Christmas lights On: ಕಿಸ್ಮಸ್ ಸಂಭ್ರಮ, ಮಗನಿಗೆ ಬೆಳಗೋ ನಕ್ಷತ್ರಗಳ ತೋರಿಸಿದ ಮೇಘನಾ

Published : Dec 21, 2021, 06:22 PM ISTUpdated : Dec 21, 2021, 06:25 PM IST

Festive lights: ನಟಿ ಮೇಘನಾ ರಾಜ್ ಮುದ್ದು ಮಗನ ಜೊತೆ ಕ್ರಿಸ್ಮಸ್ ಬೆಳಕಿನ ಸಂಭ್ರಮ ಆಸ್ವಾದಿಸುತ್ತಿದ್ದಾರೆ. ಪುಟ್ಟ ಮಗನ ಜೊತೆ ನಟಿಯ ಹಬ್ಬದ ಕಳೆ ಹೀಗಿದೆ ನೋಡಿ

PREV
15
Christmas lights On: ಕಿಸ್ಮಸ್ ಸಂಭ್ರಮ, ಮಗನಿಗೆ ಬೆಳಗೋ ನಕ್ಷತ್ರಗಳ ತೋರಿಸಿದ ಮೇಘನಾ

ನಟಿ ಮೇಘನಾ ರಾಜ್ ಸರ್ಜಾ ಅವರು ಪುತ್ರ ರಾಯನ್ ರಾಜ್ ಸರ್ಜಾ ಅವರೊಂದಿಗಿನ ಲವ್ಲೀ ಫೋಟೋ ಕ್ಲಿಕ್ ಮಾಡಿದ್ದು ಅದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ತಾಯಿ-ಮಗನ ಜೋಡಿಯು ಕ್ರಿಸ್‌ಮಸ್ ಲೈಟ್‌ಗಳನ್ನು ನೋಡಿ ಆನಂದಿಸುತ್ತಿರುವುದನ್ನು ಕಾಣಬಹುದು.

25

ಪ್ರೀತಿ.. ಜೀವನ.. ಮತ್ತು .... ಕ್ರಿಸ್ಮಸ್! ಪವಾಡ ತಿಂಗಳು ಎಂದು ನಟಿ ಕ್ಯಾಪ್ಶನ್ ಕೊಟ್ಟಿದ್ದಾರೆ. ಪುಟ್ಟ ರಾಯನ್ ತನ್ನ ತಾಯಿಯ ತೋಳುಗಳಲ್ಲಿದ್ದಾಗ ಕ್ರಿಸ್ಮಸ್ ಹಬ್ಬ ಆನಂದಿಸುತ್ತಿರುವುದನ್ನು ಕಾಣಬಹುದು. ನಟಿ ಆಗಾಗ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಪುಟ್ಟ ಕಂದನ ಜೊತೆ ಚಂದದ ಫೋಟೋ ಶೇರ್ ಮಾಡುತ್ತಿರುತ್ತಾರೆ.

35

ಮೇಘನಾ ಅವರು ಕನ್ನಡ ನಟ ಚಿರಂಜೀವಿ ಸರ್ಜಾ ಅವರೊಂದಿಗೆ 10 ವರ್ಷಗಳ ಸಂಬಂಧದ ನಂತರ 2 ಮೇ 2018 ರಂದು ಮದುವೆಯಾದರು. ದಂಪತಿಗಳು ತಮ್ಮ ಮೊದಲ ಮಗುವನ್ನು ಅಕ್ಟೋಬರ್ 22, 2020 ರಂದು ಸ್ವಾಗತಿಸಿದರು. ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ಜೂನ್ 7, 2020 ರಂದು 39 ನೇ ವಯಸ್ಸಿನಲ್ಲಿ ಮೃತಪಟ್ಟರು.

45

ಮೇಘನಾ ರಾಜ್ ಸರ್ಜಾ ತಮ್ಮ ಕೆಲಸದ ಜೀವನದ ಬಗ್ಗೆ ಮಾತನಾಡಿ, 2022 ಕ್ಕೆ ಆಸಕ್ತಿದಾಯಕ ಸಿನಿಮಾ ಶ್ರೇಣಿಯನ್ನು ಹೊಂದಿದ್ದಾರೆ. ಮೊದಲನೆಯದಾಗಿ, ಅವರು ನಿರ್ದೇಶಕ ಸಜಿನ್ ಲಾಲ್ ಅವರ ಮುಂಬರುವ ಸಿನಿಮಾ ಜೀಬ್ರಾ ವರಕಲ್‌ನ ಭಾಗವಾಗಲಿದ್ದಾರೆ. ನಟ ಶೀಲು ಅಬ್ರಹಾಂ ನಾಯಕನಾಗಿ ನಟಿಸಿರುವ ಸಿನಿಮಾ 13 ಮಾರ್ಚ್ 2022 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.

55

ಅವರು ಆರ್ ಗುರುದತ್ ನಿರ್ದೇಶನದ ನಾಗಾರ್ಜುನ ಎಂಬ ಆಕ್ಷನ್ ಚಿತ್ರದ ಭಾಗವಾಗಲಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರ ರಾವ್ ನಾಯಕನಾಗಿ ನಟಿಸುತ್ತಿದ್ದು 18 ಮಾರ್ಚ್ 2022 ರಂದು ಸಿನಿಮಾ ರಿಲೀಸ್ ಆಗಲಿದೆ. ನಟಿ ಮತ್ತೊಂದು ಪ್ರಾಜೆಕ್ಟ್ ವನ್ನೇತುಂ ಮುಂಪೆಯನ್ನು ಹೊಂದಿದ್ದಾರೆ. ಚಿತ್ರನಿರ್ಮಾಪಕ ಸುದೇವ್ ಅವರ ನೇತೃತ್ವದಲ್ಲಿ, ಸಿನಿಮಾ 23 ಅಕ್ಟೋಬರ್ 2022 ರ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಸಿನಿಮಾದಲ್ಲಿ ಶ್ರೀಜಿತ್ ವಿಜಯ್ ಸಹ ನಾಯಕನಾಗಿ ನಟಿಸಿದ್ದಾರೆ.

Read more Photos on
click me!

Recommended Stories