ಲೋಕಸಭಾ ಚುನಾವಣೆ ಮತ್ತಷ್ಟು ಕಲರ್‌ಫುಲ್ ಆಗುತ್ತಿದೆ. ರಾಜಕೀಯ ನಾಯಕರು ಹೇಳಿಕೆ, ವಾಕ್ಸಮರ ಜೋರಾಗುತ್ತಿದೆ. ಇದರ ನಡುವೆ ಸೆಲೆಬ್ರೆಟಿಗಳು ರಾಜಕೀಯಕ್ಕೆ ಧುಮುಕುತ್ತಿದ್ದಾರೆ. ಇದೀಗ ಮತ್ತೊಬ್ಬ ಸಿನಿ ತಾರೆ ಲೋಕಸಭಾ ಚುನಾವಣೆ ಅಖಾಡಕ್ಕಿಳಿಯುವ ಸೂಚನೆ ಸಿಕ್ಕಿದೆ.
ಬಾಲಿವುಡ್ ನಟ ಗೋವಿಂದ್ ಮುಂಬೈನ ನಾರ್ತ್ ವೆಸ್ಟ್ ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಗೋವಿಂದ್‌ಗೆ ಟಿಕೆಟ್ ನೀಡಲು ಸಜ್ಜಾಗಿದೆ.
ಕೆಲ ದಿನಗಳ ಹಿಂದೆ ನಟ ಗೋವಿಂದ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ. ಈ ವೇಳೆ ನಾರ್ತ್ ವೆಸ್ಟ್ ಕ್ಷೇತ್ರದಿಂದ ಗೋವಿಂದ್‌ಗೆ ಟಿಕೆಟ್ ನೀಡಲು ಶಿಂಧೆ ಬಣ ಒಪ್ಪಿಕೊಂಡಿದೆ ಅನ್ನೋ ಮಾಹಿತಿಗಳು ಹೊರಬಿದ್ದಿದೆ.
ಬಿಜೆಪಿ ಹಾಗೂ ಶಿಂಧೆ ಶಿವಸೇನೆ ಸೀಟು ಹಂಚಿಕೆ ಮಾತುಕತೆ ನಡೆಸಿದೆ. ಈ ಪೈಕಿ ಮುಂಬೈ ನಾರ್ತ್ ವೆಸ್ಟ್ ಕ್ಷೇತ್ರವನ್ನು ಗೋವಿಂದ್‌ಗೆ ನೀಡುವಂತೆ ಶಿವಸೇನೆ, ಬಿಜೆಪಿಗೆ ಸೂಚಿಸಿದೆ.
fadnavis
ಬಿಜೆಪಿ ಹಾಗೂ ಶಿವಸೇನೆ ಪ್ರಚಾರದ ವೇಳೆ ಕೆಲ ಬಾಲಿವುಡ್ ನಟ ನಟಿಯರನ್ನು ಬಳಸಿಕೊಳ್ಳಲು ಮುಂದಾಗಿದೆ. ಈ ಮೂಲಕ ಈ ಬಾರಿಯ ಚುನಾವಣೆ ಕಣವನ್ನು ಮತ್ತಷ್ಟು ರಂಗೇರಿಸಲು ಪ್ಲಾನ್ ಮಾಡಿದೆ.
ಏಪ್ರಿಲ್ 19 ರಿಂದ ಮಹಾರಾಷ್ಟ್ರದಲ್ಲಿ ಚುನಾವಣೆ ಆರಂಭಗೊಳ್ಳಲಿದೆ. ಒಟ್ಟು 48 ಕ್ಷೇತ್ರಗಳಿಗೆ 5 ಹಂತದಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 19, ಮೇ. 7, ಮೇ.13 ಹಾಗೂ ಮೇ 20ಕ್ಕೆ ಮತದಾನ ನಡೆಯಲಿದೆ.
ಮುಂಬೈ ಮಹಾನಗರದಲ್ಲಿ 6 ಲೋಕಸಭಾ ಕ್ಷೇತ್ರಗಳಿವೆ. ಈ ಪೈಕಿ ನಾರ್ತ್ ವೆಸ್ಟ್ ಕ್ಷೇತ್ರವನ್ನು ಗೋವಿಂದ್‌ಗೆ ನೀಡಲು ತಯಾರಿ ನಡೆದಿದೆ. ಇನ್ನುಳಿದ ಮುಂಬೈ ಸೌತ್, ಮುಂಬೈ ಸೌತ್ ಸೆಂಟ್ರಲ್, ಮುಂಬೈ ನಾರ್ತ್ ಸೆಂಟ್ರಲ್, ಮುಂಬೈ ನಾರ್ತ್ ಈಸ್ಟ್ ಹಾಗೂ ಮುಂಬೈ ನಾರ್ತ್ ಕ್ಷೇತ್ರಗಳಲ್ಲಿ ಬಿಜೆಪಿ-ಶಿವಸೇನೆ ಸೀಟು ಹಂಚಿಕೆ ಮಾಡಲಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಇಬ್ಬಾಗವಾಗದ ಶಿವಸೇನೆ ಮೈತ್ರಿ ಮೂಲಕ ಸ್ಪರ್ದಿಸಿತ್ತು. ಬಿಜೆಪಿ 23 ಸ್ಥಾನ ಗೆದ್ದರೆ, ಶಿವಸೇನೆ 18 ಸ್ಥಾನ ಗೆದ್ದುಕೊಂಡಿತ್ತು.