ಸಮ್ಮರ್‌ ಹಾಲಿಡೇಗೆ ತೆರಳಿದ ಲವ್‌ ಬರ್ಡ್ಸ್‌ ಜಾನ್ವಿ ಕಪೂರ್ ಮತ್ತು ಶಿಖರ್ ಪಹಾರಿಯಾ

Published : Apr 16, 2023, 03:22 PM IST

ಬಾಲಿವುಡ್‌ ನಟಿ ಜಾನ್ವಿ ಕಪೂರ್‌ (Janhvi Kapoor) ಮತ್ತೆ ಸುದ್ದಿಯಲ್ಲಿದ್ದಾರೆ. ಜಾನ್ವಿ ಕಪೂರ್‌ ಅವರು ತಮ್ಮ ರೂಮರ್ಡ್‌ ಬಾಯ್‌ಫ್ರೆಂಡ್‌ ಶಿಖರ್‌ ಪಹಾರಿಯಾ  (Shikhar Pahariya) ಜೊತೆ ಹಾಲಿಡೇಗೆ ಹೊರಟಿದ್ದಾರೆ. ಇಬ್ಬರೂ ಏರ್‌ಪೋರ್ಟ್‌ಗೆ ಆಗಮಿಸಿದ ವೀಡಿಯೋ ಮತ್ತು ಫೋಟೋಗಳು ಸಖತ್‌ ವೈರಲ್‌ ಆಗಿದೆ. ಆದರೆ ಈ ಜೋಡಿ ಎಲ್ಲಿಗೆ ಹೋರಟ್ಟಿದ್ದಾರೆ ಎಂಬ ಯಾವುದೇ ಮಾಹಿತಿ ಹೊರಬಂದಿಲ್ಲ

PREV
18
ಸಮ್ಮರ್‌ ಹಾಲಿಡೇಗೆ ತೆರಳಿದ ಲವ್‌ ಬರ್ಡ್ಸ್‌ ಜಾನ್ವಿ ಕಪೂರ್ ಮತ್ತು ಶಿಖರ್ ಪಹಾರಿಯಾ

ಜಾನ್ವಿ ಕಪೂರ್ ಮತ್ತು ಶಿಖರ್ ಪಹಾರಿಯಾ ಭಾನುವಾರ ಬೆಳಿಗ್ಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಬೇಸಿಗೆ ರಜೆಗಾಗಿ ನಗರದಿಂದ ಹೊರಟಿದ್ದಾರೆ. 

28
Janhvi Kapoor

ಈ ಸಮಯದ್ಲಲಿ ಜಾನ್ವಿ ಕಪೂರ್‌ ದೊಡ್ಡ ಸೈಜ್‌ ಬ್ಲೇಜರ್ ಸೂಟ್‌ ಧರಿಸಿ ಸಖತ್‌ ಕೂಲ್‌ ಲುಕ್‌ನಲ್ಲಿ ಕಾಣಿಸಿಕೊಂಡರು.  ಆದರೆ ಅವರ ಗೆಳೆಯ ಶಿಖರ್ ಪಹಾರಿಯಾ  ಕ್ಯಾಶುಯಲ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡರು

38

ಈ ತಿಂಗಳ ಆರಂಭದಲ್ಲಿ, ಜಾನ್ವಿ ಮತ್ತು ಶಿಖರ್ ತಿರುಮಲದಲ್ಲಿರುವ ಪ್ರಸಿದ್ಧ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. ಶಿಖರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಜೋಡಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.

48

ಮೊದಲು ರಿಲೆಷನ್‌ಶಿಪ್‌ನಲ್ಲಿದ್ದ ಜಾಹ್ನವಿ ಕಪೂರ್ ಮತ್ತು ಶಿಖರ್ ಪಹಾರಿಯಾ ಜೋಡಿ  ಕೆಲವು ಕಾಲದ ನಂತರ ಮತ್ತೆ ಹತ್ತಿರವಾಗಿದ್ದಾರೆ ಎಂದು ETimes ಕಳೆದ ವರ್ಷ ಬಹಿರಂಗಪಡಿಸಿತ್ತು.

58

ಶಿಖರ್ ಪಹಾರಿಯಾ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್‌ಕುಮಾರ್ ಶಿಂಧೆ ಅವರ ಮೊಮ್ಮಗ. ದೀರ್ಘಕಾಲ ಡೇಟಿಂಗ್ ಮಾಡಿದ ನಂತರ,   ಸ್ವಲ್ಪ ಸಮಯದ ಇಬ್ಬರೂ ದೂರವಾಗಿದ್ದರು ಮತ್ತು ಡಿಸೆಂಬರ್ 2022 ರಲ್ಲಿ ಮತ್ತೆ ಒಂದಾದರು. 

68

ಅಷ್ಟೇ ಅಲ್ಲ  ಶಿಖರ್‌ ಜಾನ್ವಿಯೊಂದಿಗೆ ಪಾರ್ಟಿಗಳಲ್ಲಿ ಹೆಚ್ಚಾಗಿ ಗುರುತಿಸಲ್ಪಡುತ್ತಾರೆ. ಎನ್‌ಎಂಎಸಿಸಿ ಉದ್ಘಾಟನಾ ಸಮಾರಂಭದಲ್ಲಿ ಅವರು ಬೋನಿ ಕಪೂರ್ ಜೊತೆಗಿದ್ದರು.
 

78

ಜಾನ್ವಿ ಕಪೂರ್ ನಿತೇಶ್ ತಿವಾರಿ ನಿರ್ದೇಶನದ 'ಬವಾಲ್' ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ, ಇದರಲ್ಲಿ ಅವರು ವರುಣ್ ಧವನ್ ಅವರೊಂದಿಗೆ ಫ್ರೇಮ್ ಹಂಚಿಕೊಳ್ಳಲಿದ್ದಾರೆ. ಈ ಚಿತ್ರವು ಅಕ್ಟೋಬರ್ 6 ರಂದು ತೆರೆಗೆ ಬರಲಿದೆ. 

 

88
janhvi kapoor

ಇದರ ಹೊರತಾಗಿ, ಜಾನ್ವಿ ಕಪೂರ್ ತನ್ನ ಟಾಲಿವುಡ್ ಚೊಚ್ಚಲ 'NTR30' ಮೂಲಕ ಜೂನಿಯರ್ ಎನ್ಟಿಆರ್ ಜೊತೆ ನಟಿಸಲಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಅವರು ಅದೇ ಚಿತ್ರೀಕರಣವನ್ನು ಪ್ರಾರಂಭಿಸಿದರು.
 

Read more Photos on
click me!

Recommended Stories