ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮೊದಲ ಚಿತ್ರವೇ ಸೂಪರ್ ಹಿಟ್ ಆಗಿರುವುದರಿಂದ ಆರಾಧನಾ ಅವರಿಗೆ ಈಗ ಬೇಡಿಕೆ ಹೆಚ್ಚಿದೆ. ಮಾಲಾಶ್ರೀ ಅವರಂತೆಯೇ ಇವರು ಕೂಡ ದೊಡ್ಡ ಮಟ್ಟದ ಸ್ಟಾರ್ ಆಗಿ ಬೆಳೆಯುತ್ತಾರೆ ಎಂಬ ವಿಶ್ವಾಸ ಅಭಿಮಾನಿಗಳಲ್ಲಿದೆ. ಸೋಷಿಯಲ್ ಮೀಡಿಯಾದಲ್ಲಿ ಆರಾಧನಾ ಹಂಚಿಕೊಂಡಿರುವ ಈ ಬರ್ತ್‌ಡೇ ಪೋಸ್ಟ್‌ಗೆ ಅಭಿಮಾನಿಗಳು ಮತ್ತು ಸ್ಯಾಂಡಲ್‌ವುಡ್‌ನ ಗಣ್ಯರು ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.
"ನಿಮ್ಮ ನಗು ಹೀಗೆಯೇ ಸದಾ ಇರಲಿ", "ಮಾಲಾಶ್ರೀ ಮಗಳಾಗಿ ನೀವು ಚಿತ್ರರಂಗದಲ್ಲಿ ದೊಡ್ಡ ಇತಿಹಾಸ ಸೃಷ್ಟಿಸಿ" ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ, ಪ್ರೀತಿಪಾತ್ರರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಆರಾಧನಾ ಅವರಿಗೆ ಈ ವರ್ಷವು ಸಿನಿಮೀಯವಾಗಿ ಮತ್ತಷ್ಟು ಯಶಸ್ಸು ತರಲಿ ಎಂಬುದು ಎಲ್ಲರ ಆಶಯ. ಅಂದಹಾಗೆ, ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ಮೂಲಕ ಮತ್ತೆ ತೆರೆಯ ಮೇಲೆ ಸದ್ಯದಲ್ಲೇ ಬರಲಿದ್ದಾರೆ ಮಾಲಾಶ್ರೀ ಮಗಳು ಆರಾಧನಾ ರಾಮ್!