ಇನ್ನು ಕೆಲವರು ಈ ಹುಡುಗಿ ಬೇಡ ಅಂತ ನಿರ್ದೇಶಕರಿಗೆ ಸಲಹೆ ಕೊಟ್ಟೋರು ಕೂಡ ಇದ್ದಾರೆ. ನಿನಗೇನಾದರೂ ಹುಚ್ಚಾ ಇಷ್ಟು ದೊಡ್ಡ ಸಿನಿಮಾ ತೆಗೀತಾ ಇದ್ದೀಯ. ಅದರಲ್ಲಿಯೂ ಆ ಹುಡುಗಿನ ಯಾಕೆ ಇಟ್ಕೊಂಡಿದ್ದೀಯಾ ಎಂದು ಕೇಳಿದ್ದರು. ಅವಳು ಗ್ಲಾಮರ್‌ಗೆ ಮಾತ್ರ ಲಾಯಕ್, ನಟನೆಗೆ ಅಲ್ಲ ಅಂತ ಸಲಹೆ ಕೊಟ್ಟಿದ್ದರಂತೆ.
ಆದರೆ ಶ್ಯಾಮ್ ಪ್ರಸಾದ್ ರೆಡ್ಡಿ ಅವರು ನನ್ನನ್ನ ನಂಬಿದ್ದರು. ನನ್ನ ಮೇಲೆ ಈ ಚಿತ್ರ ವರ್ಕೌಟ್ ಆಗುತ್ತೆ ಅಂತ ಅವರು ಅಂದುಕೊಂಡಿದ್ದರು. ಅರುಂಧತಿ ಚಿತ್ರದವರೆಗೂ ಆಕ್ಟಿಂಗ್ ಬಗ್ಗೆ, ಗ್ರಾಫಿಕ್ಸ್ ಬಗ್ಗೆ ಜಾಸ್ತಿ ಗೊತ್ತಿರಲಿಲ್ಲ. ವಿಕ್ರಮಾರ್ಕುಡು ಚಿತ್ರದಲ್ಲಿ ರಾಜಮೌಳಿ ಅವರು ಮಾಡಿ ತೋರಿಸಿದರೆ, ಅದನ್ನ ಅದೇ ರೀತಿ ಕಾಪಿ ಮಾಡ್ತಿದ್ದೆ. ಸ್ವಂತವಾಗಿ ಆಕ್ಟ್ ಮಾಡೋದು ಗೊತ್ತಿರಲಿಲ್ಲ ಅಂತ ಅನುಷ್ಕಾ ಹೇಳಿದ್ದಾರೆ.