ಮದುವೆಯಾದ 7 ತಿಂಗಳಿಗೆ ತಾಯಿಯಾದ Alia Bhatt, ಅತ್ತೆ ನೀತು ಕಪೂರ್‌ಗಿಂತ ಫಾಸ್ಟ್‌

Published : Nov 07, 2022, 10:15 AM ISTUpdated : Apr 23, 2025, 03:16 PM IST

ಬಾಲಿವುಡ್ ಜನಪ್ರಿಯ ನಟಿ ಆಲಿಯಾ ಭಟ್ (Alia Bhatt) ತಾಯಿಯಾಗಿದ್ದಾರೆ. ಅವರು ನವೆಂಬರ್ 6 ರಂದು ಮುಂಬೈನ ಆಸ್ಪತ್ರೆಯೊಂದರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು.  ಆಲಿಯಾ ಭಟ್ ಅವರು ಬಾಲಿವುಡ್ ನಟ ಮತ್ತು ದೀರ್ಘಕಾಲದ ಗೆಳೆಯ ರಣಬೀರ್ ಕಪೂರ್ (Ranbir Kapoor) ಅವರನ್ನು 14 ಏಪ್ರಿಲ್ 2022 ರಂದು ವಿವಾಹವಾದರು. ಮದುವೆಯಾದ ಕೇವಲ 6  ತಿಂಗಳಲ್ಲಿಯೇ ತಾಯಿಯಾಗಿದ್ದಾರೆ. ಅದೇ ರೀತಿ ಆಲಿಯಾರ ಪತಿ ರಣಬೀರ್‌ ಕಪೂರ್‌ ಅವರ  ತಾಯಿ Neetu Kapoor ಮದುವೆಯಾಗಿ  9 ತಿಂಗಳಲ್ಲಿ ತನ್ನ ಮೊದಲ ಮಗುವಿಗೆ ಜನ್ಮ ನೀಡಿದ್ದರು. 

PREV
16
ಮದುವೆಯಾದ 7 ತಿಂಗಳಿಗೆ ತಾಯಿಯಾದ Alia Bhatt, ಅತ್ತೆ  ನೀತು ಕಪೂರ್‌ಗಿಂತ ಫಾಸ್ಟ್‌

1980 ರ ಜನವರಿ 22 ರಂದು ನಟ ರಿಷಿ ಕಪೂರ್ ಅವರನ್ನು ವಿವಾಹವಾದಾಗ ನೀತು ಕಪೂರ್ ಅವರಿಗೆ 22 ವರ್ಷ ಆಗಿರಲಿಲ್ಲ. ಮದುವೆಯಾದ ಸುಮಾರು 6 ತಿಂಗಳ ನಂತರ 8 ಜುಲೈ 1980 ರಂದು ಅವರು ತಮ್ಮ 22 ನೇ ಹುಟ್ಟುಹಬ್ಬವನ್ನು ಆಚರಿಸಿದರು ಮತ್ತು ಸುಮಾರು ಎರಡೂವರೆ ತಿಂಗಳ ನಂತರ 15 ಸೆಪ್ಟೆಂಬರ್ 1980 ರಂದು ಅವರು ಮಗಳು ರಿದ್ಧಿಮಾಗೆ ಜನ್ಮ ನೀಡಿದರು.

26

ರಿದ್ಧಿಮಾ ಮತ್ತು ಅವರ ಕಿರಿಯ ಸಹೋದರ ರಣಬೀರ್ ವಯಸ್ಸಿನ ವ್ಯತ್ಯಾಸ ಕೇವಲ 2 ವರ್ಷಗಳು. ನೀತು ತನ್ನ 23ನೇ ಹುಟ್ಟುಹಬ್ಬವನ್ನು ಆಚರಿಸಿದ ನಂತರ ಮತ್ತೆ ಗರ್ಭಿಣಿಯಾದರು. ತಮ್ಮ 24 ನೇ ಹುಟ್ಟುಹಬ್ಬವನ್ನು ಆಚರಿಸಿದ ಎರಡು ತಿಂಗಳ ನಂತರ, ನೀತು 28 ಸೆಪ್ಟೆಂಬರ್ 1982 ರಂದು ರಣಬೀರ್ ಕಪೂರ್‌ಗೆ ಜನ್ಮ ನೀಡಿದರು.


 

36

ರಣಬೀರ್ ಕಪೂರ್ 39 ನೇ ವಯಸ್ಸಿನಲ್ಲಿ ತಂದೆಯಾದರು, ಆದರೆ ಅವರ ತಂದೆ ರಿಷಿ ಕಪೂರ್ ಅವರು ಮೊದಲ ಮಗುವನ್ನು ಸ್ವಾಗತಿಸುವಾಗ ಕೇವಲ 28 ವರ್ಷ ವಯಸ್ಸಿನವರಾಗಿದ್ದರು. 30 ನೇ ವಯಸ್ಸಿನಲ್ಲಿ, ಅವರು ಎರಡನೇ ಬಾರಿಗೆ ತಂದೆಯಾಗಿದ್ದರು. 

46

ಆಲಿಯಾ ಭಟ್ ಅವರ ಅತ್ತಿಗೆ  ಮತ್ತು ನೀತು ಕಪೂರ್ ಅವರ ಮಗಳು ರಿದ್ಧಿಮಾ ತಾಯಿಯಾಗಲು ಯಾವುದೇ ಆತುರವನ್ನು ತೋರಿಸಲಿಲ್ಲ. ಅವರು ದೆಹಲಿ ಮೂಲದ ಉದ್ಯಮಿ ಭರತ್ ಸಾಹ್ನಿ ಅವರನ್ನು 26ನೇ ವಯಸ್ಸಿನಲ್ಲಿ ವಿವಾಹವಾದರು ಮತ್ತು 5 ವರ್ಷಗಳ ನಂತರ 23 ಮಾರ್ಚ್ 2011 ರಂದು ಅವರ ಮಗಳು ಸಮರಾ ಜನಿಸಿದರು.


 

56

ರಣಬೀರ್ ಮತ್ತು ಆಲಿಯಾ 9 ಸೆಪ್ಟೆಂಬರ್ 2022 ರಂದು ಬಿಡುಗಡೆಯಾದ 'ಬ್ರಹ್ಮಾಸ್ತ್ರ ಭಾಗ 1: ಶಿವ' ನಲ್ಲಿ ಕಾಣಿಸಿಕೊಂಡರು, ಇದು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು.

66

ರಣಬೀರ್ ಅವರ ಮುಂಬರುವ ಚಿತ್ರಗಳಲ್ಲಿ ಲವ್ ರಂಜನ್ ಅವರ ಹೆಸರಿಡದ ಯೋಜನೆ ಮತ್ತು 'ಅನಿಮಲ್' ಸೇರಿವೆ. ಆಲಿಯಾ ಭಟ್ ಅವರ ಮುಂಬರುವ ಚಿತ್ರಗಳು 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಮತ್ತು 'ಹಾರ್ಟ್ ಆಫ್ ಸ್ಟೋನ್'.

Read more Photos on
click me!

Recommended Stories