ಇಹಲೋಕ ತ್ಯಜಿಸಲು ಒಲ್ಲದ ತಂದೆಗೆ ದೇಹ ಬಿಟ್ಟು ಹೊರಡುವಂತೆ ಮನವಿ ಮಾಡಿದ್ದ ಮನೋಜ್ ಬಾಜಪೇಯಿ!

First Published | May 13, 2024, 2:44 PM IST

ಬಾಲಿವುಡ್‌ನ ರಾಷ್ಟ್ರಪ್ರಶಸ್ತಿ ವಿಜೇತ ನಟ ಮನೋಜ್ ಬಾಜಪೇಯಿ ತಮ್ಮ ತಂದೆಯ ಅಂತಿಮ ಕ್ಷಣಗಳ ಬಗ್ಗೆ ಮಾತಾಡಿದ್ದಾರೆ. ತಾವು ಅವರಿಗೆ ದೇಹ ಬಿಟ್ಟು ಹೊರಡಲು ಮನವಿ ಮಾಡುವವರೆಗೂ ಅವರು ಭೂಮಿಯಿಂದ ನಿರ್ಗಮಿಸಲು ಸಿದ್ಧರಿರಲಿಲ್ಲ ಎಂದಿದ್ದಾರೆ ಮನೋಜ್.

ಮನೋಜ್ ಬಾಜಪೇಯಿ ತಮ್ಮ ವಿಶಿಷ್ಠ ನಟನಾ ಕೌಶಲ್ಯದಿಂದ ಬಾಲಿವುಡ್‌ನಲ್ಲಿ ಸ್ಥಾನ ಕಂಡುಕೊಂಡವರು. ಚಿಕ್ಕ ಪಾತ್ರಗಳಿಂದಲೇ ಆರಂಭಿಸಿ ರಾಷ್ಟ್ರಪ್ರಶಸ್ತಿ ವಿಜೇತ ನಟನಾಗುವವರೆಗೆ, ಜನಪ್ರಿಯ ವೆಬ್‌ಸರಣಿ 'ಫ್ಯಾಮಿಲಿ ಮ್ಯಾನ್' ಮುಖ್ಯಪಾತ್ರಧಾರಿಯಾಗುವವರೆಗೆ ಮನೋಜ್ ನಟನಾ ಯಾತ್ರೆ ರೋಚಕವಾಗಿದೆ.

2021ರಲ್ಲಿ ಅವರು ಆರು ತಿಂಗಳ ಅವಧಿಯಲ್ಲಿ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡರು. ತಂದೆಯೊಂದಿಗೆ ಬಹಳ ಭಾವನಾತ್ಮಕ ಸಲುಗೆ ಹೊಂದಿದ್ದ ಮನೋಜ್, ಅವರಿಗೆ ಸಾಯುವ ಹಂತದಲ್ಲಿ ದೇಹವನ್ನು ಬಿಟ್ಟು ಹೊರಡುವಂತೆ ಬೇಡಿಕೊಂಡಿದ್ದರಂತೆ! ಹೌದು, ಈ ಬಗ್ಗೆ ಸ್ವತಃ ನಟ ಹಂಚಿಕೊಂಡಿದ್ದಾರೆ.

Tap to resize

ಮನೋಜ್ ಬಾಜಪೇಯಿ ತಂದೆ ಆರ್.ಕೆ.  ಅಕ್ಟೋಬರ್ 2021 ರಲ್ಲಿ ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು. ಆ ಸಮಯದಲ್ಲಿ ಕಿಲ್ಲರ್ ಸೂಪ್ ಎಂಬ ಹಾಸ್ಯ ಸರಣಿಗೆ ಮನೋಜ್ ಕೆಲಸ ಮಾಡುತ್ತಿದ್ದರು. 

ಚಿತ್ರೀಕರಣದಲ್ಲಿದ್ದಾಗ ಒಮ್ಮೆ ಅವರ ಸಹೋದರಿ ಕರೆ ಮಾಡಿ ತಂದೆಯ ಸ್ಥಿತಿಯ ಬಗ್ಗೆ ತಿಳಿಸಿದರು.ಆರ್‌ಕೆ ಬಾಜಪೇಯಿ ಅವರು ಈಗಾಗಲೇ ತಮ್ಮ ಜೀವನದ ಅಂತ್ಯವನ್ನು ತಲುಪಿದ್ದಾರೆಂದು ವೈದ್ಯರು ಕುಟುಂಬಕ್ಕೆ ತಿಳಿಸಿದ್ದರು. ಆದರೆ ಅವರು ನಿರ್ಗಮಿಸಲು ಸಿದ್ಧರಿರಲಿಲ್ಲ ಎಂದು ಮನೋಜ್ ಉಲ್ಲೇಖಿಸಿದ್ದಾರೆ.
 

ಈ ಸಂದರ್ಭದಲ್ಲಿ ತಂದೆಗೆ ಕರೆ ಮಾಡಿ ಮಾತನಾಡಿದ ಮನೋಜ್, 'ಅಪ್ಪಾ ನೀವು ಹೊರಡಿ' ಎಂದು ಬೇಡಿಕೊಂಡರಂತೆ. ಹಾಗೆ ಹೇಳಿದ ಮರುದಿನವೇ ಅವರು ಇಹಲೋಕ ತ್ಯಜಿಸಿದರು. 

ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯನ್ನು ನೋವಿನಿಂದ ಮುಕ್ತಗೊಳಿಸುವುದು ಮನೋಜ್ ಉದ್ದೇಶವಾಗಿತ್ತು. 'ನನ್ನನ್ನು ನೋಡುವ ಉದ್ದೇಶದಿಂದ ಅವರು ಜೀವ ಇಟ್ಟುಕೊಂಡು ಕಾಯುತ್ತಿದ್ದರು. ನಾನು ಮಾತಾಡಿದ್ದನ್ನು ಕೇಳಿದ ನಂತರ ಜೀವ ತೊರೆದರು' ಎಂದು ಮನೋಜ್ ಹೇಳಿದ್ದಾರೆ. 
 

ತಂದೆಯ ನಿಧನದ ಬಳಿಕ, ಟ್ವೀಟ್ ಮಾಡಿದ್ದ ಮನೋಜ್, 'ನನ್ನ ತಂದೆಯ ದುಃಖದ ನಿಧನದ ಬಗ್ಗೆ ಪ್ರಾರ್ಥನೆ ಮತ್ತು ಪ್ರೀತಿಯನ್ನು ಕಳುಹಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ನಾನು ಕನಸು ಕಂಡಿದ್ದೆಲ್ಲವನ್ನೂ ಪಡೆಯುವ ಪ್ರಯಾಣದಲ್ಲಿ ನನ್ನ ಏಕೈಕ ಬೆಂಬಲ ಅವರಾಗಿದ್ದರು' ಎಂದಿದ್ದರು.

'ಅತ್ಯುತ್ತಮ ನಟ' ಎಂಬ ರಾಷ್ಟ್ರಪ್ರಶಸ್ತಿ ಪಡೆವಾಗಲೂ ತಂದೆತಾಯಿ ಇಲ್ಲದೆ ತಾವು ಏಕಾಂಗಿತನ ಅನುಭವಿಸುತ್ತಿರುವುದಾಗಿ ಹೇಳಿದ್ದರು. 

Latest Videos

click me!