ಬಾಲಿವುಡ್ ನ ಸ್ಟಾರ್ ನಟಿ ಆಲಿಯಾ ಭಟ್ (Alia Bhatt), ತಮ್ಮ ಜೀವನದ ಹೆಚ್ಚಿನ ಸಮಯವನ್ನು ತಮ್ಮ ಫ್ಯಾಮಿಲಿ ಜೊತೆ ಕಳೆಯೋದಕ್ಕೆ ಇಷ್ಟಪಡ್ತಾರೆ. ಇವರು ಹೆಚ್ಚಾಗಿ ತಮ್ಮ ತಾಯಿ, ಸಹೋದರಿ ಅಥವಾ ಅತ್ತೆ ನೀತು ಕಪೂರ್ ಜೊತೆ ತಿರುಗಾಡೋದನ್ನು ಹಲವು ಬಾರಿ ನಾವು ನೋಡಿದ್ದೇವೆ.
ಮೇ 12 ರಂದು ವಿಶ್ವಾದ್ಯಂತ ತಾಯಂದಿರ ದಿನವನ್ನು (Mothers Day) ಆಚರಿಸಲಾಗುತ್ತದೆ. ಈ ವಿಶೇಷ ದಿನಂದದು ಹೆಚ್ಚಿನ ಎಲ್ಲಾ ಸೆಲೆಬ್ರಿಟಿಗಳು ತಮ್ಮ ತಾಯಿಯ ಫೊಟೋ ಹಾಕಿ ವಿಶೇಷ ದಿನದ ವಿಶ್ ಮಾಡಿದ್ದಾರೆ. ಆದರೆ ಆಲಿಯಾ ಭಟ್ ತಾಯಂದಿರ ವಿಶೇಷ ದಿನವನ್ನು ವಿಶೇಷವಾಗಿಯೇ ಆಚರಿಸಿದ್ದಾರೆ.
ಆಲಿಯಾ ತನ್ನ ಪತಿ ರಣಬೀರ್ ಕಪೂರ್ (Ranbeer Kapoor), ಅತ್ತೆ ನೀತು ಕಪೂರ್ (Neetu Kapoor), ತಾಯಿ ಸೋನಿ ರಜ್ದಾನ್ ಮತ್ತು ಸಹೋದರಿ ಶಾಹೀನ್ ಭಟ್ ಅವರೊಂದಿಗೆ ವಿಶೇಷ ದಿನವನ್ನು ಆಚರಿಸಿದ್ದು, ಮುದ್ದಾದ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಆಲಿಯಾ ಪೂರ್ತಿ ಫ್ಯಾಮಿಲಿ ಬಿಳಿ ಉಡುಗೆಗಳಲ್ಲಿ ಪೋಸ್ ನೀಡಿರೋದನ್ನು ಕಾಣಬಹುದು, ಸೋನಿ (Soni Ranzan)ತನ್ನ ಹೆಣ್ಣುಮಕ್ಕಳನ್ನು ಅಪ್ಪಿಕೊಂಡಿದ್ದು ಮತ್ತು ನೀತುಕಪೂರ್ ಪುತ್ರ ರಣಬೀರ್ ಜೊತೆಗೆ ಕುಳಿತು, ಒಂದು ಕೈಯಲ್ಲಿ ಬಿಳಿ ಛತ್ರಿ ಹಿಡಿದು ಮುದ್ದಾಗಿ ಸ್ಮೈಲ್ ನೀಡಿದ್ದಾರೆ.
ತಾಯಂದಿರ ದಿನದ ಈ ವಿಶೇಷ ಸಂದರ್ಭದಲ್ಲಿ ಆಲಿಯಾ ಚಿಕ್ ಬಟನ್-ಡೌನ್ ಶರ್ಟ್ ಡ್ರೆಸ್ ಧರಿಸಿದ್ದರು, ಮಿನಿಮಲ್ ಮೇಕಪ್, ಚಿನ್ನದ ಹೂಪ್ ಕಿವಿಯೋಲೆಗಳು ಮತ್ತು ಸ್ಮೂತ್ ಬನ್ ಹೇರ್ ಸ್ಟೈಲ್ ಲುಕ್ ನಲ್ಲಿ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ಗುಸ್ಸಿಯ ಮೊದಲ ಕ್ರೂಸ್ ಕಲೆಕ್ಷನ್ ನಲ್ಲಿ ಭಾಗವಹಿಸಲು ಲಂಡನ್‌ಗೆ ತೆರಳಿರುವ ಮೊದಲು ಆಲಿಯಾ ತಮ್ಮ ತಾಯಂದಿರ ದಿನಾಚರಣೆಯ ವಿಶೇಷ ಸೆಲೆಬ್ರೇಷನ್ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮುದ್ದಾದ ಫೋಟೋದ ಜೊತೆ ಆಲಿಯಾ 'ಅಮೂಲ್ಯವಾದ ವ್ಯಕ್ರಿಗಳ ಜೊತೆ ಪ್ರೀಷಿಯಸ್ ಕ್ಷಣಗಳು' (precious moments with my precious ones ) ಎಂದು ಫೋಟೋಗೆ ಶೀರ್ಷಿಕೆ ನೀಡಿದ್ದಾರೆ. ಆಲಿಯಾ ಭಟ್ ಅವರ ಈ ಮುದ್ದಾದ ಫ್ಯಾಮಿಲಿ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ತಾಯಂದಿರ ದಿನದ ವಿಶೇಷ ಸೆಲೆಬ್ರೇಷನ್‌ಗೂ ಮೊದಲು, ಆಲಿಯಾ ತನ್ನ ತಾಯಿ ಸೋನಿಗೆ ಹೂಗುಚ್ಛವನ್ನು ನೀಡಿ ಸರ್ಫ್ರೈಸ್ ಕೂಡ ಮಾಡಿದ್ದರು, ಅವರು ಹೂವುಗಳ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಬ್ಲೆಸ್ಡ್’ ಎಂದು ಬರೆದಿದ್ದಾರೆ. ನೀತು ತನ್ನ ಮಗಳು ರಿದ್ಧಿಮಾ ಕಪೂರ್ ಸಾಹ್ನಿ ಮತ್ತು ಮೊಮ್ಮಗಳು ಸಮರಾ ಅವರಿಂದ ಪಡೆದ ಪ್ರೀತಿ ತುಂಬಿದ ನೋಟ್ ಗಳ ಬಗ್ಗೆಯೂ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.