ಸೊಂಟ ಮುರಿದು ಹೋಗಿದ್ಯಾ, ಹೀಗ್ ಯಾಕೆ ನಡೆಯುತ್ತಿದ್ದಾರೆ; ಬ್ಯಾಕ್‌ಲೆಸ್ ಡ್ರೆಸ್‌ ಧರಿಸಿದ ಮಲೈಕಾ ಸಖತ್ ಟ್ರೋಲ್

Published : Nov 07, 2022, 03:25 PM IST

ಬಾಲಿವುಡ್ ನಟಿ ಮಲೈಕಾ ಅರೋರಾ ಸದಾ ಸುದ್ದಿಯಲ್ಲಿರುತ್ತಾರೆ. ಮಲೈಕಾ ಇತ್ತೀಚಿಗೆ ಸಿನಿಮಾಗಳಲ್ಲಿ ಮಿಂಚಿದ್ದು ತೀರಾ ಕಡಿಮೆ. ಆದರೆ ತನ್ನ ಸ್ಟೈಲಿಶ್ ಲುಕ್ ಮತ್ತು ಬಾಯ್ ಫ್ರೆಂಡ್ ವಿಚಾರವಾಗಿ ಹೆಚ್ಚು ಸುದ್ದಿಯಲ್ಲಿರುತ್ತಾರೆ. 

PREV
17
ಸೊಂಟ ಮುರಿದು ಹೋಗಿದ್ಯಾ, ಹೀಗ್ ಯಾಕೆ ನಡೆಯುತ್ತಿದ್ದಾರೆ; ಬ್ಯಾಕ್‌ಲೆಸ್ ಡ್ರೆಸ್‌ ಧರಿಸಿದ ಮಲೈಕಾ ಸಖತ್ ಟ್ರೋಲ್

ಬಾಲಿವುಡ್ ನಟಿ ಮಲೈಕಾ ಅರೋರಾ ಸದಾ ಸುದ್ದಿಯಲ್ಲಿರುತ್ತಾರೆ. ಮಲೈಕಾ ಇತ್ತೀಚಿಗೆ ಸಿನಿಮಾಗಳಲ್ಲಿ ಮಿಂಚಿದ್ದು ತೀರಾ ಕಡಿಮೆ. ಆದರೆ ತನ್ನ ಸ್ಟೈಲಿಶ್ ಲುಕ್ ಮತ್ತು ಬಾಯ್ ಫ್ರೆಂಡ್ ವಿಚಾರವಾಗಿ ಹೆಚ್ಚು ಸುದ್ದಿಯಲ್ಲಿರುತ್ತಾರೆ. ತನ್ನ ಸ್ಟೈಲಿಶ್ ಡ್ರೆಸ್ ವಿಚಾರಕ್ಕೆ ಆಗಾಗ ಟ್ರೋಲಿಗೆ ಗುರಿಯಾಗುತ್ತಿರುತ್ತಾರೆ. 

27

ಇದೀಗ ಮಲೈಕಾ ಮತ್ತೆ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ. ಇತ್ತೀಚಿಗಷ್ಟೆ ಬ್ಯಾಕ್ ಲೆಸ್ ಡ್ರೆಸ್ ನಲ್ಲಿ ಮಲೈಕಾ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಬ್ಯಾಕ್ ಲೆಸ್ ಡ್ರೆಸ್ ಧರಿಸಿದ್ದ ಮಲೈಕಾ ಕಾಮ್ಯರಾ ಕಣ್ಣಿಗೆ ಸೆರೆಯಾಗಿದ್ದಾರೆ. ಮಲೈಕಾ ಬ್ಯಾಕ್ ಲೆಸ್ ಡ್ರೆಸ್ ಧರಿಸಿ ವಾಕ್ ಮಾಡಿದ ವಿಡಿಯೋ ನೋಡಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. 
 

37

ಮಲೈಕಾ ಅವರ ನಡಿಗೆ ಈಗಾಗಲೇ ಅನೇಕ ಬಾರಿ ಟ್ರೋಲ್ ಆಗಿದೆ. ಡಕ್ ವಾಕ್ ಅಂತನೆ ಕರೆಯುತ್ತಾರೆ. ಆದರೀಗ ನೆಟ್ಟಿಗರು ಸೊಂಟ ಮುರಿದು ಹೋಗಿದ್ಯ, ಹೀಗ್ಯಾಕೆ ನಡೆಯುತ್ತಿದ್ದಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಬಟ್ಟೆಯ ವಿಚಾರಕ್ಕೂ ಮಲೈಕಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ ನೆಟ್ಟಿಗರು. 

47

ಮಲೈಕಾ ಧರಿಸಿದ್ದು ಏನು? ಎಂದು ಮತ್ತೋರ್ವರು ಕಾಮೆಂಟ್ ಮಾಡಿದ್ದಾರೆ. ಆದರೆ ಮಲೈಕಾ ಅಭಿಮಾನಿಗಳು ಹಾರ್ಟ್ ಇಮೋಜಿ ಹಾಕಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಮಲೈಕಾ ಸದಾ ಜಿಮ್, ವರ್ಕೌಟ್ ಅಂತ ಬ್ಯುಸಿಯಾಗಿರುತ್ತಾರೆ. ಜಿಮ್‍ಗೆ ಬರುವ ಮಲೈಕಾ ವಿಡಿಯೋ ಆಗಾಗ ವೈರಲ್ ಆಗುತ್ತಿರುತ್ತದೆ. 

57

ದಿನಂಪ್ರತಿ ಪಾಪರಾಜಿಗಳ ಕ್ಯಾಮರಾಗೆ ಸೆರೆಯಾಗುವ ಮಲೈಕಾ ಸ್ಟೈಲಿಸ್ ಲುಕ್ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಅಂದಹಾಗೆ ಹಾಟ್ ನಟಿ ಸದಾ ಜಿಮ್ ವರ್ಕೌಟ್ ಅಂತ ಓಡುತ್ತಿರುತ್ತಾರೆ. ಜಿಮ್ ಸೂಟ್‌ನಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ ಮಲೈಕಾ ಇದೀಗ ಬ್ಯಾಕ್ ಲೆಸ್ ಡ್ರೆಸ್ ನಲ್ಲಿ ಮಿಂಚಿದ್ದಾರೆ. 

67

ದಿನದಿಂದ ದಿನಕ್ಕೆ ಸಖತ್ ಹಾಟ್ ಆಗುತ್ತಿರುವ ಮಲೈಕಾ ಯುವತಿಯರೆ ನಾಚುವಂತೆ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ. ಮಲೈಕಾ ಪತಿಯಿಂದ ದೂರ ಆದ ಬಳಿಕ ಬಾಲಿವುಡ್ ಮತ್ತೋರ್ವ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್‌ನಲ್ಲಿದ್ದಾರೆ. ಇಬ್ಬರ ರೊಮ್ಯಾಂಟಿಕ್ ಫೋಟೋಗಳು, ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ.  

77

ಅರ್ಜುನ್ ಮತ್ತು ಮಲೈಕಾ ಇಬ್ಬರೂ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಕಳೆದ ಕೆಲವು ವರ್ಷಗಳಿಂದ ಕೇಳಿಬರುತ್ತಿದೆ, ಆದರೆ ಇನ್ನು ಮದುವೆಯಾಗಿಲ್ಲ.  ಸದಾ ಜೊತೆಯಲ್ಲೇ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿರುತ್ತಾರೆ. 
 

Read more Photos on
click me!

Recommended Stories