ಕರಣ್ ಜೋಹರ್ ವಿರುದ್ಧ ಕಂಗನಾ ರಣಾವತ್ ಮತ್ತೆ ವಾಗ್ದಾಳಿ; ಚಾಚಾ ಚೌಧರಿ ಎಂದ ನಟಿ

Published : Apr 15, 2023, 05:09 PM IST

ಕಂಗನಾ ರಣಾವತ್‌ (Kangana Ranuat) ಇತರರ ಮೇಲೆ ಕಿಡಿಕಾರುವುದು ಸಾಮಾನ್ಯ ವಿಷಯ. ಆದರಲ್ಲೂ ಕರಣ್‌ ಜೋಹರ್‌ (Karan Johar) ಅವರ ಮೇಲೆ ಕಂಗನಾ ಅವಕಾಶ ಸಿಕ್ಕಾಗೆಲ್ಲಾ ವಾಗ್ದಾಳಿ ನಡೆಸುತ್ತಾರೆ. ಈ ಮತ್ತೆ ಕಂಗನಾ ಅದೇ ಕೆಲಸ ಮಾಡಿದ್ದಾರೆ. ಕರಣ್‌ ಅವರ ಹಳೆಯ ವೀಡೀಯೋವೊಂದನ್ನು ಹಂಚಿಕೊಂಡು ಟಾರ್ಗೆಟ್‌ ಮಾಡಿದ್ದಾರೆ. 

PREV
17
ಕರಣ್ ಜೋಹರ್ ವಿರುದ್ಧ ಕಂಗನಾ ರಣಾವತ್ ಮತ್ತೆ ವಾಗ್ದಾಳಿ; ಚಾಚಾ ಚೌಧರಿ ಎಂದ ನಟಿ

ಕಂಗನಾ ರಣಾವತ್ ಇತ್ತೀಚೆಗೆ ಕರಣ್ ಜೋಹರ್ ಅವರ ವೈರಲ್ ವೀಡಿಯೊವನ್ನು ತಮ್ಮ ಸಾಮಾಜಿಕ ಮಾಧ್ಯಮ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.  ಮತ್ತೊಮ್ಮೆ ಕರಣ್ ಜೋಹರ್ ಅವರನ್ನು ಚಾಚಾ ಚೌಧರಿ ಎಂದು ಕರೆದಿದ್ದಾರೆ.

27

ಕಂಗನಾ ರಣಾವತ್ ಮತ್ತೊಮ್ಮೆ ಕರಣ್ ಜೋಹರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಕರಣ್ ಅವರ ಹಳೆಯ ವೀಡಿಯೊವನ್ನು ಕಂಗನಾ ಹಂಚಿಕೊಂಡಿದ್ದಾರೆ. ಇದರಲ್ಲಿ ಕರಣ್ ಅವರು 'ಮೂವಿ ಮಾಫಿಯಾ' ಎಂಬ ಕಂಗನಾ ಹೇಳಿಕೆಗೆ ಪ್ರತಿಕ್ರಿಯಿಸುತ್ತಿದ್ದಾರೆ. 

37

ಇದೀಗ ಕಂಗನಾ ಈ ವಿಡಿಯೋ ಹಂಚಿಕೊಳ್ಳುವ ಮೂಲಕ ಮತ್ತೊಮ್ಮೆ ಕರಣ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ ಮತ್ತು ಕರಣ್‌ ಅವರ ಮೇಲೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

47

 2017ರಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ನಡೆದ ಸಮಾರಂಭದಲ್ಲಿ ಕಂಗನಾ ಬಗ್ಗೆ ಮಾತನಾಡುತ್ತಿರುವ ಕರಣ್‌ ಅವರ ವೀಡೀಯೋ ಆದಾಗಿದೆ

57

'ಸಿನಿಮಾ ಮಾಫಿಯಾ ಎಂದು, ನಮ್ಮನ್ನೇನೆಂದು ಅವರು ಭಾವಿಸುತ್ತಾರೆ? ನಾವೇನು ಖಾಳಿ ಕೂತಿದ್ದೀವಾ? ಅವರ ಜೊತೆ ಕೆಲಸ ಮಾಡುತ್ತಿಲ್ಲ ಎಂದ ಮಾತ್ರಕ್ಕೆ ನಾವೇನು ಸುಖಾ ಸುಮ್ಮನೆ ಟೈಮ್ ವೇಸ್ಟ್ ಮಾಡುತ್ತಿದ್ದೇವೆ ಎಂದರ್ಥವೇ?

67

ಈಗ ಮತ್ತೆ ಅದೇ ಹಳೆಯ ವೀಡಿಯೊವನ್ನು ಕಂಗನಾ ಹಂಚಿಕೊಂಡಿದ್ದಾರೆ. 'ನಿಮ್ಮ ಒಳ್ಳೆಯ ಮಾತುಗಳಿಗಾಗಿ ಚಾಚಾ ಚೌಧರಿ ಧನ್ಯವಾದಗಳು. ನಾನು ಚಲನಚಿತ್ರ ನಿರ್ಮಾಪಕ ಮತ್ತು ನಿರ್ಮಾಪಕನಾಗಿ ನನ್ನನ್ನು ಸಾಬೀತುಪಡಿಸಿದಾಗ. ಆಮೇಲೆ ನಿನ್ನ ಮುಖಕ್ಕೆ ಉಜ್ಜುತ್ತೇನೆ,’ ಎಂದು ಬರೆದಿದ್ದಾರೆ.

77

ಕೆಲವು ವರ್ಷಗಳ ಹಿಂದೆ ಕರಣ್ ಅವರ ‘ಕಾಫಿ ವಿತ್ ಕರಣ್’ ಕಾರ್ಯಕ್ರಮಕ್ಕೆ ಕಂಗನಾ ಹೋದಾಗ ಕರಣ್ ಅವರನ್ನು ಮೂವಿ ಮಾಫಿಯಾ ಎಂದು ಕರೆದರು. ಆದರ ನಂತರ ಕಂಗನಾ ಮತ್ತು ಕರಣ್ ಪರಸ್ಪರರ ವಿರುದ್ಧ ಅನೇಕ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. 

Read more Photos on
click me!

Recommended Stories