ಸ್ಕಾಟ್ಲೆಂಡ್‌ನಲ್ಲಿ ಮಲೈಕಾ ಅರೋರಾ, ಅರ್ಜುನ್ ಕಪೂರ್: ಹಾಲಿಡೇ ಫೋಟೋಸ್ ವೈರಲ್‌

Published : Apr 19, 2023, 05:31 PM IST

ಬಾಲಿವುಡ್‌ನ ಫೇಮಸ್‌ ಜೋಡಿಗಳಲ್ಲಿ ಒಂದಾದ ಅರ್ಜುನ್ ಕಪೂರ್ (Arjun Kapoor) ಮತ್ತು ಮಲೈಕಾ ಅರೋರಾ (Malaika Arora) ಪ್ರಸ್ತುತ ಸ್ಕಾಟ್ಲೆಂಡ್‌ನಲ್ಲಿ ರಜೆಯಲ್ಲಿದ್ದಾರೆ. ಒಟ್ಟಾಗಿ ಅವರು ತಮ್ಮ ರಜಾ ದಿನದ ನೋಟಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅನುಯಾಯಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

PREV
110
ಸ್ಕಾಟ್ಲೆಂಡ್‌ನಲ್ಲಿ ಮಲೈಕಾ ಅರೋರಾ, ಅರ್ಜುನ್ ಕಪೂರ್:  ಹಾಲಿಡೇ  ಫೋಟೋಸ್ ವೈರಲ್‌

ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಫೋಟೋಗಳೊಂದಿಗೆ ಅಭಿಮಾನಿಗಳನ್ನು ಆಗಾಗ್ಗೆ ರಂಜಿಸುತ್ತಾರೆ. ಈಗ ಅರ್ಜುನ್ ಮತ್ತು ಮಲೈಕಾ ತಮ್ಮ ಹಾಲಿಡೇ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. 

210

ಮಲೈಕಾ ಮಂಗಳವಾರ ರಾತ್ರಿ Instagram ಮೂಲಕ ಸ್ಕಾಟ್ಲೆಂಡ್‌ನ ಹಾಲಿಡೇ ಸಮಯದ ತನ್ನ ಮತ್ತು ಅರ್ಜುನ್‌ ಕಪೂರ್‌ ಅವರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

310

ಮಲೈಕಾ Instagramನಲ್ಲಿ  ಅರ್ಜುನ್ ಜೊತೆಗಿರುವ ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಚಳಿಗಾಲದ ಉಡುಗೆಯನ್ನು ಧರಿಸಿರುವ ಜೋಡಿ ಸೆಲ್ಫಿಗಾಗಿ ಒಟ್ಟಿಗೆ ಪೋಸ್ ನೀಡುವುದನ್ನು ಕಾಣಬಹುದು.

410

 'ಎಲ್ಲಾ ಬೆಚ್ಚಗಿರುತ್ತದೆ ಮತ್ತು ಸ್ನೇಹಶೀಲವಾಗಿದೆ. ನಿಮ್ಮ ಸುತ್ತಲೂ ನಾನು ಹೀಗೆ ಭಾವಿಸುತ್ತೇನೆ @ಅರ್ಜುನ್‌ಕಪೂರ್' ಎಂದು ಫೋಟೊಗಳಿಗೆ ಕ್ಯಾಪ್ಷನ್‌ ನೀಡಿದ್ದಾರೆ  ಮಲೈಕಾ.  

510

ಜರ್ಮನಿಯ ಬರ್ಲಿನ್‌ನಲ್ಲಿ ಮಲೈಕಾ ತೆಗೆದ ಕೆಲವು ಫೋಟೋಗಳನ್ನು ಅರ್ಜುನ್  ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  ಮಳೆ ಅಥವಾ ಬಿಸಿಲು, ಅವಳು ನನ್ನನ್ನು ಚೆನ್ನಾಗಿ ಕಾಣುವಂತೆ ಮಾಡುತ್ತವೆ' ಎಂದು ಕ್ಯಾಪ್ಷನ್‌ ನೀಡಿ ಮಲೈಕಾರನ್ನು ಟ್ಯಾಗ್‌ ಮಾಡಿದ್ದಾರೆ.

610

ಇದಲ್ಲದೆ ಅರ್ಜುನ್  ಕಪೂರ್‌ ಸಹ ತನ್ನ Instagram ಸ್ಟೋರಿಗಳಲ್ಲಿ ಸಾಲ್ಸ್‌ಬರ್ಗ್‌ನ ಸುಂದರವಾದ ಹಿಮಭರಿತ ದೃಶ್ಯವನ್ನು ಪೋಸ್ಟ್ ಮಾಡಿದ್ದಾರೆ. 

710

ಈ ನಡುವೆ, ಮಲೈಕಾ ಇತ್ತೀಚೆಗೆ ಅರ್ಜುನ್‌ನೊಂದಿಗೆ ತಮ್ಮ ವಿವಾಹದ ವಿವರಗಳನ್ನು ಬಹಿರಂಗಪಡಿಸಿದ್ದಾರೆ. 'ನಾನು ಇದೀಗ ನನ್ನಯಶಸ್ವಿ ಹಂತದಲ್ಲಿದ್ದೇನೆ ಮತ್ತು ಮುಂದಿನ 30 ವರ್ಷಗಳವರೆಗೆ ಈ ರೀತಿ ಕೆಲಸ ಮಾಡಲು ಬಯಸುತ್ತೇನೆ,' ಎಂದು ಅವರು ಬ್ರೈಡ್ಸ್ ಟುಡೇಗೆ ತಿಳಿಸಿದರು.

810

'ನಾನು ಕಡಿಮೆ ಕ್ರಿಯಾಶೀಲಳಾಗಲು ಇಷ್ಟ ಪಡುವುದಿಲ್ಲ. ಇದೀಗ ಅನೇಕ ಕೆಲಸಗಳನ್ನು ಮಾಡುತ್ತಿದ್ದೇನೆ. ನಾನು ಜೀವನದಲ್ಲಿ ಸದಾ ಪ್ರಯಾಣಿಸಲು ಬಯಸುತ್ತೇನೆ ಮತ್ತು ಅರ್ಜುನ್‌ನೊಂದಿಗೆ ನನ್ನ ಮನೆ, ಕುಟುಂಬವನ್ನು ಪ್ರಾರಂಭಿಸುವುದು ಅದ್ಭುತ, ಏಕೆಂದರೆ ನಾವಿಬ್ಬರೂ ಹೊಸ ಜೀವನಕ್ಕೆ ಸಿದ್ಧರಿದ್ದೇವೆ,' ಎಂದು ಮಲೈಕಾ ಹೇಳಿದ್ದಾರೆ.

910

ಮಲೈಕಾ ಮತ್ತು ಅರ್ಜುನ್ ಕೆಲವು ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ. ಆದರೆ 2019ರಲ್ಲಿ ಇಬ್ಬರೂ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿಡಲು ನಿರ್ಧರಿಸಿದರು.

1010

ತಮ್ಮ ನಡುವಿನ 12 ವರ್ಷಗಳ ವಯಸ್ಸಿನ ಅಂತರದಿಂದಾಗಿ ಎಲ್ಲಾ ಟ್ರೋಲಿಂಗ್‌ಗಳ ನಂತರವೂ, ಮಲೈಕಾ ಮತ್ತು ಅರ್ಜುನ್ ಬಿರ್ಟನ್‌ ಫೇವರೇಟ್‌ ಜೋಡಿಗಳಾಗಿದ್ದಾರೆ.

Read more Photos on
click me!

Recommended Stories