Pushpa 2: ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ ಸಿಹಿ ಸುದ್ದಿ; ಈ ದಿನ ಪುಷ್ಪ 2 ಫಸ್ಟ್ ಲುಕ್‌ ಬಿಡುಗಡೆ

Published : Mar 01, 2023, 05:34 PM IST

ಸೌತ್ ಸ್ಟಾರ್ ಅಲ್ಲು ಅರ್ಜುನ್ (Allu Arjun)  ಈ ದಿನಗಳಲ್ಲಿ ತಮ್ಮ ಬಹು ನಿರೀಕ್ಷಿತ ಚಿತ್ರ ಪುಷ್ಪ: ದಿ ರೂಲ್ (Pushpa: The Rule) ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ನಿರ್ದೇಶಕ ಸುಕುಮಾರ್ ನಿರ್ದೇಶನದ ಸೀಕ್ವೆಲ್ ಈ ವರ್ಷದ ಕೊನೆಯಲ್ಲಿ ಚಿತ್ರಮಂದಿರಗಳಿಗೆ ಬರಲಿದೆ. ಈಗ ಏಪ್ರಿಲ್ 8 ರಂದು ಪುಷ್ಪ 2 ರ ಮೊದಲ ನೋಟವನ್ನು ನೋಡಬಹುದು ಎಂದು ವರದಿಗಳು ಹೇಳುತ್ತಿವೆ.

PREV
19
Pushpa 2: ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ ಸಿಹಿ ಸುದ್ದಿ; ಈ ದಿನ ಪುಷ್ಪ 2 ಫಸ್ಟ್ ಲುಕ್‌ ಬಿಡುಗಡೆ

ದಕ್ಷಿಣ ಚಿತ್ರರಂಗದ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಏಪ್ರಿಲ್ 8 ರಂದು ತಮ್ಮ 41 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ವರದಿಗಳ ಪ್ರಕಾರ ಪುಷ್ಪಾ: ದಿ ರೂಲ್ ಸಿನಿಮಾದ   ಫಸ್ಟ್ ಲುಕ್ ಅವರ ಹುಟ್ಟುಹಬ್ಬದಂದು ಬಹಿರಂಗಗೊಳ್ಳುವ ಸಾಧ್ಯತೆಯಿದೆ. 

29

ಏಪ್ರಿಲ್‌ 8 ರಂದು ಅಲ್ಲು ಅರ್ಜುನ್ ಹುಟ್ಟುಹಬ್ಬ ಇರುವುದರಿಂದ ಅವರ ಅಭಿಮಾನಿಗಳು ಈ ದಿನಕ್ಕಾಗಿ  ಕಾತರದಿಂದ ಕಾಯುತ್ತಿದ್ದಾರೆ.  ಅವರ ಹುಟ್ಟುಹಬ್ಬದ ದಿನವೇ ಪುಷ್ಪಾ 2 ಚಿತ್ರದ ಝಲಕ್ ಬಿಡುಗಡೆಯಾದರೆ  ಅವರ ಅಭಿಮಾನಿಗಳಿಗೆ ಡಬಲ್ ಧಮಾಕಾ. 

39

ಪ್ರಸ್ತುತ ಶೂಟಿಂಗ್‌ ಶೆಡ್ಯೂಲ್‌ ಮುಗಿಸಿದ ನಂತರ  ಅಲ್ಲೂ ಅರ್ಜುನ್‌ ಅವರು  ತಮ್ಮ ಕುಟುಂಬದ ಜೊತೆ ರಜೆಗಾಗಿ ರಾಜಸ್ಥಾನಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ.

49

ಅಲ್ಲು ಅರ್ಜುನ್ ಅವರ ಚಿತ್ರ ಪುಷ್ಪ 2 ಅನ್ನು ತಯಾರಕರು ದೊಡ್ಡ ಮಟ್ಟದಲ್ಲಿ ಸಿದ್ಧಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರದ ಬಜೆಟ್ ಕೂಡ ಹೆಚ್ಚಾಗಿದ್ದು ಈಗ 450 ಕೋಟಿಗೆ ತಯಾರಾಗುತ್ತಿದೆ.

59

ವರದಿಗಳನ್ನು ನಂಬುವುದಾದರೆ, ಅಲ್ಲು ಅರ್ಜುನ್ ಈಗ ತಮ್ಮ ಕುಟುಂಬದೊಂದಿಗೆ ರಜೆಯನ್ನು ಕಳೆದ ನಂತರ ಚಿತ್ರದ ಚಿತ್ರೀಕರಣವನ್ನು ಪುನರಾರಂಭಿಸಲು ಸಜ್ಜಾಗುತ್ತಿದ್ದಾರೆ.

69

ಪುಷ್ಪಾ 2 ರ ತಯಾರಕರು ಅಲ್ಲು ಅವರ ಹುಟ್ಟುಹಬ್ಬದಂದು ಚಿತ್ರದ ಫರ್ಸ್ಟ್‌ ಲುಕ್‌ ಬಹಿರಂಗಪಡಿಸಲು ಸಜ್ಜಾಗುತ್ತಿದ್ದಾರೆ. ಪುಷ್ಪ 2 ಒಂದು ಸಾಹಸ ಡ್ರಾಮಾವಾಗಿದ್ದು, ಸುಕುಮಾರ್ ಬರೆದು ನಿರ್ದೇಶಿಸಿದ್ದಾರೆ, ಅಲ್ಲು ಅರ್ಜುನ್, ಫಹದ್ ಫಾಸಿಲ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೊದಲ ಭಾಗ ಎಲ್ಲಿ ಕೊನೆಗೊಂಡಿತೋ ಅಲ್ಲಿಂದ 2ನೇ ಭಾಗ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ.

79

ಅಲ್ಲು ಅರ್ಜುನ್ ಅವರ ಚಿತ್ರ ಪುಷ್ಪ ದಿ ರೈಸ್ ಡಿಸೆಂಬರ್ 2021 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಮತ್ತು ಚಿತ್ರಮಂದಿರಗಳಲ್ಲಿ ಭಾರೀ ಸದ್ದು ಮಾಡಿತ್ತು. ದಕ್ಷಿಣದ ಜೊತೆಗೆ ಹಿಂದಿಯಲ್ಲೂ ಚಿತ್ರ ಸೂಪರ್‌ ಹಿಟ್ ಆಗಿತ್ತು 

89

ಚಿತ್ರವು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 350 ಕೋಟಿ ರೂ  ಕಲೆಕ್ಷನ್‌ ಮಾಡಿತ್ತು.. ಮೊದಲ ಭಾಗಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಬಂದ ನಂತರ, ನಿರ್ಮಾಪಕರು ಎರಡನೇ ಭಾಗವನ್ನು ದೊಡ್ಡ ಮಟ್ಟದಲ್ಲಿ ಮಾಡಲು ನಿರ್ಧರಿಸಿದ್ದಾರೆ. 

99

ಇದರಲ್ಲಿ ರಾಮ್ ಚರಣ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ಪುಷ್ಪಾ ಪಾತ್ರದ  ಬಾಲ್ಯ, ಮಲ-ಸಹೋದರಿಯರು ಮತ್ತು ತಂದೆಯೊಂದಿಗಿನ ಸಂಬಂಧವನ್ನು ಸಹ ಚಿತ್ರದಲ್ಲಿ ತೋರಿಸಲಾಗುತ್ತದೆ.

Read more Photos on
click me!

Recommended Stories