Karan Johar ಪಾರ್ಟಿಯಲ್ಲಿ Shweta Bachchan, ಟ್ರೋಲ್ ಆಗಿದ್ದೇಕೆ?

First Published | May 26, 2022, 5:15 PM IST

ಬಾಲಿವುಡ್‌ನ (Bollywood) ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ (Karan Johar)  ಅವರು 50ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರು 50 ವರ್ಷದ ಹುಟ್ಟು ಹಬ್ಬವನ್ನು ಆಚರಣೆಗೆ ಪಾರ್ಟಿಯೊಂದನ್ನು ಆಯೋಜಿಸಿದ್ದರು. ಬಾಲಿವುಡ್ ಇಂಡಸ್ಟ್ರಿಗೆ ಸಂಬಂಧಿಸಿದ ಬಹುತೇಕ ಸ್ಟಾರ್‌ಗಳು ಈ ಪಾರ್ಟಿಗೆ ಆಗಮಿಸಿದ್ದಾರೆ. ಅಷ್ಟೇ ಅಲ್ಲ ತಾರೆಯರ ಜೊತೆಗೆ ಅವರ ಮಕ್ಕಳೂ ಬೋಲ್ಡ್ ಮತ್ತು ಗ್ಲಾಮರಸ್ ಲುಕ್ (Glamarous Look) ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾರ್ಟಿಯಲ್ಲಿ ಅಮಿತಾಬ್ ಬಚ್ಚನ್ (Amitabh Bachchan) ಪುತ್ರಿ ಶ್ವೇತಾ ಬಚ್ಚನ್  (Shweta Bachchan) ಕೂಡ ಕಾಣಿಸಿಕೊಂಡಿದ್ದರು. ಶ್ವೇತಾ ಸಡಿಲವಾದ ಕೆಂಪು ಗೌನ್ ಮತ್ತು ಅದರೊಂದಿಗೆ 2 ಭಾರವಾದ ನೆಕ್ಲೇಸ್‌ಗಳನ್ನು ಧರಿಸಿದ್ದರು. ಅಷ್ಟೇ ಅಲ್ಲ, ಗೌನ್ ಜೊತೆ ಕೆಂಪು ಮ್ಯಾಚಿಂಗ್ ಶೂ ಕೂಡ ಹಾಕಿಕೊಂಡಿದ್ದರು. ಶ್ವೇತಾ  ಅವರ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅವರ ಫ್ಯಾಷನ್‌  ಕಾರಣದಿಂದಾಗಿ ತೀವ್ರವಾಗಿ ಅಪಹಾಸ್ಯ ಮಾಡಲಾಗುತ್ತಿದೆ.

ಶ್ವೇತಾ ಬಚ್ಚನ್ ಅವರ ವಿಚಿತ್ರ ನೋಟವನ್ನು ನೋಡಿದ ಜನರು ಆಶ್ಚರ್ಯಚಕಿತರಾಗಿದ್ದಾರೆ ಮತ್ತು ಅವರನ್ನು ತೀವ್ರವಾಗಿ ಟ್ರೋಲ್‌ (Troll) ಮಾಡುತ್ತಿದ್ದಾರೆ 'ಕಳ್ಳತನದ ಭಯದಿಂದ, ಎಲ್ಲಾ ಆಭರಣಗಳನ್ನು ಧರಿಸಿ ತಿರುಗಾಡುತ್ತಿದ್ದಾರೆ' ಎಂದು ಒಬ್ಬರು ಬರೆದಿದ್ದಾರೆ.

'ಇದನ್ನು ನೋಡಿದಾಗ ಇದು ರಾಮ್ ಲೀಲಾ ಸೆಟ್‌ನಿಂದ ಬರುತ್ತಿದೆ ಎಂದು ತೋರುತ್ತದೆ' ಎಂದು ಕಾಮೆಂಟ್‌ ಮಾಡಿದ್ದಾರೆ. 'ಇದನ್ನು ನೋಡಿದ ನಂತರ ರಾಧೆ ಮಾತೆಯ ಭಾವನೆ ಬಂದಿತು' ಎಂದು ಅಪಹಾಸ್ಯ ಮಾಡಿದ್ದಾರೆ.

Tap to resize

ಇನ್ನೊಬ್ಬರು ಹೇಳಿದರೆ, ಅವರು ಏನು ಧರಿಸಿದರೂ ಅದು ಫ್ಯಾಷನ್ ಆಗುತ್ತದೆ ಎಂದು ಮತ್ತೊಬ್ಬರು ಕೋಪದಿಂದ ಬರೆದಿದ್ದಾರೆ. ಇದು ಪಾರ್ಟಿ ಅಥವಾ ಫ್ಯಾಶನ್ ಶೋ (Fashion Show) ಎಂದು ಇನ್ನೊಬ್ಬರು ಟ್ರೋಲ್ ಮಾಡಿದ್ದಾರೆ.

'ಇದು ಪಾರ್ಟಿಯೋ, ಫ್ಯಾಶನ್ ಶೋ?'ನಾ ಅಂತಾನೂ ಕಾಲೆಳೆದಿದ್ದಾರೆ. 'ಅವರಿಗೆ ಆಭರಣಗಳನ್ನು ಧರಿಸಲು ಅವಕಾಶ ಬೇಕು, ಶ್ವೇತಾ ಬಚ್ಚನ್ ಓವರ್‌ ಡ್ರೆಸ್‌ನಲ್ಲಿ ಬಂದಿದ್ದಾರೆ' ಎಂದು ಹಲವು ತರದ ಕಾಮೆಂಟ್‌ ಮೂಲಕ ಶ್ವೇತಾ ಅವರ ಡ್ರೆಸ್‌ ಅನ್ನು ಜನ ಟ್ರೋಲ್‌ ಮಾಡುತ್ತಿದ್ದಾರೆ,

ಕರಣ್ ಜೋಹರ್ ಹುಟ್ಟುಹಬ್ಬದಲ್ಲಿ ಸಾರಾ ಅಲಿ ಖಾನ್ (Sara Ali Khan), ನವ್ಯಾ ನವೇಲಿ ನಂದಾ, ಜಾನ್ವಿ ಕಪೂರ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್ (Asihwarya Bachchan), ಗೌರಿ ಖಾನ್, ಸಲ್ಮಾನ್ ಖಾನ್, ಪೂಜಾ ಹೆಗ್ಡೆ, ಕರೀನಾ ಕಪೂರ್, ಮಲೈಕಾ ಅರೋರಾ, ಆಯುಷ್ ಶರ್ಮಾ, ಅರ್ಪಿತಾ ಖಾನ್, ನೀತು ಸಿಂಗ್, ರಣಬೀರ್ ಕಪೂರ್, ಅನನ್ಯಾ ಪಾಂಡೆ, ಶಾಹಿದ್ ಕಪೂರ್, ಮೀರಾ ರಜಪೂತ್, ಅಮೃತಾ ಅರೋರಾ, ಕಿಯಾರಾ ಅಡ್ವಾಣಿ, ವರುಣ್ ಧವನ್, ಕೃತಿ ಸನೋನ್, ರೀಮಾ ಜೈನ್, ನತಾಶಾ ನಂದಾ, ಆರ್ಯನ್ ಖಾನ್, ನೇಹಿ ಧೂಪಿಯಾ, ಪ್ರೀತಿ ಜಿಂಟಾ, ಕಾಜೋಲ್, ಅಮೀರ್ ಖಾನ್, ರವೀನಾ ಟಂಡನ್, ಕಿರಣ್ ರಾವ್, ಹೃತಿಕ್ ರೋಷನ್, ಟೈಗರ್ ಶ್ರಾಫ್, ಶನಯಾ ಕಪೂರ್, ಮಾನುಷಿ ಛಿಲ್ಲರ್, ಟ್ವಿಂಕಲ್ ಖನ್ನಾ, ಕತ್ರಿನಾ ಕೈಫ್, ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಸೇರಿದಂತೆ ಅನೇಕ ಸೆಲೆಬ್ರೆಟಿಗಳು  ಭಾಗವಹಿಸಿದ್ದರು.

Latest Videos

click me!