6ನೇ ತರಗತಿಯಿಂದ ಒಂದೇ ಹುಡುಗಿಯನ್ನು ಡೇಟ್ ಮಾಡಿ ಮದುವೆಯಾಗಿದ್ದ KK
First Published | Jun 1, 2022, 6:16 PM ISTಖ್ಯಾತ ಗಾಯಕ ಕೃಷ್ಣ ಕುಮಾರ್ ಕುನ್ನತ್ (Krishnakumar Kunnath) ಅಂದರೆ KK ಅವರು ಮೇ 31 ರ ರಾತ್ರಿ ಕೋಲ್ಕತ್ತಾದಲ್ಲಿ ನಿಧನರಾದರು. ಅವರು ಲೈವ್ ಕನ್ಸರ್ಟ್ ಸಮಯದಲ್ಲಿ ಪ್ರದರ್ಶನ ನೀಡುತ್ತಿದ್ದಾಗ, ಅವರ ಆರೋಗ್ಯ ಹದಗೆಟ್ಟಿತು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಚಿಕಿತ್ಸೆಯಲ್ಲಿ ನಿಧನರಾದರು. ಅವರ ನಿಧನಕ್ಕೆ ಬಾಲಿವುಡ್ ಮಾತ್ರವಲ್ಲ ಇಡೀ ದೇಶವೇ ಶೋಕದಲ್ಲಿ ಮುಳುಗಿದೆ. ಅವರ ನಿಧನಕ್ಕೆ ಪ್ರಧಾನಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. 6ನೇ ತರಗತಿಯಿಂದ ಒಂದೇ ಹುಡುಗಿಯನ್ನು ಡೇಟ್ ಮಾಡಿ ಮದುವೆಯಾದ KK ಅವರ ಲವ್ ಸ್ಟೋರಿ ಇಲ್ಲಿದೆ.