಾಕಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಕೇರಳದಲ್ಲಿ ಯಶ್ ಕೆಜಿಎಫ್-2 ನಿರ್ಮಿಸಿದ ದಾಖಲೆ ಮುರಿಯಲು ಮೋಹನ್‌ಲಾಲ್ ಎಂಪೂರನ್ ಶತಪ್ರಯತ್ನ!

45

ಲೂಸಿಫರ್-2ನೇ ಭಾಗಎಂಪುರಾನ್: ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಎಂಪುರಾನ್ ಸಿನಿಮಾ, 2019ರಲ್ಲಿ ಮೋಹನ್‌ಲಾಲ್ ಅಭಿನಯದಲ್ಲಿ ಬಿಡುಗಡೆಯಾಗಿ ಬ್ಲಾಕ್‌ಬಸ್ಟರ್ ಹಿಟ್ ಆದ ಸಿನಿಮಾದ ಎರಡನೇ ಭಾಗ. ಇದರಲ್ಲಿ ಮೋಹನ್‌ಲಾಲ್ ಜೊತೆಗೆ ಪೃಥ್ವಿರಾಜ್, ಮಂಜು ವಾರಿಯರ್ ಮತ್ತು ಟೊವಿನೋ ಥಾಮಸ್ ನಟಿಸಿದ್ದಾರೆ. ದೊಡ್ಡ ನಿರೀಕ್ಷೆಯೊಂದಿಗೆ ಬಿಡುಗಡೆಯಾಗಿರುವ ಈ ಸಿನಿಮಾ, ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

55

ಕೆಜಿಎಫ್-2 ದಾಖಲೆ ಮುರಿದ ಎಂಪುರಾನ್: 
ಇನ್ನು ಎಲ್‌2: ಎಂಪುರಾನ್ ಸಿನಿಮಾ ಕೇರಳದಲ್ಲಿ ಈವರೆಗೆ ಸಿನಿಮಾ ಬಿಡುಗಡೆಯಾದ ಮೊದಲ ದಿನದ ಕಲೆಕ್ಷನ್ ದಾಖಲೆಗಳನ್ನು ಧೂಳಿಪಟ ಮಾಡಿದೆ. ಈ ಹಿಂದೆ ವಿಜಯ್ ಅವರ ಲಿಯೋ ತಮಿಳು ಸಿನಿಮಾ ಮೊದಲ ದಿನ 12 ಕೋಟಿ ರೂ., ಯಶ್ ನಟನೆಯ ಕೆಜಿಎಫ್-2 ಕನ್ನಡ ಸಿನಿಮಾ 7.5 ಕೋಟಿ ರೂ. ಮೊದಲ ದಿನದ ಹೈಯೆಸ್ಟ್ ಕಲೆಕ್ಷನ್ ದಾಖಲೆ ಹೊಂದಿದ್ದವು. ಆದರೆ, ಇದೀಗ ಎಲ್‌2:ಎಂಪುರಾನ್ ಸಿನಿಮಾ ಮೊದಲ ದಿನ 19 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಈ ಹಿಂದೆ ಇದ್ದ ಎಲ್ಲ ದಾಖಲೆಗಳನ್ನು ಮೀರಿಸಿದೆ.

ಇದನ್ನೂ ಓದಿ: ಕೆಜಿಎಫ್ ಸ್ಟಾರ್ ಯಶ್ 'ಯಾಣ'ಕ್ಕೆ ಹೋಗಿದ್ದೇಕೆ? ಅಲ್ಲಿ ಕಷ್ಟಕ್ಕೆ ಸಿಲುಕಿ ಒದ್ದಾಡಿದ್ದೇಕೆ...?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories