'ರೆಹನಾ ಹೈ ತೇರೇ ದಿಲ್ ಮೇ' ಖ್ಯಾತಿಯ ದಿಯಾ ಮಿರ್ಜಾ ತಮ್ಮ ಮಲಮಗಳೊಂದಿಗಿನ ಸಂಬಂಧದ ಬಗ್ಗೆ ಸಾಕಷ್ಟು ಅಚ್ಚರಿಯ ವಿಷಯಗಳನ್ನು ಹಂಚಿಕೊಂಡಿದ್ದಾರೆ.
2021ರಲ್ಲಿ ಉದ್ಯಮಿ ವೈಭವ್ ರೇಖಿ ಅವರೊಂದಿಗೆ ಎರಡನೇ ವಿವಾಹವಾದ ಬಾಲಿವುಡ್ ನಟಿ ದಿಯಾ ಮಿರ್ಜಾ, ವೈಭವ್ ಮೊದಲ ಪತ್ನಿಯ ಮಗಳು ಸಮೈರಾ ಜೊತೆಗಿನ ತಮ್ಮ ಸಂಬಂಧ ಹೇಗಿದೆ ಎಂದು ಹೇಳಿದ್ದಾರೆ.
14 ವರ್ಷದ ಸಮೈರಾ ತನ್ನ ಫೋನ್‌ನಲ್ಲಿ ಇಟ್ಟಿದ್ದ ಅಡ್ಡ ಹೆಸರಿನ ಬಗ್ಗೆ ದಿಯಾ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಅವರಿದನ್ನು ತಮಾಷೆಯಾಗಿ ತೆಗೆದುಕೊಂಡಿರುವುದರಿಂದ ವಿಷಯ ಹಗುರವಾಗಿದೆ.
'ದೀರ್ಘಕಾಲದವರೆಗೆ, ಸಮೈರಾ ತನ್ನ ಫೋನ್‌ನಲ್ಲಿ 'ಇನ್ನೂ ದುಷ್ಟ ಮಲತಾಯಿ ಅಲ್ಲ' ಎಂದು ನನ್ನ ಹೆಸರನ್ನು ಉಳಿಸಿಕೊಂಡಿದ್ದಾಳೆ. ಹಾಗಾಗಿ ನಾನು ಇನ್ನೂ ಮಲತಾಯಿಯಾಗುವ ಅರ್ಹತೆಯನ್ನು ಪಡೆದಿಲ್ಲ' ಎಂದು ದಿಯಾ ಹೇಳಿದ್ದಾರೆ.
ದುಷ್ಟ ಮಲತಾಯಿಯ ಪರಿಕಲ್ಪನೆಗಳೊಂದಿಗೆ ನಾನು ಎಂದಿಗೂ ಬೆಳೆದಿಲ್ಲ. ಮಗುವನ್ನು ಪ್ರೀತಿಸುವುದು ಮತ್ತು ಕಾಳಜಿ ವಹಿಸುವುದು ತುಂಬಾ ಮುಖ್ಯ ಎಂದು ನಾನು ಭಾವಿಸುತ್ತೇನೆ. ಅಂತೆಯೇ ಗೌರವಿಸುವುದು ಕೂಡಾ ಎಂದು ನಟಿ ಹೇಳಿದ್ದಾರೆ.
ದಿಯಾ ಇನ್ಸ್ಟಾ ಖಾತೆಯಲ್ಲಿ ಸಮೈರಾ ಜೊತೆಗಿನ ಸಾಕಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇಬ್ಬರೂ ಉತ್ತಮ ಬಾಂಡಿಂಗ್ ಹೊಂದಿರುವುದನ್ನು ಫೋಟೋಗಳು ಸೂಚಿಸುತ್ತವೆ. ಇನ್ನು, ದಿಯಾ ಮಗನೊಂದಿಗೆ(ಹಾಫ್ ಬ್ರದರ್) ಕೂಡಾ ಸಮೈರಾ ಸಮಯ ಕಳೆಯುತ್ತಾಳೆ.
ಇನ್ನು ಸಮೈರಾ ತನ್ನನ್ನು ಎಂದಿಗೂ ಅಮ್ಮಾ ಎಂದು ಕರೆದಿಲ್ಲ. ಹಾಗೆ ಕರೆಯಲು ಆಕೆಯ ಸ್ವಂತ ತಾಯಿ ಇದ್ದಾರೆ, ನನಗದು ಅರ್ಥವಾಗುತ್ತದೆ. ಆಕೆ ನನ್ನನ್ನು ದಿಯಾ ಎಂದೇ ಕರೆಯುತ್ತಾಳೆ ಎಂದು ನಟಿ ತಿಳಿಸಿದ್ದಾರೆ.
ಮಲಮಗಳು ದಿಯಾ ಎನ್ನುವುದನ್ನು ಕೇಳಿ ಕೆಲವೊಮ್ಮೆ ಸ್ವಂತ ಮಗ ಅವ್ಯಾನ್ ಕೂಡಾ ದಿಯಾ, ದಿಯಾ ಅಮ್ಮ ಎಂದು ಕರೆಯುತ್ತಾನೆ. ಇದು ತುಂಬಾ ತಮಾಷೆ ಎನಿಸುತ್ತದೆ ಎಂದು ನಟಿ ಬಹಿರಂಗಪಡಿಸಿದ್ದಾರೆ.
ನಟಿಗೆ 26ರೊಳಗೆ ವಿವಾಹವಾಗುವ, 30ರೊಳಗೆ ಮಗು ಹೊಂದುವ ಆಸೆ ಇತ್ತಂತೆ. ಆದರೆ, ಅಂದುಕೊಂಡಂತೆ ಯಾವುದೂ ಆಗದೆ ಸಾಕಷ್ಟು ಉದ್ವೇಗ ಅನುಭವಿಸಿದ್ದರು. ಕಡೆಗೆ 39ರಲ್ಲಿ ಮಗ ಅವ್ಯಾನ್‌ಗೆ ತಾಯಿಯಾಗುವ ಸಂದರ್ಭದಲ್ಲಿ ವಿಷಯಗಳನ್ನು ಘಟಿಸುವಂತೆಯೇ ಸ್ವೀಕರಿಸುವ ಮನಸ್ಥಿತಿ ಹೊಂದಿದ್ದಾಗಿ ಹೇಳಿದ್ದಾರೆ.