ಪಿಂಕ್ ಸೀರೆಯಲ್ಲಿ ದೇವತೆಯಂತೆ ಕಂಡ ಮಾಸ್ತಾರು ಮಾಸ್ತಾರು ನಟಿ: ರವಿವರ್ಮ ಬರೆದಂತ ಬೊಂಬೆ ನೀನು ಅನ್ನೋದಾ!

Published : Jul 21, 2024, 03:10 PM ISTUpdated : Jul 22, 2024, 09:09 AM IST

ದಕ್ಷಿಣ ಸಿನಿರಂಗದ ಯಾವುದೇ ಇಂಡಸ್ಟ್ರಿಗೆ ಕೇರಳದ ಕೆಲವು ನಟಿಯರು ಬರುತ್ತಾರೆ. ಅವರಲ್ಲಿ ಕ್ಯೂಟ್ ಬ್ಯೂಟಿ ಸಂಯುಕ್ತಾ ಮೆನನ್ ಒಬ್ಬರು. ಮಲಯಾಳಂ, ತಮಿಳಿನ ಜೊತೆಗೆ ಕನ್ನಡದ ಗಾಳಿಪಟ 2 ಚಿತ್ರದಲ್ಲಿ ನಟಿಸಿ ಜನಮನ್ನಣೆ ಗಳಿಸಿರುವ ಈ ನಟಿ ಇದೀಗ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ.

PREV
17
ಪಿಂಕ್ ಸೀರೆಯಲ್ಲಿ ದೇವತೆಯಂತೆ ಕಂಡ ಮಾಸ್ತಾರು ಮಾಸ್ತಾರು ನಟಿ: ರವಿವರ್ಮ ಬರೆದಂತ ಬೊಂಬೆ ನೀನು ಅನ್ನೋದಾ!

ಸಂಯುಕ್ತಾ ಸದ್ಯ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಟ್ರೆಂಡಿಂಗ್‌ಲ್ಲಿರೋ ನಟಿ. 2016ರಿಂದ ಮಲೆಯಾಳಂ ಸಿನಿರಂಗದಲ್ಲಿ ಮಿಂಚುತ್ತಿರುವ ಸಂಯುಕ್ತಾ ಟಾಲಿವುಡ್, ಕಾಲಿವುಡ್‌ನಲ್ಲಿ ಚಿರಪರಿಚಿತ ಹೆಸರು. ಕ್ಯಾರೆಕ್ಟರ್ ಬೇಸ್ಟ್ ಸಿನಿಮಾಗಳಲ್ಲೇ ಆಯ್ಕೆ ಮಾಡುತ್ತಾ ಬಂದಿರೋ ಸಂಯುಕ್ತಾ ಇತ್ತೀಚೆಗೆ ಪಿಂಕ್ ಸೀರೆಯುಟ್ಟು ಮಿಂಚಿದ್ದಾರೆ.

27

ಗುಲಾಬಿ ಬಣ್ಣದ ಸೀರೆಯಲ್ಲಿ ದೇವತೆಯಂತೆ ಸಂಯುಕ್ತಾ ಕಂಗೊಳಿಸಿದ್ದು, ಅದಕ್ಕೆ ಮ್ಯಾಚ್ ಆಗೋ ಹಾಗೆ ಬ್ಲೌಸ್ ತೊಟ್ಟಿದ್ದಾರೆ. ಜೊತೆಗೆ ಅವರು ಧರಿಸಿದ ದುಬಾರಿ ನೇಕ್ಲೇಸ್, ಸರಳವಾದ ಮೇಕಪ್, ಫ್ರೀ ಬಿಟ್ಟ ಹೇರ್ ಎಲ್ಲವೂ ಹೈಲೈಟ್ ಆಗಿತ್ತು.

37

ಸಂಯುಕ್ತಾ ಸೀರೆಯಲ್ಲಿ ಹಂಚಿಕೊಂಡಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು, ಸೋ ಬ್ಯೂಟಿಫುಲ್, ಬಾಲಿವುಡ್ ಎಫೆಕ್ಟ್, ಸೌಂದರ್ಯ ದೇವತೆ, ರವಿವರ್ಮ ಬರೆದಂತ ಬೊಂಬೆ ನೀನು ಅಂತೆಲ್ಲಾ ಕಮೆಂಟ್ ಮಾಡಿದ್ದಾರೆ.
 

47

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಸಂಯುಕ್ತಾ, 2019 ರಲ್ಲಿ ಪಾಪ್‌ ಕಾರ್ನ್‌ ಎನ್ನುವ ಚಿತ್ರದ ಮೂಲಕ ಸಿನಿರಂಗಕ್ಕೆ ಸಂಯುಕ್ತಾ ಎಂಟ್ರಿ ಕೊಟ್ಟರು. ಸದ್ಯ ತೆಲುಗು ನಟ ನಿಖಿಲ್ ಜೊತೆ ಸ್ವಯಂಭು ಚಿತ್ರದಲ್ಲಿ ನಟಿಸುತ್ತಿದ್ದಾರೆ.
 

57

ವಾತಿ ಸಿನಿಮಾದಲ್ಲಿ ಧನುಷ್​ಗೆ ಜೋಡಿಯಾಗಿ ಹಳ್ಳಿಯ ಟೀಚರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪವನ್ ಕಲ್ಯಾಣ್ ಅಭಿನಯದ ಭೀಮ್ಲಾ ನಾಯಕ್ ಚಿತ್ರದ ಮೂಲಕ ಟಾಲಿವುಡ್‌ಗೆ ಕಾಲಿಟ್ಟರು. 

67

ನಂದಮೂರಿ ಕಲ್ಯಾಣ್ ರಾಮ್ ನಟನೆಯ ಬಿಂಬಿಸಾರದಲ್ಲಿ ಸಬ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದಕ್ಕಾಗಿ ಅವರು ಮೆಚ್ಚುಗೆಯನ್ನು ಪಡೆದರು. ದಕ್ಷಿಣ ಚಿತ್ರರಂಗದಲ್ಲಿ ಸಂಯುಕ್ತಾಗೆ ಅಪಾರ ಸಂಖ್ಯೆಯ ಫ್ಯಾನ್ಸ್‌ಗಳಿದ್ದಾರೆ.  

77

ಇನ್ನು ಸಂಯುಕ್ತಾ  ಸೆಪ್ಟೆಂಬರ್ 11, 1995ರಂದು ಕೇರಳದ ಪಾಲಕ್ಕಾಡ್‌ನಲ್ಲಿ ಜನಿಸಿದರು. ಅರ್ಥಶಾಸ್ತ್ರದ ಪದವಿ ಮುಗಿಸಿದ ನಂತರ ಸಂಯುಕ್ತಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

Read more Photos on
click me!

Recommended Stories