ಬಾಲಿವುಡ್(Bollywood) ವಸ್ತ್ರ ವಿನ್ಯಾಸಕ(Fashion Designer) ಮನೀಷ್ ಮಲ್ಹೋತ್ರಾ(Manish Malhotra) ಲೆಹಂಗಾ, ಗೌನ್, ಸೀರೆ ಸೂಟ್ ಯಾವುದೇ ಬಟ್ಟೆ ಡಿಸೈನ್ ಮಾಡಿದ್ರೂ ಸಖತ್ತಾಗಿರುತ್ತದೆ. ಅದನ್ನು ಪ್ರಮೋಟ್ ಮಾಡಲು ಬಾಲಿವುಡ್ ಚೆಲುವೆಯರೂ ಸೇರಿಕೊಳ್ಳುತ್ತಾರೆ.
ಜಾಹ್ನವಿ, ಸಾರಾ, ಮಲೈಕಾ, ಕರೀನಾ ಒಬ್ಬರಾ ಇಬ್ಬರಾ ? ಎಲ್ಲರೂ ಮನೀಶ್ ಕೈಚಳಕದಲ್ಲಿ ಮಿಂಚಿದವರೇ. ಮಲೈಕಾ(Malaika Arora) ಮನೀಶ್ ಸೀರೆಯೊಂದಕ್ಕೆ ಮೆರುಗು ತುಂಬಿದ್ದಾರೆ.
ಲಮೆನ್ ಕಲರ್ ಸೀರೆ ನೋಡೋಕೆ ಸಿಂಪಲ್ ಆಗಿದ್ದರೂ ಉಟ್ಟಾಗ ಸೂಪರ್ ಲುಕ್ ನೀಡುತ್ತದೆ, ಇದರಲ್ಲಿ ವಿಶೇಷ ಇರೋದೆ ಸೆರಗಿನಲ್ಲಿ. ಗರಿಗರಿಯಾದ ಡಿಸೈನ್ ಸೀರೆಯ ಮುಖ್ಯ ಆಕರ್ಷಣೆ
ಸ್ಲೀವ್‌ಲೆಸ್ ಬ್ಲೌಸ್ ಹಿಂದೆ ಟೈ ಮಾಡುವಂತಿದ್ದು ತೆಳುವಾದ ಟ್ರಾನ್ಸ್‌ಪರೆಂಟ್ ಸೀರೆ ಮಲೈಕಾಗೆ ಸುಂದರವಾಗಿ ಹೊಂದಿಕೊಂಡಿದೆ. ಸೀರೆಯ ಅಂಚಿನಲ್ಲಿ ಗೋಲ್ಡನ್ ಪಟ್ಟಿ ಇಡಿಸಲಾಗಿದೆ.
ಗಾಢ ಪಟ್ಟೆ ಹಾಗೂ ಬಿಳಿ ಬಣ್ಣದ ಕಾಂಬಿನೇಷನ್ ಇರುವ ಬಳೆ, ಉಂಗುರ ಹಾಗೂ ದೊಡ್ಡ ಇಯರಿಂಗ್ಸ್ ಹಾಕಿ ಸೀರೆಗೆ ಮ್ಯಾಚ್ ಮಾಡಿದ್ದಾರೆ ಮಲೈಕಾ. ಡೀಪ್ ನೆಕ್ ಬ್ಲೌಸ್ ಸೀರೆಯ ಅಂದ ಹೆಚ್ಚಿಸಿದೆ.
Diwali 2021: 48 ಅಂದ್ರೆ ನಂಬ್ತೀರಾ ? ಪಿಂಕ್ ಸೀರೆಯಲ್ಲಿ ಬಾಯ್‌ಫ್ರೆಂಡ್ ಜೊತೆ ಮಲೈಕಾ ಹಬ್ಬ
ಫಿಟ್ನೆಸ್ ಫ್ರೀಕ್ ಮಲೈಕಾ ಆರೋರಾ ಸದ್ಯ ರಿಯಾಲಿಟಿ ಶೋ ಜಡ್ಜ್ ಆಗಿದ್ದಾರೆ. ನಟಿ ಈ ಹಿಂದೆಯೂ ಮನೀಶ್ ವಿನ್ಯಾಸದ ಲೆಹಂಗಾ, ಸೀರೆಗಳಿಗೆ ಮಾಡೆಲ್ ಆಗಿದ್ದಾರೆ.
Suvarna News