ಇತ್ತೀಚೆಗೆ ಒಟಿಟಿ ವೇದಿಕೆಗಳಲ್ಲಿ ಬೇರೆ ಬೇರೆ ಭಾಷೆಗಳ ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸುತ್ತಿವೆ. ಚಿತ್ರಮಂದಿರಗಳಲ್ಲಿ ಹೊಸ ಸಿನಿಮಾಗಳು ಬಿಡುಗಡೆಯಾಗುತ್ತಿದ್ದರೂ, ಒಟಿಟಿಯಲ್ಲಿ ಸಿನಿಮಾಗಳನ್ನು ನೋಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಪ್ರತಿ ವಾರಾಂತ್ಯದಲ್ಲಿ ಹೊಸ ಸಿನಿಮಾ ಮತ್ತು ವೆಬ್ ಸೀರೀಸ್‌ಗಳು ಬಿಡುಗಡೆಯಾಗುತ್ತಿವೆ. ಇದೀಗ ಮಲಯಾಳಂನ 'ಸೂಕ್ಷ್ಮದರ್ಶಿನಿ' ಚಿತ್ರ ಒಟಿಟಿಯಲ್ಲಿ ಸೂಪರ್ ಹಿಟ್ ಆಗಿದೆ.