ಸದಾ ಗೆಲ್ಲುತ್ತಿತ್ತು ಕಂಗನಾ ರಣಾವತ್ ಸಿನಿಮಾ, ಧಾಕಡ್ ಮಾತ್ರ ಫುಲ್ ಫ್ಲಾಪ್!

Published : May 26, 2022, 05:00 PM ISTUpdated : May 26, 2022, 05:01 PM IST

ಸೌತ್ ಸೂಪರ್ ಸ್ಟಾರ್ ಯಶ್ (Yash)ಅಭಿನಯದ ಕೆಜಿಎಫ್ 2 (KGF 2)  ಚಿತ್ರ ಬಿಡುಗಡೆಯಾದಾಗಿನಿಂದ ಥಿಯೇಟರ್‌ಗಳಲ್ಲಿ ತನ್ನ ಹವಾ ಸೃಷ್ಟಿಸಿದೆ.  ಅದರ ನಂತರ  ಬಿಡುಗಡೆಯಾದ ಎಲ್ಲ ಚಿತ್ರಗಳೂ ನಿರಾಸೆ ಮೂಡಿಸಿದೆ. ಆದರೆ ಕಳೆದ ಶುಕ್ರವಾರ ಬಿಡುಗಡೆಯಾದ ಕಾರ್ತಿಕ್ ಆರ್ಯನ್  (Kartik Aaryan) ಅವರ ಚಿತ್ರ ಭೂಲ್ ಭುಲೈಯಾ 2 (Bhool Bhulaiyaa 2) , ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಶೀಘ್ರದಲ್ಲಿಯೇ 100 ಕೋಟಿ ರೂ. ಕ್ಲಬ್ ಸೇರಲಿದೆ. ಅದೇ ಸಮಯದಲ್ಲಿ, ಕಂಗನಾ ರಣಾವತ್ (Kangana Ranaut)  ಅವರ ಚಿತ್ರ ಧಾಡಕ್ (Dhaakad) ನೆಲ ಕಚ್ಚಿದೆ. ಈಗ ಚಿತ್ರಕ್ಕೆ ಪ್ರೇಕ್ಷಕರು ಸಿಗುತ್ತಿಲ್ಲ ಹೀಗಾಗಿ ಸಿನಿಮಾದ ಶೋಗಳನ್ನು ರದ್ದು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಿನಿಮಾ  10 ಕೋಟಿ ಗಳಿಸಿದರೆ ಅದು ದೊಡ್ಡ ಡೀಲ್ ಆಗಲಿದೆ ಎಂಬುದು ಟ್ರೇಡ್ ವಿಶ್ಲೇಷಕರ ಅಭಿಪ್ರಾಯ.

PREV
16
ಸದಾ ಗೆಲ್ಲುತ್ತಿತ್ತು ಕಂಗನಾ ರಣಾವತ್ ಸಿನಿಮಾ, ಧಾಕಡ್ ಮಾತ್ರ ಫುಲ್ ಫ್ಲಾಪ್!

ಮೇ 20 ರಂದು ಬಿಡುಗಡೆಯಾದ ಕಂಗನಾ ರಣಾವತ್ ಅವರ ಧಾಕಡ್ ಚಿತ್ರವು ಪೂರ್ತಿ ಫ್ಲಾಫ್‌ ಆಗಿದೆ. ಚಿತ್ರ ಬಿಡುಗಡೆಯಾದ ಮೇಲೆ ವಿಶೇಷವಾದುದನ್ನು ತೋರಿಸಲು ಸಾಧ್ಯವಾಗಲಿಲ್ಲ. ಸೋಮವಾರದಂದು ಚಿತ್ರ 30 ಲಕ್ಷ ಗಳಿಸಿದ್ದರೆ, ಮಂಗಳವಾರ ಚಿತ್ರದ ಕಲೆಕ್ಷನ್ 20 ಲಕ್ಷ ರೂ. 

26

ಒಟ್ಟಾರೆಯಾಗಿ, ಮಾಧ್ಯಮ ವರದಿಗಳ ಪ್ರಕಾರ, ಇಲ್ಲಿವರೆಗೆ ಚಿತ್ರವು ಸುಮಾರು 2.5 ಕೋಟಿ ಕಲೆಕ್ಷನ್ ಮಾಡಿದೆ. ನಿರ್ದೇಶಕ ರಜನೀಶ್ ಘಾಯ್ ಅವರ ಚಿತ್ರವು ದೊಡ್ಡ ಫ್ಲಾಪ್ ಎಂದು ಸಾಬೀತಾಗಿದೆ.

36

ಸುದ್ದಿ ಪ್ರಕಾರ, ಈ ಚಿತ್ರದ ಬಜೆಟ್ 100 ಕೋಟಿ ಆಗಿದ್ದು, ಬಾಕ್ಸ್ ಆಫೀಸ್ ಕಲೆಕ್ಷನ್ ನೋಡಿದರೆ ಅದರ ವೆಚ್ಚವನ್ನು ಭರಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗುತ್ತಿದೆ.

46

ಚಿತ್ರದಲ್ಲಿ ಕಂಗನಾ ರಣಾವತ್ ಅದ್ಭುತವಾದ ಆಕ್ಷನ್ ಮಾಡಿದ್ದಾರೆ. ಸಿನಿಮಾ ವಿಮರ್ಶಕರ ಪ್ರಕಾರ ಸಿನಿಮಾದಲ್ಲಿ ಅನಗತ್ಯ ಆ್ಯಕ್ಷನ್ ಸೀಕ್ವೆನ್ಸ್  ತುಂಬಿ ನಿರ್ದೇಶಕರು ಕಥೆಯಿಂದ ಹಿಂದೆ ಸರಿದಿದ್ದಾರೆ. ಕಂಗನಾ ರಣಾವತ್‌ಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.


 

56

2015 ರ ತನು ವೆಡ್ಸ್ ಮನು (Tanu Weds Manu) ಚಿತ್ರದ ನಂತರ, ಅವರ ಯಾವುದೇ ಚಿತ್ರಗಳು ವಿಶೇಷವಾದದ್ದನ್ನು ಮಾಡಲು ಸಾಧ್ಯವಾಗಲಿಲ್ಲ. ಅವರ ರಂಗೂನ್, ತಲೈವಿ, ಕತ್ತಿ ಬತ್ತಿ, ಸಿಮ್ರಾನ್, ಜಡ್ಜ್‌ಮೆಂಟಲ್ ಹೈ ಕ್ಯಾ ಚಿತ್ರಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿಲ್ಲ. 
 

66

ಕೊನೆಯದಾಗಿ ಕಂಗನಾ ಅವರ ಮಣಿಕರ್ಣಿಕಾ - ದಿ ಕ್ವೀನ್ ಆಫ್ ಝಾನ್ಸಿ ಮತ್ತು ಪಂಗಾ ಚಿತ್ರಗಳನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದರು.ಅವರ ಮುಂಬರುವ ಚಿತ್ರಗಳು ಇಮ್ಲಿ, ಜಯ, ಟಿಕು ವೆಡ್ಸ್ ಶೇರು, ತೇಜಸ್, ಸೀತಾ.

Read more Photos on
click me!

Recommended Stories