ಬಿಲೇನಿಯರ್​ಗಳಿಗೂ ಆಂಟಿಗಳೇ ಏಕೆ? 19 ವರ್ಷ ಹಿರಿಯ ಮಲೈಕಾ ಜೊತೆ ರೋಮ್​ನಲ್ಲಿ ವಜ್ರದ ವ್ಯಾಪಾರಿ ರೊಮಾನ್ಸ್​!

Published : Feb 22, 2026, 12:15 PM IST

ನಟ ಅರ್ಜುನ್ ಕಪೂರ್ ಜೊತೆಗಿನ ಸಂಬಂಧ ಮುರಿದುಕೊಂಡಿರುವ ಮಲೈಕಾ ಅರೋರಾ, ಇದೀಗ ತಮಗಿಂತ 19 ವರ್ಷ ಚಿಕ್ಕವರಾದ ವಜ್ರದ ವ್ಯಾಪಾರಿ ಹರ್ಷ್ ಮೆಹ್ತಾ ಜೊತೆ ಕಾಣಿಸಿಕೊಂಡಿದ್ದಾರೆ.  ಇಟಲಿಯ ರೋಮ್‌ನಲ್ಲಿ  ರೊಮ್ಯಾಂಟಿಕ್ ಕ್ಷಣಗಳನ್ನು ಕಳೆಯುತ್ತಿರುವ ಫೋಟೋಗಳು ವೈರಲ್ ಆಗಿವೆ.

PREV
16
ಧಾರಾಳ ದೇಹ ಪ್ರದರ್ಶನ

ಬಾಲಿವುಡ್ ನಟಿ ಮಲೈಕಾ ಅರೋರಾ ಕೆಲ ತಿಂಗಳ ಹಿಂದೆ 52ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆದರೆ ಎರಡು ವರ್ಷ ಚಿಕ್ಕವಳಂತೆ ತೋರಿಸಲು ಕೇಕ್​ ಮೇಲೆ 50 ಎಂದು ಬರೆದು ಟ್ರೋಲ್​ ಆಗಿದ್ದೂ ಇದೆ. ಅದೇನೇ ಇದ್ದರೂ, ಮಲೈಕಾ ವಯಸ್ಸು ಇಷ್ಟಾದರೂ ಫಿಟ್​ನೆಸ್​ಗೆ ತುಂಬಾ ಮಹತ್ವ ಕೊಡುತ್ತಾರೆ. ಸೌಂದರ್ಯ ಎಂದರೇನೇ ಎದೆಯ ಧಾರಾಳ ಪ್ರದರ್ಶನ ಎಂದುಕೊಂಡಿರುವ ಸೆಲೆಬ್ರಿಟಿಗಳೇ ಹೆಚ್ಚು. ಅದರಂತೆಯೇ ತಮ್ಮ ದೇಹವನ್ನು ಪ್ರದರ್ಶನ ಮಾಡುತ್ತಲೇ ತಾನಿನ್ನೂ ಯಂಗ್​ ಎಂದು ತೋರಿಸಿಕೊಳ್ಳುವಲ್ಲಿ ಮಲೈಕಾ ಮುಂದು.

26
ಮಲೈಕಾ- ಅರ್ಜುನ್​ ಕಪೂರ್​ ಬಿರುಕು

ನಟ ಅರ್ಬಾಜ್​ ಖಾನ್​ ಜೊತೆ ಡಿವೋರ್ಸ್​ ಪಡೆದ ಬಳಿಕ ತಮಗಿಂತ 12 ವರ್ಷ ಚಿಕ್ಕವನಾಗಿರುವ ನಟ ಅರ್ಜುನ್​ ಕಪೂರ್​ ಜೊತೆ ಹತ್ತು ವರ್ಷಕ್ಕೂ ಅಧಿಕ ಕಾಲ ಸಂಬಂಧದಲ್ಲಿ ಇದ್ದವರು ಮಲೈಕಾ. ದೇಶ-ವಿದೇಶ ಪ್ರಯಾಣ ಮಾಡುತ್ತಾ ಮೋಜು, ಮಸ್ತಿ ಮಾಡಿಕೊಂಡಿದ್ದರು. ಕೆಲ ತಿಂಗಳ ಹಿಂದೆ ಇವರ ಸಂಬಂಧದಲ್ಲಿ ಬಿರುಕು ಬಿಟ್ಟಿದೆ.

36
ರೋಮ್​ನಲ್ಲಿ ರೊಮಾನ್ಸ್​

ಇದೀಗ ಮಲೈಕಾಗೆ ಸಿಕ್ಕಿದ್ದು 19 ವರ್ಷ ಚಿಕ್ಕ ವಜ್ರದ ವ್ಯಾಪಾರಿ ಹರ್ಷ್ ಮೆಹ್ತಾ. 52ನೇ ವಯಸ್ಸಿನಲ್ಲಿ ಈಗ ಹರ್ಷ್​ ಜೊತೆ ಮಲೈಕಾ ಹರ್ಷದಿಂದ ಸುತ್ತಾಡುತ್ತಿದ್ದಾರೆ. ಇಟಲಿಯ ರೋಮ್‌ನಲ್ಲಿ ವಜ್ರದ ವ್ಯಾಪಾರಿ ಹರ್ಷ್ ಮೆಹ್ತಾ ಅವರೊಂದಿಗೆ ಮಲೈಕಾ ರಜೆಯಲ್ಲಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಚಿತ್ರಗಳು ರೋಮ್‌ನ ಐತಿಹಾಸಿಕ ಬೀದಿಗಳು ಮತ್ತು ಐಕಾನಿಕ್ ಸ್ಥಳಗಳ ಅದ್ಭುತ ಹಿನ್ನೆಲೆಯಲ್ಲಿ ಇಬ್ಬರೂ ಪ್ರಣಯ ಕ್ಷಣಗಳನ್ನು ಆನಂದಿಸುತ್ತಿರುವುದನ್ನು ತೋರಿಸುತ್ತವೆ.

46
ಫ್ಯಾನ್ಸ್​ ಅಚ್ಚರಿ

ಇದು ಅವರ ಮೊದಲ ಸಾರ್ವಜನಿಕ ಪ್ರಣಯ ಫೋಟೋ ಎಂದು ಹೇಳಲಾಗುತ್ತಿದೆ, ಇದು ಅಭಿಮಾನಿಗಳಲ್ಲಿ ಕುತೂಹಲವನ್ನು ಹುಟ್ಟುಹಾಕಿದೆ. ಆದಾಗ್ಯೂ, ಮಲೈಕಾ ಅಥವಾ ಹರ್ಷ್ ಇಬ್ಬರೂ ಇಲ್ಲಿಯವರೆಗೆ ತಮ್ಮ ಸಂಬಂಧದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಅದರ ಹೊರತಾಗಿಯೂ, ವೈರಲ್ ಚಿತ್ರಗಳು ಆನ್‌ಲೈನ್‌ನಲ್ಲಿ ಬಲವಾದ ಸಂಚಲನವನ್ನು ಸೃಷ್ಟಿಸುತ್ತಿವೆ.

56
ಹಿಂದೆಯೂ ಕಾಣಿಸಿಕೊಂಡ ಜೋಡಿ

ಈ ಹಿಂದೆ ಮುಂಬೈನಲ್ಲಿ ನಡೆದ ಎನ್ರಿಕ್ ಇಗ್ಲೇಷಿಯಸ್ ಅವರ ಕನ್ಸರ್ಟ್ ನಲ್ಲಿ ಮಲೈಕಾ ಅರೋರಾ ಬಿಳಿ ಟ್ಯಾಂಕ್ ಟಾಪ್ ಮತ್ತು ನೀಲಿ ಶಾರ್ಟ್ಸ್‌ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ಅದರ ಜೊತೆಗೆ ಮಲೈಕಾ ಜೊತೆಗಿದ್ದ ಬಿಳಿ ಶರ್ಟ್ ಧರಿಸಿದ ವ್ಯಕ್ತಿ ಎಲ್ಲರ ಗಮನ ಸೆಳೆದರು, ಅವರು ಮಲೈಕಾ ಜೊತೆ ಮಾತನಾಡುತ್ತಾ, ಅವರ ಜೊತೆ ಆತ್ಮೀಯವಾಗಿರೋದು ಕಂಡು ಬಂದಿತ್ತು.

66
ನಿಜವಾಯ್ತು ರೂಮರ್ಸ್​

ಮಲೈಕಾ ಅರೋರಾ ಮತ್ತು ಈ ವ್ಯಕ್ತಿ ಇಡೀ ಕಾರ್ಯಕ್ರಮವನ್ನು ಒಟ್ಟಿಗೆ ವೀಕ್ಷಿಸಿದ್ದು ಮಾತ್ರವಲ್ಲದೆ, ಕಾರ್ಯಕ್ರಮ ಮುಗಿದ ನಂತರವೂ ಒಟ್ಟಿಗೆ ಕಾಣಿಸಿಕೊಂಡರು. ಹಾಗಾಗಿ ಇವರು ಮಲೈಕಾ ಅರೋರಾ ಹೊಸ ಬಾಯ್ ಫ್ರೆಂಡ್ ಎನ್ನುವ ರೂಮರ್ಸ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದೀಗ ಇಬ್ಬರೂ ರೋಮ್​ನಲ್ಲಿ ಸುತ್ತಾಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories