pop singer Shakira : ಗ್ಲೋಬಲ್ ಪಾಪ್ ಐಕಾನ್ ಶಕೀರಾ ಭಾರತಕ್ಕೆ ಬರ್ತಿದ್ದಾರೆ. ದೆಹಲಿ, ಮುಂಬೈ ಶೋ ಡೇಟ್ ಫಿಕ್ಸ್ ಆಗಿದ್ದು, ಬೆಂಗಳೂರಿನಲ್ಲೂ ಅವ್ರ ಲೈವ್ ಶೋ ನಡೆಯೋ ಸಾಧ್ಯತೆ ಇದೆೆ . ಅಭಿಮಾನಿಗಳು ಕುಣಿಸಲು ಬರ್ತಿರುವ ಶಕೀರಾ ಶೋ ಡಿಟೇಲ್ ಇಲ್ಲಿದೆ.
ವಾಕಾ ವಾಕಾ ಹಾಡು ಕೇಳ್ತಿದ್ದಂತೆ ಕೈ ಕಾಲು ಕುಣಿಯೋಕೆ ಶುರುವಾಗುತ್ತೆ. 2010ರಲ್ಲಿ ಬಿಡುಗಡೆಯಾದ ವಾಕಾ ವಾಕಾ ದಿಸ್ ಇಸ್ ಟೈಮ್ ಫರ್ ಸೌತ್ ಆಫ್ರಿಕಾ ಸಾಂಗ್ ಮೂಲಕ ಇಡೀ ವಿಶ್ವವನ್ನೇ ಶಕೀರಾ ಕುಣಿಸಿದ್ದಾರೆ. ಪಾಪ್ ಸಿಂಗರ್ ಹಾಗೂ ಡಾನ್ಸರ್ ಶಕೀರಾ ಫ್ಯಾನ್ಸ್ ಗೆ ಈಗ ಖುಷಿ ಸುದ್ದಿ ಒಂದಿದೆ. 19 ವರ್ಷಗಳ ನಂತ್ರ ಪಾಪ್ ಸಿಂಗರ್ ಶಕೀರಾ ಭಾರತಕ್ಕೆ ಬರ್ತಿದ್ದಾರೆ.
26
ಭಾರತಕ್ಕೆ ಶಕೀರಾ
ಗ್ಲೋಬಲ್ ಪಾಪ್ ಐಕಾನ್ ಮತ್ತು ಅನೇಕ ಬಾರಿ ಗ್ರ್ಯಾಮಿ ಪ್ರಶಸ್ತಿ ಪಡೆದಿರುವ ಶಕೀರಾಗೆ ವಿಶ್ವಾದ್ಯಂತ ಕೋಟ್ಯಾಂತರ ಫ್ಯಾನ್ಸ್ ಇದ್ದಾರೆ. ಭಾರತದಲ್ಲೂ ಶಕೀರಾ ಹವಾ ಇದೆ. ಶಕೀರಾ ಹಾಡಿಗೆ ಭಾರತೀಯರು ಹುಚ್ಚೆದ್ದು ಕುಣಿತಾರೆ. ತಮ್ಮ ಧ್ವನಿ, ಸ್ಟೈಲ್ ಹಾಗೂ ಡಾನ್ಸ್ ಮೂಲಕ ಲಕ್ಷಾಂತರ ಮಂದಿ ನಿದ್ದೆ ಗೆಡಿಸುವ ಶಕೀರಾ ಬ್ಯೂಟಿಫುಲ್ ಸಿಂಗರ್. ಶಕೀರಾ ಅವ್ರನ್ನು ಲೈವ್ ನಲ್ಲಿ ನೋಡ್ಬೇಕು ಅನ್ನೋರಿಗೆ ಈಗ ಅವಕಾಶ ಸಿಗ್ತಿದೆ. ಪಾಪ್ ಸಿಂಗರ್ ಶಕೀರಾ ಭಾರತಕ್ಕೆ ಬರ್ತಿದ್ದಾರೆ.
36
ಶಕೀರಾ ಲೈವ್ ಶೋ
ಮೊದಲೇ ಹೇಳಿದಂಗೆ ಶಕೀರಾ 19 ವರ್ಷಗಳ ನಂತ್ರ ಭಾರತಕ್ಕೆ ಬರ್ತಿದ್ದಾರೆ. ಏಪ್ರಿಲ್ 10 ರಂದು ಮುಂಬೈನ ಮಹಾಲಕ್ಷ್ಮಿ ರೇಸ್‌ಕೋರ್ಸ್‌ನಲ್ಲಿ ಅವರ ಲೈವ್ ಶೋ ನಡೆಯಲಿದೆ. ಅಲ್ದೆ ಏಪ್ರಿಲ್ 15 ರಂದು ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಲೈವ್ ಶೋ ನೋಡೋ ಅವಕಾಶ ಸಿಗ್ತಿದೆ. ಬೆಂಗಳೂರಿನಲ್ಲೂ ಅವ್ರ ಲೈವ್ ಶೋ ನಡೆಯಲಿದೆ ಎನ್ನಲಾಗ್ತಿದ್ದು, ಇನ್ನೂ ಡೇಟ್ ಅನೌನ್ಸ್ ಆಗಿಲ್ಲ.
ಫೀಡಿಂಗ್ ಇಂಡಿಯಾ, ಡಿಸ್ಟ್ರಿಕ್ಟ್ ಬೈ ಝೊಮಾಟೊ ಈ ಕಾರ್ಯಕ್ರಮ ಆಯೋಜಿಸಿದೆ. ಫೀಡಿಂಗ್ ಇಂಡಿಯಾ ಹಸಿವು ಮತ್ತು ಅಪೌಷ್ಟಿಕತೆಯ ವಿರುದ್ಧದ ಹೋರಾಟವನ್ನು ಎತ್ತಿ ತೋರಿಸುವ ಸಂಸ್ಥೆಯಾಗಿದೆ. ಶಕೀರಾ ಕಾರ್ಯಕ್ರಮದ ಬಗ್ಗೆ ಫೀಡಿಂಗ್ ಇಂಡಿಯಾ ಮತ್ತು ಡಿಸ್ಟ್ರಿಕ್ಟ್ ಝೊಮಾಟೊ ಮಾಹಿತಿ ನೀಡಿದೆ. ಶಕೀರಾ ಭಾರತಕ್ಕೆ ಬರ್ತಾನೆ ಎನ್ನುವ ಸುದ್ದಿ ಫ್ಯಾನ್ಸ್ ಗೆ ಖುಷಿ ನೀಡಿದೆ. ಶಕೀರಾ ಪ್ರೋಗ್ರಾಂ ನೋಡಲು ಕಾತುರರಾಗಿರೋದಾಗಿ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.
56
ಟಿಕೆಟ್ ಎಲ್ಲಿ ಸಿಗಲಿದೆ ?
ಸೋಶಿಯಲ್ ಮೀಡಿಯಾದಲ್ಲಿ ಶಕೀರಾ ಆಗಮನದ ಬಗ್ಗೆ ಪೋಸ್ಟ್ ಹಾಕಲಾಗಿದ್ದು, ಶಕೀರಾ ಶಕೀರಾ, ದ ವೈಸ್, ದ ಮೂವ್ಜ್ ಅಂತ ಶೀರ್ಷಿಕೆ ಹಾಕಲಾಗಿದೆ. ಇದನ್ನು ನೋಡಿದ ಫ್ಯಾನ್ಸ್ ಟಿಕೆಟ್ ಎಲ್ಲಿ ಸಿಗಲಿದೆ ಅಂತ ಪ್ರಶ್ನೆ ಮಾಡ್ತಿದ್ದಾರೆ. HSBC ಕ್ರೆಡಿಟ್ ಕಾರ್ಡ್ ಹೊಂದಿರುವವರು ಫೆಬ್ರವರಿ 27 ರಂದು ಮಧ್ಯಾಹ್ನ 12 ಗಂಟೆಯಿಂದ ಮಾರ್ಚ್ 1 ರಂದು ಮಧ್ಯಾಹ್ನ 12 ಗಂಟೆಯವರೆಗೆ 48 ಗಂಟೆಗಳ ಮುಂಚಿತವಾಗಿ ಟಿಕೆಟ್ ಪಡೆಯಬಹುದು. ಸಾಮಾನ್ಯ ಟಿಕೆಟ್ ಮಾರಾಟ ಮಾರ್ಚ್ 1 ರಂದು ಮಧ್ಯಾಹ್ನ 1 ಗಂಟೆಯಿಂದ ಶುರುವಾಗಲಿದೆ.
66
2007 ರಲ್ಲಿ ಭಾರತಕ್ಕೆ ಬಂದಿದ್ದ ಶಕೀರಾ
ಶಕೀರಾ ಈ ಹಿಂದೆ 2007 ರಲ್ಲಿ ಭಾರತದಲ್ಲಿ ಲೈವ್ ಶೋ ನೀಡಿದ್ದರು.19 ವರ್ಷಗಳ ನಂತರ ಅವರು ಮತ್ತೊಮ್ಮೆ ಭಾರತಕ್ಕೆ ಬರ್ತಿದ್ದಾರೆ. ಶಕೀರಾ ಹಿಪ್ಸ್ ಡೋಂಟ್ ಲೈ, ವೆನ್ ಎವರ್, ವೇರ್ ಮತ್ತು ವಾಕಾ ವಾಕಾ ನಂತಹ ಹಿಟ್ ಹಾಡುಗಳನ್ನು ಇಂಡಸ್ಟ್ರಿಗೆ ನೀಡಿದ್ದಾರೆ. ಶಕೀರಾ ಹಾಡೋದು ಮಾತ್ರವಲ್ಲ ಸಮಾಜಸೇವೆಯಲ್ಲೂ ಪ್ರಸಿದ್ಧಿ ಪಡೆದಿದ್ದಾರೆ. ಶಕೀರಾ ಬೇರ್‌ಫೂಟ್ ಫೌಂಡೇಶನ್ ಮೂಲಕ ಜನಸೇವೆ ಮಾಡ್ತಿದ್ದಾರೆ. 2030 ರ ವೇಳೆಗೆ ಯುಎನ್‌ನ ಶೂನ್ಯ ಹಸಿವು ಗುರಿಯನ್ನು ಬೆಂಬಲಿಸಲು ಅವರು ಲೈವ್ ಶೋ ನೀಡ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.