'ಬಟ್ಟೆ ಕಳಚು, ದೇಹ ತೋರಿಸು ಅಂದಿದ್ದ..' ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ಡಾಲಿ ಧನಂಜಯ ಹೀರೋಯಿನ್‌!

Published : Feb 04, 2026, 09:48 PM IST

ನಟಿ ಐಶ್ವರ್ಯಾ ರಾಜೇಶ್ ತಮ್ಮ ವೃತ್ತಿಜೀವನದ ಆರಂಭದಲ್ಲಿ ಎದುರಿಸಿದ ಲೈಂಗಿಕ ಕಿರುಕುಳದ ಘಟನೆಯನ್ನು ಹಂಚಿಕೊಂಡಿದ್ದಾರೆ. ಆಡಿಷನ್ ವೇಳೆ ಛಾಯಾಗ್ರಾಹಕರೊಬ್ಬರು ಬಟ್ಟೆ ಕಳಚಿ ದೇಹ ತೋರಿಸುವಂತೆ ಕೇಳಿದ್ದ ಕಹಿ ಅನುಭವವನ್ನು ಅವರು ವಿವರಿಸಿದ್ದಾರೆ. 

PREV
17

ದಕ್ಷಿಣ ಭಾರತದ ಚಿತ್ರರಂಗದ ಪ್ರತಿಭಾವಂತ ನಟಿಯರಲ್ಲಿ ಒಬ್ಬರಾದ ಐಶ್ವರ್ಯಾ ರಾಜೇಶ್, ಸದ್ಯ ಸಾಲು ಸಾಲು ಸಿನಿಮಾಗಳ ಮೂಲಕ ಬ್ಯುಸಿಯಾಗಿದ್ದಾರೆ. ಆದರೆ, ಗ್ಲಾಮರ್ ಲೋಕದ ಈ ಯಶಸ್ಸಿನ ಹಿಂದೆ ಅಷ್ಟೇ ಕರಾಳ ಹಾದಿಯಿದೆ ಎಂಬುದನ್ನು ನಟಿ ಇತ್ತೀಚಿನ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ.

27

ಚಿತ್ರರಂಗಕ್ಕೆ ಕಾಲಿಟ್ಟ ಆರಂಭದ ದಿನಗಳಲ್ಲಿ ತಾನು ಎದುರಿಸಿದ ಕಹಿ ಅನುಭವ ಹಾಗೂ ಲೈಂಗಿಕ ಕಿರುಕುಳದ (Casting Couch) ಘಟನೆಯನ್ನು ಅವರು ವಿವರಿಸಿದ್ದಾರೆ.

47

ಸಂದರ್ಶನದಲ್ಲಿ ಆ ಘಟನೆಯನ್ನು ನೆನಪಿಸಿಕೊಂಡ ಅವರು, "ನಾನು ಆಗತಾನೆ ಇಂಡಸ್ಟ್ರಿಗೆ ಬಂದಿದ್ದೆ, ತುಂಬಾ ಚಿಕ್ಕ ಹುಡುಗಿ. ಒಮ್ಮೆ ಶೂಟಿಂಗ್ ಅಥವಾ ಆಡಿಷನ್ ಸಂದರ್ಭದಲ್ಲಿ ನಾನು ನನ್ನ ಸಹೋದರನನ್ನು ಜೊತೆಗೆ ಕರೆದುಕೊಂಡು ಹೋಗಿದ್ದೆ' ಎಂದು ಆ ದಿನವನ್ನು ನೆನಪಿಸಿಕೊಂಡಿದ್ದಾರೆ.

57

'ಅಲ್ಲಿನ ಛಾಯಾಗ್ರಾಹಕ (Cameraman) ನನ್ನ ಸಹೋದರನನ್ನು ಹೊರಗೆ ಕುಳಿತುಕೊಳ್ಳಲು ಹೇಳಿದ. ನಂತರ ನನ್ನನ್ನು ಮಾತ್ರ ಒಳಗೆ ಕರೆದುಕೊಂಡು ಹೋಗಿ, ಬಟ್ಟೆ ಕಳಚಿ ದೇಹವನ್ನು ತೋರಿಸುವಂತೆ ಕೇಳಿದ," ಎಂದು ಹೇಳಿದ್ದಾರೆ.

67

ಆ ವಯಸ್ಸಿನಲ್ಲಿ ತನಗೆ ಚಿತ್ರರಂಗದ ಕೆಲಸದ ರೀತಿ ಅರ್ಥವಾಗುತ್ತಿರಲಿಲ್ಲ, ಆದರೆ ಆ ವ್ಯಕ್ತಿಯ ಬೇಡಿಕೆ ತಪ್ಪು ಎಂಬುದು ತಕ್ಷಣ ಮನವರಿಕೆಯಾಯಿತು ಎಂದು ಹೇಳಿದ್ದಾರೆ. ಇಂತಹ ಸವಾಲುಗಳನ್ನು ಮೀರಿ ನಿಂತ ಐಶ್ವರ್ಯಾ, ಇಂದು ತಮ್ಮ ನಟನಾ ಕೌಶಲ್ಯದಿಂದಲೇ ಗುರುತಿಸಿಕೊಂಡಿದ್ದಾರೆ.

77

ಕಹಿ ಘಟನೆಗಳನ್ನು ಮೆಟ್ಟಿನಿಂತು 'ಕಾಕಾ ಮುಟ್ಟೈ', 'ಕಾನಾ' ಅಂತಹ ಸಿನಿಮಾಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ಐಶ್ವರ್ಯಾ ರಾಜೇಶ್ ಕೈಯಲ್ಲಿ ಈಗ ಹಲವು ಕುತೂಹಲಕಾರಿ ಸಿನಿಮಾಗಳಿವೆ. ಕನ್ನಡದಲ್ಲಿ ಅವರು ಡಾಲಿ ಧನಂಜಯ ಅವರ ಉತ್ತರಕಾಂಡ ಸಿನಿಮಾದಲ್ಲಿ ದುರ್ಗಿ ಪಾತ್ರದಲ್ಲಿ ನಟಿಸುತ್ತಿದ್ದು, ಚಿತ್ರದ ಶೂಟಿಂಗ್‌ ತಡವಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories