Karan Johar ಪಾರ್ಟಿ: ಮಲೈಕಾ ಅರೋರಾ ಫ್ಯಾಷನ್‌ಗೂ ಕಾಲೆಳೆದ ನೆಟ್ಟಿಗರು

Published : May 26, 2022, 05:27 PM IST

ಚಿತ್ರ ನಿರ್ಮಾಪಕ ಕರಣ್ ಜೋಹರ್ (Karan Johar) ಬುಧವಾರ ರಾತ್ರಿ ತಮ್ಮ ಮನೆಯಲ್ಲಿ  ಅವರ 50ನೇ ಹುಟ್ಟುಹಬ್ಬದ ಪಾರ್ಟಿ ನೀಡಿದ್ದರು. ಈ ಸಮಯದಲ್ಲಿ, ಸಲ್ಮಾನ್ ಖಾನ್ (Salman Khan), ಅಭಿಷೇಕ್ ಬಚ್ಚನ್ (Abhishek Bachchan), ಐಶ್ವರ್ಯಾ ರೈ (Aishwarya Rai), ಸಾರಾ ಅಲಿ ಖಾನ್  (Sara Ali Khan), ರಾಣಿ ಮುಖರ್ಜಿ (Rani Mukerji), ಜಾನ್ವಿ ಕಪೂರ್ (Janhvi Kapoor), ರಶ್ಮಿಕಾ ಮಂದಣ್ಣ (Rashmika Mandana) ಮತ್ತು ಮಲೈಕಾ ಅರೋರಾ (Malaika Arora) ಸೇರಿ ಇನ್ನೂ ಅನೇಕ ಸೆಲೆಬ್ರಿಟಿಗಳು ಕರಣ್‌ಗೆ ಶುಭ ಹಾರೈಸಲು ಬಂದಿದ್ದರು. ಆದರೆ 48 ವರ್ಷದ ಮಲೈಕಾ ಅರೋರಾ ಅವರ ಉಡುಗೆ ಎಲ್ಲರ ಗಮನ ಸೆಳೆದಿದೆ, ಈ ಕಾರಣದಿಂದಾಗಿ ಅವರು ತೀವ್ರವಾಗಿ ಟ್ರೋಲ್ ಆಗುತ್ತಿದ್ದಾರೆ.

PREV
18
Karan Johar ಪಾರ್ಟಿ: ಮಲೈಕಾ ಅರೋರಾ ಫ್ಯಾಷನ್‌ಗೂ ಕಾಲೆಳೆದ ನೆಟ್ಟಿಗರು

ವಾಸ್ತವವಾಗಿ, ಕರಣ್ ಪಾರ್ಟಿಗಾಗಿ ಅಲೆಕ್ಸ್ ಪೆರಿಯ ಸ್ಪ್ರಿಂಗ್ ಸಮ್ಮರ್ 2022 ಸಂಗ್ರಹದಿಂದ ಮಲೈಕಾ ನಿಯಾನ್ ಹಸಿರು ಕಾಟನ್‌ ಮತ್ತು ಸಿಲ್ಕ್‌ ಮಿಶ್ರಿತ ಕಾರ್ಲ್‌ಟನ್ ಬ್ಲೇಜರ್ ಅನ್ನು ಧರಿಸಿದ್ದರು. ಇದರೊಂದಿಗೆ, ಮ್ಯಾಚಿಂಗ್ ಶಾರ್ಟ್ ಮತ್ತು ಬ್ರಾ ಧರಿಸಿದ್ದರು.

28

ಮಲೈಕಾ ಅವರ ಫೋಟೊಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ (Social Media) ಕಾಣಿಸಿಕೊಂಡಾಗ, ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದರು. 'ಅವಳು ಚಿಕ್ಕ ನೆಕ್‌ ಡ್ರೆಸ್‌ ಅನ್ನು ಧರಿಸಿದ ದಿನ, ಅವಳು ಸಾಯುತ್ತಾಳೆ' ಎಂದು ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಬರೆದಿದ್ದಾರೆ. 'ಅವಳು ಟಾಪ್ ಧರಿಸಲು ಮರೆತಿದ್ದಾಳೆ' ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.

38

'ಜಿಮ್‌ಗೆ ಹೋಗುತ್ತಿದ್ದರು, ಆಕಸ್ಮಿಕವಾಗಿ ಇಲ್ಲಿ ತಲುಪಿದ್ದಾರೆ' ಎಂದು ಕಾಮೆಂಟ್ ಮಾಡಿದ್ದಾರೆ. 'ಅಂತಹ ಬಟ್ಟೆಗಳನ್ನು ಧರಿಸಿದರೆ ಅವಳು ಹಾಟ್ ಆಗಿ ಕಾಣುತ್ತಾಳೆ ಎಂದು ಭಾವಿಸಿದ್ದಾರೆ, ಆದರೆ ಕೆಟ್ಟದಾಗಿ ಕಾಣುತ್ತಾಳೆ' ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

48
Malaika Arora

'ಟಾಪ್ ಅರ್ಜುನ್ ಜೊತೆಗೆ  ಬರುತ್ತಿದೆ? ಎಂದು ಬಳಕೆದಾರರೊಬ್ಬರು ಕೇಳಿದ್ದಾರೆ. 'ಜಿಮ್ ಬಟ್ಟೆಗಳನ್ನು ಧರಿಸಿ ಬಂದಿದ್ದಾರೆ, ಕೆಳಗೆ ಮಾತ್ರ ಕಲರ್‌ಫುಲ್‌ ಬ್ರಾ ಹಾಕಿದ್ದಾರೆ' ಎಂದು ಮತ್ತೊಬ್ಬರು ಮಲೈಕಾರನ್ನು ಟ್ರೋಲ್‌ ಮಾಡಿದ್ದಾರೆ

58

ಮಲೈಕಾ ತಮ್ಮ ಫ್ಯಾಷನ್ ಉಡುಗೆಗೆ ಸಕತ್ತೂ ಫೇಮಸ್. ಆದರೆ, ಕೆಲವೊಮ್ಮೆ ತಮ್ಮ ವಿಚಿತ್ರ ತೊಡುಗೆಗಳಿಂದಲೇ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಾರೆ. ಅದರಲ್ಲಿಯೂ ಇಂಥ ಡ್ರೆಸ್ ತೊಟ್ಟರೆ ಏಜ್ ಲುಕ್ ಅನಿಸೋ ಮಲೈಕಾಗೆ ಕೆಲವು ಫ್ಯಾಷನ್ ಸೂಟ್ ಆಗೋಲ್ಲವಂದ ಕಮೆಂಟ್ಸ್ ಬಂದಿವೆ.

68

ಬುಧವಾರ, ಮಲೈಕಾ ತನ್ನ ಕೆಲವು ಬಿಕಿನಿ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು ಮತ್ತು ತನ್ನನ್ನು ತಾನು ಬೀಚ್ ಬೇಬಿ ಎಂದು ಕರೆದುಕೊಂಡಿದ್ದರು. ಈ ಫೋಟೋಗಳಿಗೂ ಅವರು ಟ್ರೋಲ್ಸ್ ಎದುರಿಸಬೇಕಾಯಿತು. ಜನರು ಆಕೆಗಾಗಿ 'ಆಂಟಿ', 'ಅಜ್ಜಿ ಬೆಂಕಿ ಹಚ್ಚುತ್ತಿದ್ದಾರೆ' ಮತ್ತು 'ಬೀಚ್ ಚಾಚಿ' ನಂತಹ ಕಾಮೆಂಟ್‌ಗಳನ್ನು ಬಳಸಿ ಟ್ರೋಲ್‌ ಮಾಡಿದ್ದರು

78

ಕೆಲ ದಿನಗಳ ಹಿಂದೆ ಮಲೈಕಾ ತನಗಿಂತ 12 ವರ್ಷ ಚಿಕ್ಕವನಾದ ತನ್ನ ಬಾಯ್‌ಫ್ರೆಂಡ್ ಅರ್ಜುನ್ ಕಪೂರ್‌ನನ್ನು ಶೀಘ್ರದಲ್ಲೇ ಮದುವೆಯಾಗಬಹುದು ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಈ ವರ್ಷ ಚಳಿಗಾಲದಲ್ಲಿ ಈ ಮದುವೆ ಸಂಭವಿಸಬಹುದು. ಆದರೆ, ಇದನ್ನು ಅರ್ಜುನ್ ಅಥವಾ ಮಲೈಕಾ ಅಧಿಕೃತವಾಗಿ ಖಚಿತಪಡಿಸಿಲ್ಲ.

88

'ನನಗಿಂತ ಜನರು ನನ್ನ ಬಗ್ಗೆ ಹೆಚ್ಚು ತಿಳಿದಿರುವುದನ್ನು ನೋಡುವುದು ತುಂಬಾ ಸಂತೋಷವಾಗಿದೆ' ಎಂದು  ವೈರಲ್ ಆದ ಅವರ ಮದುವೆ  ಸುದ್ದಿಗೆ ಅರ್ಜುನ್ ತಮಾಷೆಯ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

Read more Photos on
click me!

Recommended Stories