Oo Antava Oo Oo Antava: ಸೆಕ್ಸೀ ಆಗಿರೋದು ಹಾರ್ಡ್ ವರ್ಕ್‌ನ ನೆಕ್ಸ್ಟ್ ಲೆವೆಲ್ ಎಂದ ಸಮಂತಾ

Published : Dec 21, 2021, 12:20 PM ISTUpdated : Dec 21, 2021, 12:42 PM IST

Oo Antava Oo Oo Antava: ಸೆಕ್ಸೀ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ ಸಮಂತಾ ಬಹಳಷ್ಟು ಟೀಕೆಗಳ ಮಧ್ಯೆ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. ಟೀಕಿಸುವವರಿಗೆ ನಟಿ ಕೊಟ್ಟ ಉತ್ತರವಿದು

PREV
18
Oo Antava Oo Oo Antava: ಸೆಕ್ಸೀ ಆಗಿರೋದು ಹಾರ್ಡ್ ವರ್ಕ್‌ನ ನೆಕ್ಸ್ಟ್ ಲೆವೆಲ್ ಎಂದ ಸಮಂತಾ

ನಟಿ ಸಮಂತಾ ರುತ್ ಪ್ರಭು ಸೋಮವಾರ ತಮ್ಮ 'ಊ ಅಂತಾವಾ' ಹಾಡಿನ ಸ್ಟಿಲ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಸೆಕ್ಸಿಯಾಗಿರುವುದು ಕಠಿಣ ಕೆಲಸದ ಮುಂದಿನ ಹಂತದ ಎಂದು ನಟಿ ಬರೆದುಕೊಂಡಿದ್ದಾರೆ.

28

ಐಟಂ ಸಾಂಗ್‌ ಅಲ್ಲು ಅರ್ಜುನ್ ಅಭಿನಯದ ತೆಲುಗು ಚಿತ್ರ 'ಪುಷ್ಪ: ದಿ ರೈಸ್' ನಿಂದ ಹಿಟ್ ಆಗಿದೆ. ಈ ಹಿಂದೆ ಪುರುಷರ ಸಂಘವು ಪುರುಷರನ್ನು ಕಾಮಪ್ರಚೋದಕ ಎಂದು ಆರೋಪಿಸಿ ಹಾಡಿನ ಮೇಲೆ ನಿಷೇಧಕ್ಕೆ ಒತ್ತಾಯಿಸಿದ್ದವು.

 

38

ಈ  ಐಟಂ ಸಾಂಗ್​ಗೆ ಸಿನಿಮಂದಿಯಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಟಾಲಿವುಡ್ ನಟಿ ಸಮಂತಾ (Samantha) ನೀಲಿ ಬಣ್ಣದ ಉಡುಗೆ ತೊಟ್ಟು ಸಖತ್ ಆಗಿ ಸೊಂಟ ಬಳುಕಿಸಿದ್ದಾರೆ. ವಿಶೇಷವಾಗಿ ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಅದ್ಧೂರಿ ಸೆಟ್‌ನಲ್ಲಿ ಈ ವರ್ಷದ ರಾಕಿಂಗ್ ಹಾಡಿಗೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ಸಮಂತಾ ಹೆಜ್ಜೆ ಹಾಕಿದ್ದಾರೆ.

48

ಈ ಪೆಪ್ಪಿ ಹಾಡಿಗೆ ಬಾಲಿವುಡ್‌ನ ಹೆಸರಾಂತ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ (Ganesh Acharya) ನೃತ್ಯ ಸಂಯೋಜಿಸಿದ್ದಾರೆ. ಇಂದ್ರಾವತಿ ಚೌಹಾಣ್ (Indravathi Chauhan) ದನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಚಂದ್ರಬೋಸ್ (Chandrabose) ಸಾಹಿತ್ಯ ಬರೆದಿದ್ದಾರೆ. ದೇವಿ ಶ್ರೀ ಪ್ರಸಾದ್‌ (Devi Sri Prasad) ಸಂಗೀತದ ಕಿಕ್ ಈ ಪೆಪ್ಪಿ ಹಾಡಿಗಿದೆ.

58

ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್(Allu Arjun) ಮತ್ತು ರಶ್ಮಿಕಾ ಮಂದಣ್ಣ(Rashmika Mandanna) ಅಭಿನಯದ ಬಹುನಿರೀಕ್ಷಿತ ಸಿನಿಮಾ ಪುಷ್ಪ: ದಿ ರೈಸ್ ಡಿಸೆಂಬರ್ 17 ರಂದು ಬಿಡುಗಡೆಯಾಗಿದೆ. ಅದಕ್ಕೂ ಮುನ್ನ ಸಿನಿಮಾ ಕೆಲವು ಕೆಟ್ಟ ಕಾರಣಗಳಿಂದಾಗಿ ಈಗ ಮುಖ್ಯಾಂಶಗಳಲ್ಲಿ ಸುದ್ದಿಯಾಗಿದೆ.

68

ವರದಿಗಳ ಪ್ರಕಾರ ಪುರುಷರ ಸಂಘದಿಂದ ಸಮಂತಾ ಅವರ ಸ್ಪೆಷಲ್ ಡ್ಯಾನ್ಸ್ ನಂಬರ್ ಊ ಅಂತಾವಾ ವಿರುದ್ಧ ಕೇಸ್(Case) ದಾಖಲಿಸಲಾಗಿದೆ. ವರದಿಯ ಪ್ರಕಾರ ಅದರ ಸಾಹಿತ್ಯ ಮತ್ತು ದೃಶ್ಯಗಳ ಮೂಲಕ ಪುರುಷರನ್ನು ಕಾಮಪ್ರಚೋದಕವಾಗಿ ಚಿತ್ರಿಸುವುದಕ್ಕಾಗಿ ಹಾಡಿನ ವಿರುದ್ಧ ಮೊಕದ್ದಮೆ ಹೂಡಲಾಗಿದೆ.

78

ಪುರುಷರ ಸಂಘವು ಆಂಧ್ರಪ್ರದೇಶದ(Aandhra Pradesh) ನ್ಯಾಯಾಲಯದಲ್ಲಿ ಹಾಡನ್ನು ನಿಷೇಧಿಸುವಂತೆ ಒತ್ತಾಯಿಸಿದ್ದು, ನ್ಯಾಯಾಲಯವು ಪ್ರಕರಣವನ್ನು ಇತ್ಯರ್ಥಪಡಿಸಲು ಬಾಕಿಯಿದೆ.

88

ಇದು ಸಮಂತಾ ರುತ್ ಪ್ರಭು ಅವರ ಮೊದಲ ಸ್ಪೆಷಲ್ ಡ್ಯಾನ್ಸ್. ದುರದೃಷ್ಟವಶಾತ್, ಅದರ ಸಾಹಿತ್ಯ ಮತ್ತು ದೃಶ್ಯಗಳಿಂದಾಗಿ ಇದು ವಿವಾದಕ್ಕೆ ಸಿಲುಕಿದೆ.

Read more Photos on
click me!

Recommended Stories