Published : Mar 22, 2024, 04:29 PM ISTUpdated : Mar 22, 2024, 04:36 PM IST
ನನಗೆ ಟಿಕೆಟ್ ನೀಡಿದ್ದಾರೆ, ಆದರೆ ರಾಜಕೀಯ ಪ್ರವೇಶ ಮಾಡಬೇಕೋ, ಬೇಡವೋ ಅನ್ನೋ ಗೊಂದಲವಿದೆ. ನಿಮ್ಮ ಅಭಿಪ್ರಾಯವೇನು ಎಂದು ನಟಿ ಊರ್ವಶಿ ರೌಟೇಲಾ ಹೇಳಿದ್ದಾರೆ. ಯಾವ ಪಕ್ಷದಿಂದ ರೌಟೇಲಾ ರಾಜಕೀಯ ಅದೃಷ್ಠ ಪರೀಕ್ಷೆ ನಡೆಸುತ್ತಾರೆ?
2024ರ ಲೋಕಸಭಾ ಚುನಾವಣೆಗೆ ಈಗಾಗಲೆ ಕೆಲ ಸಿನಿಮಾ ತಾರೆಯರಿಗೆ ಟಿಕೆಟ್ ನೀಡಲಾಗಿದೆ. ಇದರ ನಡುವೆ ಸದ್ದಿಲ್ಲದೆ ಊರ್ವಶಿ ರೌಟೇಲಾ ಚುನಾವಣಾ ಟಿಕೆಟ್ ಪಡೆದುಕೊಂಡಿದ್ದಾರೆ.
28
ಬಾಲಿವುಡ್ ನಟಿ ಊರ್ವಶಿ ರೌಟೇಲಾಗೆ ಲೋಕಸಭಾ ಚುನಾವಣಾ ಟಿಕೆಟ್ ನೀಡಲಾಗಿದೆ. ಈ ಸ್ಫೋಟಕ ಮಾತನ್ನು ಖುದ್ದು ಊರ್ವಶಿ ಬಹಿರಂಗಪಡಿಸುವ ಮೂಲಕ ಅಬಿಮಾನಿಗಳಿಗೆ ಶಾಕ್ ನೀಡಿದ್ದಾರೆ.
38
ಲೋಕಸಭಾ ಚುನಾವಣಾ ಕಾವು ಏರುತ್ತಿದ್ದಂತೆ ಮಾಧ್ಯಮಗಳಿಗೆ ಸಿಕ್ಕ ಊರ್ವಶಿಗೆ ಚುನಾವಣೆ ಆಸಕ್ತಿ ಕುರಿತು ಪ್ರಶ್ನಿಸಲಾಗಿದೆ. ಈ ವೇಳೆ ರೌಟೇಲಾ, ನನಗೆ ಈಗಾಗಲೇ ಲೋಕಸಭಾ ಚುನಾವಣಗೆ ಸ್ಪರ್ಧಿಸಲು ಟಿಕೆಟ್ ನೀಡಿದ್ದಾರೆ ಎಂದಿದ್ದಾರೆ.
48
ಟಿಕೆಟ್ ಸಿಕ್ಕಿದೆ. ಆದರೆ ನಾನು ರಾಜಕೀಯಕ್ಕೆ ಪ್ರವೇಶ ಮಾಡಬೇಕೋ , ಬೇಡವೇ? ಅನ್ನೋದು ನಿರ್ಧರಿಸಿಲ್ಲ. ಈ ಕುರಿತು ನನಗೆ ಕೆಲ ಗೊಂದಲಗಳಿವೆ ಎಂದು ರೌಟೇಲಾ ಹೇಳಿದ್ದಾರೆ.
58
ಲೋಕಸಭಾ ಚುನಾವಣೆ ಸ್ಪರ್ಧೆ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಊರ್ವಶಿ ಕೇಳಿದ್ದಾರೆ. ಆದರೆ ರೌಟೇಲಾ ಮಾತಿನ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಊರ್ವಶಿ ಸ್ಪರ್ಧೆ ಕುರಿತು ಭಾರಿ ಚರ್ಚೆಯಾಗುತ್ತಿದೆ.
68
ರಾಜಕೀಯ ಬೇಡವೇ ಬೇಡ, ಸಿನಿಮಾ ಕಡೆ ಗಮನಕೇಂದ್ರಿಕರಿಸಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಬಾಲಿವುಡ್‌ನಲ್ಲಿ ಯಾವುದೇ ಭವಿಷ್ಯ ಇಲ್ಲ ಎಂದು ಅರಿತ ಊರ್ವಶಿ ಇದೀಗ ರಾಜಕೀಯದಲ್ಲಿ ಅದೃಷ್ಠ ಪರೀಕ್ಷೆ ಮುಂದಾಗಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
78
ಊರ್ವಶಿಗೆ ಟಿಕೆಟ್ ನೀಡಿದ ಪಕ್ಷ ಯಾವುದು? ಯಾವ ಕ್ಷೇತ್ರದ ಟಿಕೆಟ್ ನೀಡಲಾಗಿದೆ ಅನ್ನೋ ಮಾಹಿತಿಗಳನ್ನು ಊರ್ವಶಿ ಬಹಿರಂಗಪಡಿಸಿಲ್ಲ. ಆದರೆ ಊರ್ವಶಿ ನೀಡಿದ ಈ ಹೇಳಿಕೆ ಲೋಕಸಭಾ ಅಖಾಡ ಮತ್ತಷ್ಟು ರಂಗೇರಿಸಿದೆ.
88
ಊರ್ವಶಿಗೆ ಟಿಕೆಟ್ ನೀಡಿದ ಪಕ್ಷ ಯಾವುದು? ಯಾವ ಕ್ಷೇತ್ರದ ಟಿಕೆಟ್ ನೀಡಲಾಗಿದೆ ಅನ್ನೋ ಮಾಹಿತಿಗಳನ್ನು ಊರ್ವಶಿ ಬಹಿರಂಗಪಡಿಸಿಲ್ಲ. ಆದರೆ ಊರ್ವಶಿ ನೀಡಿದ ಈ ಹೇಳಿಕೆ ಲೋಕಸಭಾ ಅಖಾಡ ಮತ್ತಷ್ಟು ರಂಗೇರಿಸಿದೆ.