ಸಮಂತಾಯಿಂದ ಮಲೈಕಾ ಅರೋರಾವರೆಗೆ ವಿಚ್ಛೇದನ ಆರೋಪ ಎದುರಿಸುತ್ತಿರುವ ನಟಿಯರಿವರು

Published : Mar 01, 2023, 05:52 PM IST

ಮನರಂಜನಾ ಉದ್ಯಮದಲ್ಲಿ ಮದುವೆಗಳು ಮುರಿದು ಬೀಳುತ್ತಿವೆ. ಮದುವೆಗಳು ವಿಫಲವಾದಾಗ ಅವರ ವಿಚ್ಛೇದನಗಳು ಸಖತ್‌ ಸದ್ದು ಮಾಡುತ್ತವೆ. ಸಮಾಜ ಮತ್ತು ನೆಟಿಜನ್‌ಗಳು ನಟಿಯರನ್ನು ಡಿವೋರ್ಸ್‌ಗೆ ಕಾರಣ ಎಂದು ದೂಷಿಸುತ್ತಾರೆ. ಈ ರೀತಿ ಮಲೈಕಾ ಅರೋರಾದಿಂದ ಕಲ್ಕಿ ಕೊಚ್ಲಿನ್ ವರೆಗೆ ಮುಂತಾದ  ಹಲವು ನಟಿಯರು  ವಿಚ್ಛೇದನದ ಅರೋಪ ಎದುರಿಸಿದ ಪಟ್ಟಿ ಇಲ್ಲಿದ್ದಾರೆ.

PREV
15
ಸಮಂತಾಯಿಂದ  ಮಲೈಕಾ ಅರೋರಾವರೆಗೆ ವಿಚ್ಛೇದನ ಆರೋಪ ಎದುರಿಸುತ್ತಿರುವ  ನಟಿಯರಿವರು
Image: Google

ಮಲೈಕಾ ಅರೋರಾ: ಬಾಲಿವುಡ್‌ ದಿವಾ ಮಲೈಕಾ ಅರೋರಾ ತಮ್ಮ ಹದಿನೆಂಟು ವರ್ಷಗಳ ವೈವಾಹಿಕ ಜೀವನದ  ನಂತರ ಪತಿ ಅರ್ಬಾಜ್ ಖಾನ್‌ನಿಂದ ಬೇರ್ಪಟ್ಟಿದ್ದಕ್ಕಾಗಿ ಆಗಾಗ್ಗೆ ಟ್ರೋಲ್‌ಗೆ ಒಳಗಾಗುತ್ತಾರೆ ಮತ್ತು ನಿಂದಿಸಲ್ಪಡುತ್ತಾರೆ. ಇವರಿಬ್ಬರು ಅರ್ಹಾನ್‌ಗೆ ಪೋಷಕರು. ಮಲೈಕಾ ಡಿವೋರ್ಸ್‌ಗೂ ಮೊದಲು ಅರ್ಬಾಜ್‌  ಕುಟುಂಬದ ಹೆಸರು ಮತ್ತು ಖ್ಯಾತಿಯನ್ನು ಬಳಸಿಕೊಂಡಿದ್ದಾರೆ ಎಂದು ನೆಟಿಜನ್‌ಗಳು ಆರೋಪಿಸಿದ್ದಾರೆ. ಮಲೈಕಾ ಸದ್ಯಕ್ಕೆ ಅರ್ಜುನ್ ಕಪೂರ್ ಜೊತೆ ಸಂಬಂಧದಲ್ಲಿದ್ದಾರೆ.

25
Image: Google

ಕಲ್ಕಿ ಕೋಚ್ಲಿನ್: ನಟಿ ಕಲ್ಕಿ ಕೊಚ್ಲಿನ್ ಅನುರಾಗ್ ಕಶ್ಯಪ್ ಅವರಿಂದ ದೂರವಾದರು ಮತ್ತು ಜನರು ವಿಚ್ಛೇದನಕ್ಕೆ ನಟಿ ಕಾರಣ ಎಂದು ಅರೋಪಿಸಿದರು. ಆದರೆ ಚಿತ್ರ ನಿರ್ಮಾಪಕರು ಅವಳ ಬೆಂಬಲಕ್ಕೆ ನಿಂತರು. ಪ್ರಸ್ತುತ ಕಲ್ಕಿ ಮತ್ತು ಗೈ ಹರ್ಷ್‌ಬರ್ಗ್ ಅವರು ಸಫೊ ಎಂಬ ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ.

35
Image: Google

ಸುಸೇನ್ ಖಾನ್: ಹೃತಿಕ್ ರೋಷನ್ ಮತ್ತು  ಪತ್ನಿ ಸುಸ್ಸಾನ್‌ ಖಾನ್ ಅವರ ವಿವಾಹ ಮುರಿದುಬಿದ್ದಿದ್ದಕ್ಕಾಗಿ ಸುಸೇನ್‌ ಅವರನ್ನು ದೂಷಿಸಲಾಯಿತು ಮತ್ತು ಟ್ರೋಲ್ ಮಾಡಲಾಯಿತು. ಇಬ್ಬರು ಗಂಡುಮಕ್ಕಳಿಗೆ ಪೋಷಕಾರಗಿದ್ದಾರೆ. ಪ್ರಸ್ತುತ ಸುಸೇನ್‌ ಅರ್ಸ್ಲಾನ್ ಗೋನಿ ಅವರೊಂದಿಗೆ ಸಂಬಂಧದಲ್ಲಿದ್ದರೆ, ಹೃತಿಕ್ ಸಬಾ ಆಜಾದ್ ಅವರನ್ನು ಪ್ರೀತಿಸುತ್ತಿದ್ದಾರೆ.

45

ಸಮಂತಾ ರೂತ್ ಪ್ರಭು: ದಕ್ಷಿಣ ಇಂಡಸ್ಟ್ರಿ ದಿವಾ ಸಮಂತಾ ರುತ್ ಪ್ರಭು ಅವರು  ಪತಿ ನಾಗ ಚೈತನ್ಯ ಅವರಿಂದ ಬೇರೆಯಾಗಲು ನಿರ್ಧರಿಸಿದರು. ಇಬ್ಬರೂ ತಮ್ಮ ವಿಚ್ಛೇದನವನ್ನು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದರು. ಮಾಧ್ಯಮಗಳಲ್ಲಿ ಊಹಾಪೋಹಗಳು ಹರಿದಾಡಿದವು ಮತ್ತು ನಟಿ 250 ಕೋಟಿ ರೂಪಾಯಿ ಜೀವನಾಂಶವನ್ನು ಕೇಳಿದ್ದಾರೆ ಎಂದು ಹೇಳಲಾಗಿದೆ. ಜನರು ಈ  ಪ್ರತ್ಯೇಕತೆಗೆ ಸಮಂತಾ ಅವರನ್ನು ದೂಷಿಸಿದರು.

55
Image: Google

ಅಮೃತಾ ಸಿಂಗ್: ಬಾಲಿವುಡ್ ನಟಿ ಅಮೃತಾ ಸಿಂಗ್ ಅವರು ಸೈಫ್ ಅಲಿ ಖಾನ್‌ನಿಂದ ಬೇರ್ಪಟ್ಟ ನಂತರ ಸಮಾಜ ನಟಿಯನ್ನು ದೂಷಿಸಿತ್ತು. ಇಬ್ಬರು ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್ ಅವರ ಪೋಷಕರು. ಸೈಫ್ ಈಗ ಕರೀನಾ ಕಪೂರ್ ಖಾನ್ ಅವರನ್ನು  ಮದುವೆಯಾಗಿದ್ದಾರೆ ಮತ್ತು ತೈಮೂರ್ ಮತ್ತು ಜೆಹ್ ಅವರ ಪೋಷಕರಾಗಿದ್ದಾರೆ.


 

Read more Photos on
click me!

Recommended Stories