ಎಲ್ಲರ ಪ್ರೀತಿ ಬೆಂಬಲದಿಂದ ಹೋಗುತ್ತಿದ್ದೀನಿ; ಮುಂಬೈನಿಂದ ಹೊರಟ ಪ್ರಿಯಾಂಕಾ ಭಾವುಕ ಪೋಸ್ಟ್

Published : Nov 07, 2022, 01:18 PM ISTUpdated : Nov 07, 2022, 01:32 PM IST

ಮುಂಬೈನಲ್ಲಿ ಸುಮಾರು ಒಂದು ವಾರ ಸಮಯ ಕಳೆದ ಪ್ರಿಯಾಂಕಾ ಇದೀಗ ಗಂಡನ  ಮನೆಗೆ ವಾಪಾಸ್ ಆಗಿದ್ದಾರೆ. ಅಮೆರಿಕಾಗೆ ಹಾರಿದ ಪ್ರಿಯಾಂಕಾ ತನ್ನ ತವರಿನ ಬಗ್ಗೆ ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ. 

PREV
16
ಎಲ್ಲರ ಪ್ರೀತಿ ಬೆಂಬಲದಿಂದ ಹೋಗುತ್ತಿದ್ದೀನಿ; ಮುಂಬೈನಿಂದ ಹೊರಟ ಪ್ರಿಯಾಂಕಾ ಭಾವುಕ ಪೋಸ್ಟ್

ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಮದುವೆ ಬಳಿಕ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಪತಿ ನಿಕ್ ಜೋನಸ್ ಜೊತೆ ವಿದೇಶದಲ್ಲೇ ನೆಲೆಸಿರುವ ಪ್ರಿಯಾಂಕಾ ಭಾರತಕ್ಕೆ ಬರದೆ 3 ವರ್ಷಗಳಾಗಿತ್ತು. ಕೊರೊನಾ ಬಳಿಕ ಗ್ಲೋಬಲ್ ಸ್ಟಾರ್ ತನ್ನ ತವರಿನ ಕಡೆ ಮುಖ ಮಾಡಿರಲಿಲ್ಲ. ಆದರೆ ಇತ್ತಿಚಿಗಷ್ಟೆ ಪಿಗ್ಗಿ ಭಾರತಕ್ಕೆ ಮರಳಿದ್ದರು.

26

ಮುಂಬೈನಲ್ಲಿ ಸುಮಾರು ಒಂದು ವಾರ ಸಮಯ ಕಳೆದ ಪ್ರಿಯಾಂಕಾ ಇದೀಗ ಗಂಡನ  ಮನೆಗೆ ವಾಪಾಸ್ ಆಗಿದ್ದಾರೆ. ಅಮೆರಿಕಾಗೆ ಹಾರಿದ ಪ್ರಿಯಾಂಕಾ ತನ್ನ ತವರಿನ ಬಗ್ಗೆ ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ. 

36

ಪ್ರಿಯಾಂಕಾ ಭಾರತಕ್ಕೆ ಬಂದ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಒಂದೊಂದು ದಿನದ ವಿಡಿಯೋವನ್ನು ಸಹ ಪ್ರಿಯಾಂಕಾ ಶೇರ್ ಮಾಡುತ್ತಿದ್ದರು. ಪಿಗ್ಗಿಯ ಮುಂಬೈ ಎಂಟ್ರಿಯಿಂದ ಎಕ್ಸಿಟ್ ವರೆಗೂ ಎಲ್ಲಾ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

46

ಈ ಕಳೆದೆರಡು ದಿನಗಳಲ್ಲಿ, ನನಗೆ ತೋರಿದ ಎಲ್ಲಾ ಪ್ರೀತಿ ಮತ್ತು ಬೆಂಬಲದಿಂದ ನಾನು ತುಂಬಾ ಭಾವುಕನಾಗಿದ್ದೇನೆ ಎಂದು ಪ್ರಿಯಾಂಕಾ ಹೇಳಿದ್ದಾರೆ. ಇಲ್ಲಿನ ಊಟ, ಜಾಗ, ಸ್ನೇಹಿತರನ್ನೆಲ್ಲಾ ಭೇಟಿಯಾದ ಪ್ರಿಯಾಂಕಾ ಒಂದಿಷ್ಟು ನೆನೆಪುಗಳನ್ನು ಹೊತ್ತು ಗಂಡನ ಮನೆಗೆ ತೆರಳಿದರು. ಕೊರೊನಾ ನಂತರ ಪ್ರಿಯಾಂಕಾ ಚೋಪ್ರಾ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದರು. 

56

ಪ್ರಿಯಾಂಕಾ ಮಗಳು ಮಾಲ್ತಿ ಮೇರೆಯನ್ನು ಸ್ವಾಗತಿಸಿದ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದರು. ಮಗಳನ್ನು ಸಹ ಜೊತೆಯಲ್ಲೇ ಕರೆದುಕೊಂಡು ಬರುತ್ತಾರೆ ಎಂದು ಅಭಿಮಾಮನಿಗಳು ಅಂದುಕೊಂಡಿದ್ದರು. ಆದರೆ ಪ್ರಿಯಾಂಕಾ ಒಬ್ಬರೇ ಮುಂಬೈಗೆ ಬಂದಿದ್ದರು. ಒಂದು ವಾರದ ಬಳಿಕ ಪ್ರಿಯಾಂಕಾ ಅಮೆರಿಕಾಗೆ ವಾಪಾಸ್ ಆಗಿದ್ದಾರೆ. 

66

ಸದ್ಯ ಪ್ರಿಯಾಂಕಾ ಸಿನಿಮಾಗಳ ಜೊತೆಗೆ ಮಗಳ ಆರೈಕೆಯಲ್ಲೂ ನಿರತರಾಗಿದ್ದಾರೆ.  ಸಿನಿಮಾ ವಿಚಾರಕ್ಕೆ ಬರುವುದಾದರೆ, ಅನೇಕ ಪ್ರಾಜೇಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಇಟ್ಸ್ ಆಲ್ ಕಮ್ಮಿಂಗ್ ಬ್ಯಾಕ್ ಟು ಮಿ, ಸಿಟಾಡೆಲ್ ಸಿನಿಮಾಗಳನ್ನು ಮುಗಿಸಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories