ಸ್ಟಾರ್‌ ಕಿಡ್‌ ಆಗಿದ್ದರೂ ಕರಣ್ ಜೋಹರ್ ಬಾಲ್ಯದಲ್ಲಿ ಯಾಕೆ ಇಂಥ ಅವ್ಯವಸ್ಥೆ ಎದುರಿಸಬೇಕಾಯಿತು?

First Published Jul 7, 2022, 6:19 PM IST

ಬಾಲಿವುಡ್ ನಿರ್ದೇಶಕ-ನಿರ್ಮಾಪಕ ಕರಣ್ ಜೋಹರ್ (Karan Johar) ತಮ್ಮ ಚಾಟ್ ಶೋ ಕಾಫಿ ವಿತ್ ಕರಣ್ 7(Koffee With Karan)  ನೊಂದಿಗೆ ಪುನರಾಗಮನ ಮಾಡುತ್ತಿದ್ದಾರೆ. ಅವರ ಕಾರ್ಯಕ್ರಮ ಜುಲೈ 7 ರಿಂದ ಡಿಸ್ನಿ
ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗಲಿದೆ. ಇತ್ತೀಚೆಗಷ್ಟೇ ಕಾರ್ಯಕ್ರಮಕ್ಕೆ ಸಂಬಂಧಿಸಿದ ಕೆಲವು ಪ್ರೋಮೋಗಳೂ ಬಹಿರಂಗಗೊಂಡಿವೆ. ಈ ಪ್ರೋಮೋಗಳನ್ನು ನೋಡಿದಾಗ, ಅವರ ಕಾರ್ಯಕ್ರಮದ ಮೊದಲ ಅತಿಥಿಗಳು ರಣವೀರ್
ಸಿಂಗ್ (Ranveer Singh)  ಮತ್ತು ಆಲಿಯಾ ಭಟ್ (Alia Bhatt)  ಎಂದು ಹೇಳಲಾಗುತ್ತಿದೆ, ಏಕೆಂದರೆ ಇಬ್ಬರೂ ಅವರ ಮುಂಬರುವ ಚಿತ್ರ ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ ಕಾಣಿಸಿಕೊಳ್ಳಲಿದ್ದಾರೆ . ಸುಮಾರು 1450 ಕೋಟಿ ಆಸ್ತಿ ಹೊಂದಿರುವ 50 ವರ್ಷದ ಕರಣ್ ಅವರು ತಮ್ಮ ಚಿತ್ರದಲ್ಲಿ ಅವಕಾಶ ನೀಡುವ ಮೂಲಕ ಅನೇಕ ಹೊಸಬರಿಗೆ ವೃತ್ತಿಜೀವನವನ್ನು ಮಾಡಲು ಅವಕಾಶ ನೀಡಿದ್ದಾರೆ. ಹಲವು ಸ್ಟಾರ್ ಕಿಡ್ ಗಳ ಕೈ ಹಿಡಿದು ಅವರಿಗೆ ಹೊಸ ದಾರಿ ತೋರಿದ ಅವರು ತಾವೇ ಸ್ಟಾರ್ ಕಿಡ್ ಆಗಿದ್ದರೂ ಬಾಲ್ಯದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದಾರೆ. ಕರಣ್ ಜೋಹರ್ ಜೀವನಕ್ಕೆ ಸಂಬಂಧಿಸಿದ ಭಯಾನಕ ಸತ್ಯಗಳು ಇಲ್ಲಿವೆ.

ಕರಣ್ ಜೋಹರ್ ಚಿತ್ರರಂಗದ ಖ್ಯಾತ ನಿರ್ದೇಶಕ ಯಶ್ ಜೋಹರ್ ಅವರ ಮಗ. ಚಿಕ್ಕ ವಯಸ್ಸಿನಲ್ಲೇ ತಂದೆಯೊಂದಿಗೆ ಸಿನಿಮಾ ಸೆಟ್‌ಗೆ ಹೋಗಲು ಆರಂಭಿಸಿದ್ದರು. ಅವರು ಕುಚ್ ಕುಚ್ ಹೋತಾ ಹೈ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಅವರ ಮೊದಲ ಚಿತ್ರ ಬ್ಲಾಕ್ ಬಸ್ಟರ್ ಎಂದು ಸಾಬೀತಾಯಿತು.

ಕೆಲವು ವರ್ಷಗಳ ಹಿಂದೆ, ಕರಣ್ ಜೋಹರ್ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಬಾಲ್ಯದಲ್ಲಿ ಅವರ ಧ್ವನಿ ಮತ್ತು ಚಲನವಲನಗಳನ್ನು ಗೇಲಿ ಮಾಡುತ್ತಿದ್ದರು. ಇದರಿಂದಾಗಿ ಅವರು ಮನೆಯಿಂದ ಹೊರಗೆ ಹೋಗಲು ಹೆದರುತ್ತಿದ್ದರು ಎಂದು ಅವರು ಹೇಳಿದ್ದರು. 

Latest Videos


ಅವರ ಧ್ವನಿ ಹುಡುಗಿಯರ ಧ್ವನಿಯಂತಿದೆ ಎಂದು ಅವರೇ ಹೇಳಿದ್ದಾರೆ. ಶಾಲೆಯಿಂದ ಹಿಡಿದು ಮನೆಯಿಂದ ಹೊರಗೆ ಆಟವಾಡುವವರೆಗೆ ಮಕ್ಕಳು ಗೇಲಿ ಮಾಡುವುದರಿಂದ ಬೇಸರಗೊಳ್ಳುತ್ತಿದ್ದೆ ಎಂದು ಕರಣ್ ಜೋಹರ್ ಹೇಳಿದ್ದರು.

ನಂತರ ಕುಟುಂಬ ಸದಸ್ಯರಿಗೆ ಸುಳ್ಳು ಹೇಳಿ ತನ್ನ ಧ್ವನಿಗೆ ಚಿಕಿತ್ಸೆಗಾಗಿ ವೈದ್ಯರ ಬಳಿ ಹೋಗಲಾರಂಭಿಸಿದರು. ಅವರು ಸುಮಾರು 3 ವರ್ಷಗಳ ಕಾಲ ತರಬೇತಿ ಪಡೆದರು, ಇದು ಅವರಿಗೆ ತುಂಬಾ ನೋವಿನ ವಿಷಯವಾಗಿತ್ತು. 

ಆದರೆ ಇಂದು  ಬಾಲಿವುಡ್‌ಗೆ ಬರುವ ಪ್ರತಿಯೊಬ್ಬ ನಟನೂ ಕರಣ್  ಜೋಹರ್‌ ತನ್ನ ಪ್ರೊಡಕ್ಷನ್ ಹೌಸ್‌ನ ಬ್ಯಾನರ್ ಅಡಿಯಲ್ಲಿ ಲಾಂಚ್‌ ಮಾಡಬೇಕೆಂದು ಬಯಸುತ್ತಾನೆ.

Image: PR Agency

ಕರಣ್ ಜೋಹರ್ ಒಂದು ಚಿತ್ರವನ್ನು ನಿರ್ದೇಶಿಸಲು ಸುಮಾರು 2 ರಿಂದ 3 ಕೋಟಿ ಚಾರ್ಜ್ ಮಾಡುತ್ತಾರೆ. ಮಾಧ್ಯಮ ವರದಿಗಳ ಪ್ರಕಾರ, ಅವರು ತಿಂಗಳಿಗೆ 10 ಕೋಟಿ ಮತ್ತು ಒಂದು ವರ್ಷದಲ್ಲಿ ಸುಮಾರು 100 ಕೋಟಿ ಗಳಿಸುತ್ತಾರೆ.

ಕರಣ್ ಜೋಹರ್ ಅವರು 2010 ರಲ್ಲಿ  ಮುಂಬೈನ ಕಾರ್ಟರ್ ರಸ್ತೆಯಲ್ಲಿ ಐಷಾರಾಮಿ ಸಮುದ್ರಕ್ಕೆ ಎದುರಾಗಿರುವ ಡ್ಯುಪ್ಲೆಕ್ಸ್ ಹೌಸ್‌ ಖರೀದಿಸಿದ್ದಾರೆ. 8000 ಚದರ ಅಡಿಗಳಷ್ಟು ವಿಸ್ತಾರವಾಗಿರುವ ಈ ಡ್ಯೂಪ್ಲೆಕ್ಸ್‌ನ ಬೆಲೆ ಸುಮಾರು 32 ಕೋಟಿ ರೂ. 

ಇದಲ್ಲದೇ ಮಲಬಾರ್ ಹಿಲ್ ನಲ್ಲಿ ಸುಮಾರು 20 ಕೋಟಿ ಮೌಲ್ಯದ ಮನೆಯೂ ಇದೆ. ಕರಣ್ ಜೋಹರ್ ಅವರ ಗ್ಯಾರೇಜ್‌ನಲ್ಲಿ ಹಲವು ಐಷಾರಾಮಿ ಕಾರುಗಳನ್ನು ನಿಲ್ಲಿಸಲಾಗಿದೆ. ಅವರ ಈ ಕಾರುಗಳ ಬೆಲೆ ಕೋಟಿಗಟ್ಟಲೆ.
 

2017 ರಲ್ಲಿ, ಕರಣ್ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳ ತಂದೆಯಾದರು, ಅವರ ಹೆಸರು ಯಶ್ ಮತ್ತು ರೂಹಿ. ಸಿಂಗಲ್‌ ಫಾದರ್‌ ಕರಣ್‌ ಜೋಹರ್‌ ತಮ್ಮ ಮಕ್ಕಳನ್ನು ಸಾಕುತ್ತಿದ್ದಾರೆ.

ಅವರ ಚಿತ್ರಗಳಾದ ರಾಕಿ ಔರ್‌ ರಾಣಿ ಕಿ ಪ್ರೇಮ್‌ಕಹಾನಿ, ಬ್ರಹ್ಮಾಸ್ತ್ರ, ಲಿಗರ್, ಗೋವಿಂದ ಮೇರಾ ನಾಮ್, ಯೋದ್ಧ, ದೋಸ್ತಾನಾ 2 ಮತ್ತು ಬೇಹಡಕ್ ಮುಂಬರುವ ಸಮಯದಲ್ಲಿ ಬಿಡುಗಡೆಯಾಗಲಿವೆ. ಈ ಪೈಕಿ ಹಲವು ಚಿತ್ರಗಳ ಚಿತ್ರೀಕರಣ ಇನ್ನೂ ನಡೆಯುತ್ತಿದೆ.

click me!