ಅನಂತ್ ಅಂಬಾನಿ ಮದುವೆ: 40 ಕೋಟಿ ಬಂಗಲೆ, ಏರೋಪ್ಲೇನ್ ಪಡೆದ ಗಿಫ್ಟ್‌ಗಳಿವಂತೆ!

First Published | Jul 22, 2024, 6:15 PM IST

ಕಳೆದ ವಾರ  ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯ ಬಗ್ಗೆ ಅದ್ದೂರಿ ವ್ಯವಸ್ಥೆಗಳಿಂದ ಸ್ಟಾರ್-ಸ್ಟಡ್ಡ್ ಅತಿಥಿಗಳ ಪಟ್ಟಿಯವರೆಗೆ ಎಲ್ಲವೂ ಮುಖ್ಯಾಂಶಗಳನ್ನು ಮಾಡಿತ್ತು.. ಜುಲೈ 12, 2024 ರಂದು ಈ ಜೋಡಿಯು ಅತಿರಂಜಿತ ಭವ್ಯ ಆಚರಣೆಯಲ್ಲಿ ವಿವಾಹವಾದರು. ಎಲ್ಲಾ ವರ್ಗಗಳ ಸಾವಿರಾರು ಜನರು ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು, ಈಗ ಮದುವೆಯ  ಅದ್ದೂರಿತನ ನಂತರ ದಂಪತಿ ಪಡೆದ ಅದ್ಧೂರಿ ಉಡುಗೊರೆಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಅನಂತ್‌ ಮತ್ತು ರಾಧಿಕ ತಮ್ಮ ಮದುವೆಯಲ್ಲಿ ಸ್ವೀಕರಿಸಿದ ಭಾರೀ ಗಿಫ್ಟ್‌ಗಳ ಬಗ್ಗೆ ವರದಿಗಳು ಸಖತ್‌ ವೈರಲ್‌ ಆಗಿವೆ. ಏನವು?

ಮಾಧ್ಯಮ ವರದಿಗಳ ಪ್ರಕಾರ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಕುಟುಂಬ ಮತ್ತು ಸ್ನೇಹಿತರಿಂದ ಅನೇಕ ದುಬಾರಿ ಉಡುಗೊರೆಗಳನ್ನು ಪಡೆದಿದ್ದಾರೆ.  

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಇನ್‌ಸ್ಟಾಗ್ರಾಮ್ ವೀಡಿಯೊದ ಪ್ರಕಾರ, ಅಮೆರಿಕನ್ ನಟ ಮತ್ತು WWE ಸ್ಟಾರ್ ಜಾನ್ ಸೆನಾ ನವವಿವಾಹಿತರಿಗೆ ರೂ 3 ಕೋಟಿ. ಮೌಲ್ಯದ ಲಂಬೋರ್ಗಿನಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

Tap to resize

ವೈರಲ್ ಇನ್‌ಸ್ಟಾಗ್ರಾಮ್ ವೀಡಿಯೊ ಪ್ರಕಾರ, ಅಮೆಜಾನ್‌ನ ಮಾಜಿ ಅಧ್ಯಕ್ಷ ಮತ್ತು ಸಿಇಒ ಜೆಫ್ ಬೆಜೋಸ್, ಅನಂತ್ ಮತ್ತು ರಾಧಿಕಾಗೆ ಉಡುಗೊರೆ ನೀಡಿದ್ದಾರೆ.

ಬಾಲಿವುಡ್‌ನ ಕಿಂಗ್‌ ಖಾನ್‌ ಶಾರುಖ್ ಖಾನ್ ಫ್ರಾನ್ಸ್‌ನಲ್ಲಿ ರೂ.40 ಕೋಟಿ ಮೌಲ್ಯದ ಅದ್ದೂರಿ ಅಪಾರ್ಟ್‌ಮೆಂಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

ಮದುವೆಯ ವೇಳೆ ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ರೂ.15 ಕೋಟಿ ಮೌಲ್ಯದ ಸ್ಪೋರ್ಟ್ಸ್‌ ಬೈಕ್‌ ಉಡುಗೊರೆಯಾಗಿ ನೀಡಿದ್ದಾರಂತೆ.

 ಅಮಿತಾಬ್‌ ಬಚ್ಚನ್‌ ಫ್ಯಾಮಿಲಿ ಅಂಬಾನಿ ಮಗ ಮತ್ತು ಸೊಸೆಗೆ ರೂ. 30 ಕೋಟಿ ಬೆಲೆ ಪಚ್ಚೆಯ ನೆಕ್‌ಪೀಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. 

ಅಲ್ಲದೆ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರು ಹ್ಯಾಂಡ್‌ಮೇಡ್‌ ಶಾಲನ್ನು ಗಿಫ್ಟ್‌ ನೀಡಿದ್ದು ಅದರ ಬೆಲೆ ಸುಮಾರು. 25 ಲಕ್ಷ ರೂಪಾಯಿಗಳಂತೆ, 
 

ಬಾಲಿವುಡ್‌ನ ಸೂಪರ್‌ ಸ್ಟಾರ್‌ ಅಕ್ಷಯ್ ಕುಮಾರ್ ಅವರು  ಅಂಬಾನಿ ಜೋಡಿಗೆ ಚಿನ್ನದ ಪೆನ್ನನ್ನು ಉಡುಗೊರೆಯಾಗಿ ನೀಡಿದ್ದು, ಅದರ ಬೆಲೆ 60 ಲಕ್ಷ ರೂಪಾಯಿಗಳಂತೆ.

ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ದಂಪತಿ ವೆಚ್ಚದ ಖಾಸಗಿ ಜೆಟ್ ಅನ್ನು ಕಳುಹಿಸಿದ್ದಾರೆ. ಅದರ ಬೆಲೆ 300 ಕೋಟಿಯಂತೆ. ಆದರೆ, ಇದರ ಸತ್ಯಾಸತ್ಯೆ ಬಗ್ಗೆ ಅಂಬಾನಿ ಫ್ಯಾಮಿಲಿ ರಿವೀಲ್ ಮಾಡಬೇಕು. ಆದರೆ, ಗಿಫ್ಟ್ ಎನ್ನೋದು ಗೌಪ್ಯವಾಗಿದ್ದು, ಅದು ರಿವೀಲ್ ಆಗೋದು ಕಷ್ಟ.

.

ಬಾಲಿವುಡ್‌ ಲೈಫ್‌ ವರದಿಯ ಪ್ರಕಾರ, ಬಾಲಿವುಡ್‌ ಸ್ಟಾರ್‌ ಕಪಲ್‌  ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ನವದಂಪತಿಗಳಿಗೆ 19 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ. 

ಬಿಲ್ ಗೇಟ್ಸ್ ನವ  ದಂಪತಿಗೆ ರೂ  9 ಕೋಟಿ  ಮೌಲ್ಯದ  ವಜ್ರದ ಉಂಗುರವನ್ನು ನೀಡಿದರು ಎಂದು  ಸೋಶಿಯಲ್‌ ಮೀಡಿಯಾದಲ್ಲಿನ ವೈರಲ್‌ ವೀಡಿಯೋ ವೀಡಿಯೊ ಬಹಿರಂಗಪಡಿಸಿದೆ.

ಅದೇ ರೀತಿ  ದಂಪತಿಗಳಾದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ನವಜೋಡಿಗೆ ರೂ.9 ಕೋಟಿ  ಮೌಲ್ಯದ ಮರ್ಸಿಡಿಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. 
 

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ರೂ. 20 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಅನ್ನು ನಂತ್‌ ಮತ್ತು ರಾಧಿಕಾ ದಂಪತಿಗಳಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ. 

ಇಷ್ಟಲ್ಲದೆ, ಮಾಧ್ಯಮ ವರದಿಗಳ ಪ್ರಕಾರ, ಮದುವೆಯಲ್ಲಿ ಅನೇಕ ಅತಿಥಿಗಳು ದಂಪತಿಗೆ ದುಬಾರಿ ಪ್ರತಿಮೆಗಳು ಮತ್ತು ವರ್ಣಚಿತ್ರಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. 

Latest Videos

click me!