ಒಂದು ನಿಶ್ಚಿತಾರ್ಥ ಮುರಿದ ಬಳಿಕ, 48ನೇ ವರ್ಷದಲ್ಲಿ ಮತ್ತೆ ಎಂಗೇಜ್‌ ಆದ Actor Vishal; ವಯಸ್ಸಿನ ಅಂತರವೆಷ್ಟು?

Published : Aug 29, 2025, 01:20 PM IST

Actor Vishal Engagement: ನಟ ವಿಶಾಲ್‌ ಅವರು 48ನೇ ವಯಸ್ಸಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇವರ ಜನ್ಮದಿನದಂದೇ ನಿಶ್ಚಿತಾರ್ಥ ನಡೆದಿದೆ. ವಿಶಾಲ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ ಎಂಗೇಜ್‌ಮೆಂಟ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

PREV
15

“ನನ್ನ ವಿಶೇಷ ಹುಟ್ಟುಹಬ್ಬಕ್ಕೆ ಶುಭ ಹಾರೈಸಿ, ಆಶೀರ್ವದಿಸಿದ್ದಕ್ಕಾಗಿ ಈ ವಿಶ್ವದ ಮೂಲೆ ಮೂಲೆಯಲ್ಲಿರುವ, ನಿಮ್ಮೆಲ್ಲರ ಪ್ರಿಯರಿಗೆ ಧನ್ಯವಾದಗಳು. ಇಂದು ನಡೆದ ನನ್ನ, ಸಾಯಿ ಧನ್ಸಿಕಾ ನಿಶ್ಚಿತಾರ್ಥ ನಡೆದಿದೆ. ಈ ಶುಭ ಸುದ್ದಿಯನ್ನು ನಮ್ಮ ಕುಟುಂಬಗಳ ನಡುವೆ ಹಂಚಿಕೊಳ್ಳಲು ಖುಷಿಯಾಗಿದೆ. ಯಾವಾಗಲೂ ನಿಮ್ಮ ಆಶೀರ್ವಾದ, ಪ್ರೀತಿಯನ್ನು ಬಯಸುತ್ತೇನೆ” ಎಂದಿದ್ದಾರೆ ವಿಶಾಲ್.‌

25

ಅಂದಹಾಗೆ ನಟ ವಿಶಾಲ್‌ ಅವರು ಧನ್ಶಿಕಾ ಜೊತೆ ಎಂಗೇಜ್‌ ಆಗಿದ್ದಾರೆ. ಇವರಿಬ್ಬರದ್ದು ಲವ್‌ ಮ್ಯಾರೇಜ್.‌ ಕೆಲ ತಿಂಗಳುಗಳ ಹಿಂದೆ ಧನ್ಶಿಕಾ ಅವರ ಸಿನಿಮಾ ಪ್ರೆಸ್‌ಮೀಟ್‌ನಲ್ಲಿ ವಿಶಾಲ್‌ ಅವರು ಲವ್‌ ಮಾಡ್ತಿದ್ದೇವೆ, ಮದುವೆ ಆಗ್ತೀವಿ ಎಂದು ಘೋಷಣೆ ಮಾಡಿದ್ದರು.

35

ನಟ ವಿಶಾಲ್‌ ಅವರಿಗೆ ಈ ಹಿಂದೆ 2019 ರಲ್ಲಿ ಅನಿಶಾ ಅಲ್ಲ ರೆಡ್ಡಿ ಜೊತೆಗೆ ಎಂಗೇಜ್‌ಮೆಂಟ್‌ ನಡೆದಿತ್ತು. ಆ ಬಳಿಕ ಕ್ಯಾನ್ಸಲ್‌ ಆಗಿತ್ತು. ಇವರಿಬ್ಬರ ನಡುವೆ ಬಂದ ಮನಸ್ತಾಪದಿಂದ ಹೀಗೆಲ್ಲ ಆಗಿತ್ತು ಎನ್ನಲಾಗಿದೆ.

45

ನಟ ವಿಶಾಲ್‌ ಅವರು ಕೆಲ ನಟಿಯರ ಜೊತೆ ಡೇಟ್‌ ಮಾಡಿದ್ದರು ಎನ್ನಲಾಗಿದೆ. ಆದರೆ ಅದು ಎಂದಿಗೂ ಮದುವೆವರೆಗೂ ಹೋಗಿಯೇ ಇಲ್ಲ.

55

ನಟ ವಿಶಾಲ್‌ ಅವರು ಸಿನಿಮಾ ರಂಗದಲ್ಲಾಗಲೀ ಹೇಳಿಕೊಳ್ಳುವಷ್ಟು ಯಶಸ್ಸು ಪಡೆದಿಲ್ಲ. ಅಷ್ಟೇ ಅಲ್ಲದೆ ವೈಯಕ್ತಿಕ ಜೀವನ ಕೂಡ ಚೆನ್ನಾಗಿಲ್ಲ. ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಆದಷ್ಟು ಬೇಗ ಮದುವೆ ಆಗಲಿ ಎಂದು ಹಾರೈಸೋಣ.

Read more Photos on
click me!

Recommended Stories