ಚೆಂದ ಇಲ್ಲ ಎಂದು ಹಲವು ಬಾರಿ ರಿಜೆಕ್ಟ್ ಆಗಿದ್ರು ಈ ನಟಿ; ಒಂದೇ ಚಿತ್ರದಿಂದ ಸ್ಟಾರ್ ಆದ್ರು!

Published : May 14, 2024, 11:19 AM IST

16ನೇ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಈ ನಟಿ, 15 ವರ್ಷಗಳ ಕಾಲ ಒದ್ದಾಡಿ, ಕಡೆಗೆ ಕೇವಲ ಒಂದು ಚಿತ್ರದಿಂದ ಬಾಕ್ಸಾಫೀಸ್‌ನಲ್ಲಿ ದೀಪಿಕಾ ಪಡುಕೋಣೆ, ಆಲಿಯಾ ಭಟ್ರಂಥ ಸ್ಟಾರ್ ನಟಿಯರನ್ನೇ ಹಿಂದಿಕ್ಕಿದರು. 

PREV
113
ಚೆಂದ ಇಲ್ಲ ಎಂದು ಹಲವು ಬಾರಿ ರಿಜೆಕ್ಟ್ ಆಗಿದ್ರು ಈ ನಟಿ; ಒಂದೇ ಚಿತ್ರದಿಂದ ಸ್ಟಾರ್ ಆದ್ರು!

ಯಶಸ್ಸು ಯಾರಿಗೂ ಸುಲಭಕ್ಕೆ ಕೈಗೆಟುಕುವುದಿಲ್ಲ. ಎಲ್ಲರಿಗೂ ಯಶಸ್ಸಷ್ಟೇ ಕಾಣುತ್ತದೆ. ಅದರ ಹಿಂದೆ ವರ್ಷಗಳ ಪರಿಶ್ರಮ ಯಾರ ಕಣ್ಣಿಗೂ ಬೀಳುವುದಿಲ್ಲ. ಈ ನಟಿಯನ್ನೇ ನೋಡಿ, 16ನೇ ವಯಸ್ಸಲ್ಲೇ ಓದು ಬಿಟ್ಟು ನಟಿಯಾಗುವ ಆಸೆಗೆ ಮುಂಬೈಗೆ ಹೋದರು. 

213

ನೋಡಲು ಚೆನ್ನಾಗಿಲ್ಲ ಎಂದು ಹಲವಾರು ಆಡಿಶನ್‌ಗಳಿಂದ ಹೊರಬಿದ್ದರು. ಅಂತೂ ಮೊದಲ ಅವಕಾಶ ಹಿಟ್ ಆಯಿತು. ಆದರೆ, ನಂತರ ಬರೋಬ್ಬರಿ 15 ವರ್ಷ ಯಾವ ಚಿತ್ರದಲ್ಲಿ ಮಾಡಿದರೂ ಫ್ಲಾಪ್ ಆಗುತ್ತಲೇ ಇತ್ತು.

313

ಆದರೆ, ಕಳೆದ ವರ್ಷ ಈಕೆ ಕೊಟ್ಟ ಹಿಟ್ ಚಿತ್ರ, ಈಕೆಯ ಪಾತ್ರ, ನಟನೆ ಎಲ್ಲವೂ ಇವರನ್ನು ದೊಡ್ಡ ಸ್ಟಾರ್ ಮಾಡಿತು. ಚಿತ್ರವು ಬಾಕ್ಸಾಫೀಸಲ್ಲಿ ದೀಪಿಕಾ ಪಡುಕೋಣೆ, ಆಲಿಯಾ ಭಟ್ರಂಥ ಸ್ಟಾರ್ ನಟಿಯರ ಗೆಲುವನ್ನೇ ಹಿಂದಿಕ್ಕಿತು.  

413

ನಾವು ಮಾತಾಡುತ್ತಿರುವುದು ಅದಾ ಶರ್ಮಾ ಬಗ್ಗೆ. ಚಿತ್ರನಟಿಯಾಗಬೇಕೆಂದು ಅದಾ ಶರ್ಮಾ ತನ್ನ ಅಧ್ಯಯನವನ್ನು ತೊರೆದು 16ನೇ ವಯಸ್ಸಿಗೇ ಚಲನಚಿತ್ರಗಳಲ್ಲಿ ತನ್ನ ಅದೃಷ್ಟ ಪರೀಕ್ಷೆಗಿಳಿದಳು.
 

513

ಆದರೆ, ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ಮೊದಲು, ನಟಿ ತನ್ನ ನೋಟದಿಂದಾಗಿ ಅನೇಕ ನಿರಾಕರಣೆಗಳನ್ನು ಎದುರಿಸಿದಳು. ಯಾವ ಆಡಿಶನ್‌ಗೆ ಹೋದರೂ ನೀವು ಚೆನ್ನಾಗಿಲ್ಲ ಎನ್ನುತ್ತಿದ್ದರಂತೆ.
 

613

ಈ ಮಾತನ್ನು ಹೃದಯಕ್ಕೆ ತೆಗೆದುಕೊಂಡು ಬಹಳಷ್ಟು ಒದ್ದಾಡಿದೆ. ಆದರೆ, ಕ್ರಮೇಣ ನನಗೆ ಅರಿವಾಯಿತು- ತಿರಸ್ಕರಿಸುವವರು ಹೇಗಿದ್ದರೂ ತಿರಸ್ಕರಿಸುತ್ತಾರೆ. ಆದರೆ, ನಾನು ಪಾತ್ರಕ್ಕೆ ಯೋಗ್ಯವಾಗಿದ್ದರೆ ಲುಕ್ಸ್ ಎಲ್ಲ ಅಂಥ ದೊಡ್ಡ ವಿಷಯವಲ್ಲ ಎಂದು ಎಂದಿದ್ದಾರೆ ನಟಿ. 

713

ಹಲವಾರು ನಿರಾಕರಣೆಗಳನ್ನು ಎದುರಿಸಿದ ನಂತರ, ನಟಿ ಅಂತಿಮವಾಗಿ ವಿಕ್ರಮ್ ಭಟ್ ಅವರ 1920: ಈವಿಲ್ ರಿಟರ್ನ್ಸ್‌ನೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಇದು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಗಳಿಸಿತು ಮತ್ತು ಚಿತ್ರದಲ್ಲಿನ ಅವರ ಅಭಿನಯವು ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು.

813

ಆದಾಗ್ಯೂ, ಇದರ ನಂತರ, ಅವರ ಹೆಚ್ಚಿನ ಚಲನಚಿತ್ರಗಳಾದ ಫಿರ್, ಹಮ್ ಹೈ ರಾಹಿ ಕಾರ್ ಕೆ, ಕಮಾಂಡೋ 2, ಹಸೀ ತೋ ಫಸೀ ಮತ್ತು ಹೆಚ್ಚಿನವು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾದವು.
 

913

15 ವರ್ಷಗಳ ಕಾಲ, ಅವರು ಯಾವುದೇ ಹಿಟ್‌ಗಳನ್ನು ಹೊಂದಿರಲಿಲ್ಲ ಮತ್ತು ನಂತರ ಸುದೀಪ್ತೋ ಸೇನ್ ಅವರ 'ದಿ ಕೇರಳ ಸ್ಟೋರಿ' ಅವರ ಜೀವನವನ್ನು ಬದಲಾಯಿಸಿತು ಮತ್ತು ಅವರನ್ನು ರಾತ್ರೋರಾತ್ರಿ ಸ್ಟಾರಾಗಿ ಮಾಡಿತು.

1013
Adah Sharma

ಸುದೀಪ್ತೋ ಸೇನ್ ಅವರ ನಿರ್ದೇಶನದಲ್ಲಿ, ಕೇರಳ ಸ್ಟೋರಿ, ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ ಮತ್ತು ಸಿದ್ಧಿ ಇದ್ನಾನಿ ನಟಿಸಿದ್ದಾರೆ. ಈ ಚಿತ್ರವು 20 ಕೋಟಿ ರೂಪಾಯಿ ಬಜೆಟ್ ಹೊಂದಿದ್ದು, ವಿಶ್ವಾದ್ಯಂತ 303 ಕೋಟಿ ರೂಪಾಯಿ ಗಳಿಸಿದೆ.

1113

ಈ 1400% ಲಾಭವು ಲಾಭದ ದೃಷ್ಟಿಯಿಂದ 2023ರ ಅತಿದೊಡ್ಡ ಹಿಟ್ ಆಗಿದೆ. ಆದ್ದರಿಂದ ಬಾಕ್ಸ್ ಆಫೀಸ್‌ನಲ್ಲಿ ದೀಪಿಕಾ ಪಡುಕೋಣೆ, ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್‌ನಂತಹ ಪ್ರಮುಖ ಬಾಲಿವುಡ್ ನಟಿಯರನ್ನು ಸೋಲಿಸಿತು ಎಂದಿದ್ದು.
 

1213

ಇದರ ನಂತರ, ನಟಿ ಬಸ್ತಾರ್: ದಿ ನಕ್ಸಲ್ ಸ್ಟೋರಿ ಚಿತ್ರದಲ್ಲಿ ಕಾಣಿಸಿಕೊಂಡರು, ಅದು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಯಿತು. ನಟಿ ಸುನಿಲ್ ಗ್ರೋವರ್ ಜೊತೆಗೆ ಕಮಾಂಡೋನ ಸ್ಪಿನ್-ಆಫ್ ಸರಣಿ ಮತ್ತು ಜನಪ್ರಿಯ ಡಾರ್ಕ್ ಕಾಮಿಡಿ ಸನ್‌ಫ್ಲವರ್‌ನಲ್ಲಿ ನಟಿಸಿದ್ದಾರೆ. ನಟಿ ಪ್ರಸ್ತುತ ತನ್ನ ಮುಂದಿನ ಚಿತ್ರ ದಿ ಗೇಮ್ ಆಫ್ ಗಿರ್ಗಿಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ, ಅದು ಈ ವರ್ಷ ಬಿಡುಗಡೆಯಾಗಲಿದೆ.

1313

ಅಂದ ಹಾಗೆ ಅದಾ ಶರ್ಮಾ ನಟನೆಯ ಹೊರತಾಗಿ ಹಕ್ಕಿಗಳ ಸ್ವರವನ್ನು ಮಿಮಿಕ್ರಿ ಮಾಡುವ, ಕೇವಲ ಮೂಗಿನ ಬದಿ ಕುಣಿಸುವ, ಕೊಳಲು ನುಡಿಸುವ ವಿವಿಧ ಪ್ರತಿಭೆಯನ್ನು ಹೊಂದಿದ್ದಾರೆ. 

click me!

Recommended Stories