ಈ ಕಾರಣಕ್ಕೆ ಶಾಹಿದ್‌ ಕಪೂರ್‌‌ರನ್ನು ಬಿಡುವ ನಿರ್ಧಾರ ಮಾಡಿದ್ದರಂತೆ ಮೀರಾ ರಜಪೂತ್

Published : Jul 07, 2022, 06:20 PM IST

ಶಾಹಿದ್ ಕಪೂರ್ (Shahid Kapoor) ಮತ್ತು ಮೀರಾ ರಜಪೂತ್ (Mira Rajput)ಇಂದು ಜುಲೈ 7, 2022 ರಂದು ತಮ್ಮ ಏಳನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇಬ್ಬರ ಪ್ರೀತಿ ಮತ್ತು ದಾಂಪತ್ಯ ಜೀವನದ ಕೆಮಿಸ್ಟ್ರಿ ತುಂಬಾ ಸ್ಟ್ರಾಂಗ್ ಆಗಿದೆ. ಮೀರಾ ಮತ್ತು ಶಾಹಿದ್ ಪತಿ-ಪತ್ನಿಯಾಗಿ ಅತ್ಯಂತ ಸಂತೋಷದ ಜೀವನ ನಡೆಸುತ್ತಿದ್ದಾರೆ. ಆದರೆ ಮೀರಾ ರಜಪೂತ್ ತನ್ನ ಪತಿಯನ್ನು ಬಿಡಲು ನಿರ್ಧರಿಸಿದ ಸಂದರ್ಭವಿತ್ತು. ಇದನ್ನು ಸ್ವತಃ ಶಾಹಿದ್ ಕಪೂರ್ ಬಹಿರಂಗಪಡಿಸಿದ್ದಾರೆ. 

PREV
17
ಈ ಕಾರಣಕ್ಕೆ ಶಾಹಿದ್‌ ಕಪೂರ್‌‌ರನ್ನು ಬಿಡುವ ನಿರ್ಧಾರ ಮಾಡಿದ್ದರಂತೆ ಮೀರಾ ರಜಪೂತ್

ಉಡ್ತಾ ಪಂಜಾಬ್' ಚಿತ್ರದ ಪ್ರದರ್ಶನದ ನಂತರ, ಪತ್ನಿ ಮೀರಾ ರಜಪೂತ್ ಅವರನ್ನು ಶಾಶ್ವತವಾಗಿ ತ್ಯಜಿಸಲು ನಿರ್ಧಾರ ಮಾಡಿದ್ದರು. ಚಿತ್ರದ ಬಿಡುಗಡೆಯ ನಂತರ, ಶಾಹಿದ್ ಕಪೂರ್ ಸಂದರ್ಶನವೊಂದರಲ್ಲಿ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ
 

27

ಪತ್ನಿ ಮೀರಾ ರಜಪೂತ್, ಸಿನಿಮಾದ ಮೊದಲಾರ್ಧವನ್ನು ನೋಡಿದ ನಂತರ, ಶಾಹಿದ್‌  ನಿಜವಾಗಿಯೂ ಚಿತ್ರದ ಪಾತ್ರದಂತೆಯೇ ಇದ್ದೀರಾ ಎಂದು ಆಳುತ್ತಾ ಕೇಳಿದರು ಎಂದು ಶಾಹಿದ್‌ ಹೇಳಿದ್ದರು.  ಸಿನಿಮಾದಲ್ಲಿ ಶಾಹಿದ್ ಡ್ರಗ್ ಎಡಿಕ್ಟೆಡ್‌ ರಾಕ್‌ಸ್ಟಾರ್ ಪಾತ್ರದಲ್ಲಿದ್ದಾರೆ.


 

37

ಇನ್ನು ಮುಂದೆ ಅವನೊಂದಿಗೆ ಇರಲು ಬಯಸುವುದಿಲ್ಲ ಎಂದು ಮೀರಾ ನೇರವಾಗಿ ಹೇಳಿದ್ದಳು ಎಂದು ಶಾಹಿದ್ ತನ್ನ ಸಂದರ್ಶನದಲ್ಲಿ ಹೇಳಿದ್ದಾರೆ.  ಶಾಹಿದ್‌ ಶಾಕ್‌ ಆದರು. ಇದಾದ ನಂತರ ಮೀರಾ ಸಿನಿಮಾ ಮತ್ತು ನಿಜ ಜೀವನದ ಬಗ್ಗೆ ಬಹಳ ಹೊತ್ತು ವಿವರಿಸಬೇಕಾಯಿತು ಎಂದು ಶಾಹಿದ್ ಕಪೂರ್‌ ಹೇಳಿದ್ದಾರೆ.

47

ಮೀರಾ ಶಾಹಿದ್ ಪಾತ್ರವನ್ನು ಮಾತ್ರ ನಿರ್ವಹಿಸುತ್ತಿದ್ದಾರೆ ಎಂದು ನಂಬಲು ಸಿದ್ಧರಿರಲಿಲ್ಲ. ಅವರು ಶಾಹಿದ್ ಅವರ ನಟನೆಯನ್ನು ನಿಜವೆಂದು ಪರಿಗಣಿಸಿದರು. ಚಿತ್ರದಲ್ಲಿ ಶಾಹಿದ್ ತನ್ನ ಪಾತ್ರ ಮಾತ್ರ ಎಂದು ಮೀರಾಗೆ ಹಲವು ರೀತಿಯಲ್ಲಿ ವಿವರಿಸಿದರೂ, ನಿಜ ಜೀವನದಲ್ಲಿ ಅದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಮೀರಾರನ್ನು ಕನ್ವಿನ್ಸ್‌ ಮಾಡಿದ್ದರು.

57

ಶಾಹಿದ್ ಅವರು ತುಂಬಾ ಶಾಂತ ವ್ಯಕ್ತಿ  ಮತ್ತು  ಅವರು ಕೋಪಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ನನ್ನ ಮತ್ತು ಮೀರಾ ಮದುವೆಯ ನಂತ  'ಉಡ್ತಾ ಪಂಜಾಬ್' ತೋರಿಸಲು ಅವರನ್ನು ಕರೆದೊಯ್ದರು ಎಂದು ಹೇಳಿದರು. ಎಡಿಟಿಂಗ್ ರೂಮಿನಲ್ಲಿ ಈ ಸಿನಿಮಾವನ್ನು ನೋಡಿದ್ದಳು, ಆರಂಭದಲ್ಲಿ ಒಟ್ಟಿಗೆ ಕೂತಿದ್ದೆವು, ಆದರೆ ಇಂಟರ್ವಲ್ ಬರುವ ವೇಳೆಗೆ ಅವಳು ನನ್ನಿಂದ ಐದು ಅಡಿ ದೂರ ಹೋಗಿದ್ದಳು ಎಂದು ಶಾಹಿದ್ ವಿವರಿಸಿದ್ದಾರೆ.
 

67

ಅದರ ನಂತರ ನಾನು ಅವನನ್ನು ಕೇಳಿದೆ, 'ಏನಾಯಿತು? ಅವಳು ನನ್ನನ್ನು ನೋಡಿ  'ನೀನು ಈ ರೀತಿ ಮನುಷ್ಯನೇ? ನೀವು ಪಾತ್ರದಂತೆಯೇ ಇದ್ದೀರಾ? ನಾನು ಈ ರೀತಿ ನಿಮ್ಮೊಂದಿಗೆ ಇರಲು ಬಯಸುವುದಿಲ್ಲ ಎಂದು ಹೇಳಿದಳು ಎಂದು ಶಾಹಿದ್‌ ಬಹಿರಂಗ ಪಡಿಸಿದ್ದಾರೆ.

77

'ಇಲ್ಲ, ಇಲ್ಲ, ಅದು ಟಾಮಿ ಸಿಂಗ್. ಈ ಪಾತ್ರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು  ಆಗ ನಾನು ಅವಳಿಗೆ ಹೇಳಿದೆ. ಆಗ ತನ್ನ ಮದುವೆಯಾಗಿ  ಸ್ವಲ್ಪ ಸಮಯ ಆಗಿತ್ತು ಮತ್ತು  ಅವರು ಒಬ್ಬರಿಗೊಬ್ಬರು ಹೆಚ್ಚು ತಿಳಿದಿರಲಿಲ್ಲ ಎಂದು ಶಾಹಿದ್‌ ಇಂಟರ್‌ವ್ಯೂವ್‌ನಲ್ಲಿ ಹೇಳಿದ್ದಾರೆ.

Read more Photos on
click me!

Recommended Stories