ಯಾವಾಗ ಬಂತು ಯಾವಾಗ ಹೋಯಿತು ಎಂದು ತಿಳಿಯದಷ್ಟು ನೆಲ ಕಚ್ಚಿದ ಆಮೀರ್‌ ಸಿನಿಮಾಗಳಿವು

Published : Aug 04, 2022, 06:20 PM IST

ಈ ದಿನಗಳಲ್ಲಿ ಲಾಲ್ ಸಿಂಗ್ ಚಡ್ಡಾ (Laal Singh Chaddha ) ಪ್ರಚಾರದಲ್ಲಿ ನಿರತರಾಗಿರುವ ಆಮೀರ್ ಖಾನ್ (Aamir Khan) ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದು ಕರೆಯಲಾಗುತ್ತದೆ.  ಅವರ ಪ್ರತಿಯೊಂದು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತವೆ. ಆದರೆ ಅವರ ಹಲವು ಚಿತ್ರಗಳು ಸಂಪೂರ್ಣವಾಗಿ ನೆಲಕಚ್ಚಿವೆ. ಅವುಗಳು ಯಾವಾಗ ಬಂದವು, ಯಾವಾಗ ಹೋದವು ಎಂಬುದೇ ತಿಳಿದಿಲ್ಲ. ಆಮೀರ್ ಖಾನ್ ಅವರ ಅಂತಹ 11 ಫ್ಲಾಪ್‌ ಚಿತ್ರಗಳು ಇಲ್ಲಿವೆ.

PREV
111
ಯಾವಾಗ ಬಂತು ಯಾವಾಗ ಹೋಯಿತು ಎಂದು ತಿಳಿಯದಷ್ಟು  ನೆಲ ಕಚ್ಚಿದ ಆಮೀರ್‌ ಸಿನಿಮಾಗಳಿವು
ಧೋಬಿ ಘಾಟ್ (2011):

ಈ ಚಿತ್ರ ನಿರ್ದೇಶಕರು ಆಮೀರ್ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್.  ಧೋಬಿ ಘಾಟ್ ಸಿನಿಮಾದಲ್ಲಿ ಆಮೀರ್ ಹೊರತುಪಡಿಸಿ ಪ್ರತೀಕ್ ಬಬ್ಬರ್, ಕೃತಿ ಮಲ್ಹೋತ್ರಾ ಮತ್ತು ಮೋನಿಕಾ ಡೋಗ್ರಾ ಪ್ರಮುಖ ಪಾತ್ರಗಳನ್ನು ಹೊಂದಿದ್ದರು. ಚಿತ್ರವು ಸುಮಾರು 13.77 ಕೋಟಿ ಗಳಿಸಿತ್ತು ಮತ್ತು ಫ್ಲಾಪ್ ಎಂದು ಸಾಬೀತಾಯಿತು.


 

211
ಮೇಳಾ (2000)

ಈ ಚಿತ್ರವನ್ನು ಧರ್ಮೇಶ್ ದರ್ಶನ್ ನಿರ್ದೇಶಿಸಿದ್ದಾರೆ ಮತ್ತು ಆಮೀರ್ ಖಾನ್ ಅವರ ಸಹೋದರ ಫೈಸಲ್ ಖಾನ್ ಮತ್ತು ಟ್ವಿಂಕಲ್ ಖನ್ನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಕೇವಲ 15 ಕೋಟಿ ರೂಪಾಯಿ ಗಳಿಸಿತು ಮತ್ತು ಆ ವರ್ಷದ ಅತಿದೊಡ್ಡ ದುರಂತವೆಂದು ಸಾಬೀತಾಯಿತು.

311
1947 ಅರ್ಥ್ (1999)

ದೀಪಾ ಮೆಹ್ತಾ ನಿರ್ದೇಶನದ ಈ ಚಿತ್ರದಲ್ಲಿ ಆಮೀರ್ ನಂದಿತಾ ದಾಸ್, ರಾಹುಲ್ ಖನ್ನಾ, ಕಿಟ್ಟು ಗಿದ್ವಾನಿ ಮತ್ತು ಗುಲ್ಶನ್ ಗ್ರೋವರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ದುರಂತ ಎಂದು ಸಾಬೀತಾಯಿತು. ಇದರ ಬಾಕ್ಸ್ ಆಫೀಸ್  ಕಲೆಕ್ಷನ್ ಸುಮಾರು 3.5 ಕೋಟಿ ಆಗಿತ್ತು.


 

411
ಅತಂಕ್‌ ಹಿ ಅತಂಕ್‌ (1995)

ದಿಲೀಪ್ ಶಂಕರ್ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್, ಜೂಹಿ ಚಾವ್ಲಾ ಮತ್ತು ಓಂ ಪುರಿ ಮುಂತಾದ ನಟರೊಂದಿಗೆ ಆಮೀರ್ ಖಾನ್ ನಟಿಸಿದ್ದಾರೆ. ಹಾಲಿವುಡ್ ಚಿತ್ರ 'ದಿ ಗಾಡ್ ಫಾದರ್' ನಿಂದ ಸ್ಫೂರ್ತಿ ಪಡೆದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸೋತಿತ್ತು. ಚಿತ್ರದ ಒಟ್ಟು ಕಲೆಕ್ಷನ್ ಸುಮಾರು 2.50 ಕೋಟಿ ರೂ.
 


 

511
ಬಾಜಿ (1995)

ಆಮೀರ್ ಖಾನ್, ಮಮತಾ ಕುಲಕರ್ಣಿ, ಪರೇಶ್ ರಾವಲ್ ಮತ್ತು ಮುಖೇಶ್ ರಿಷಿ ನಟಿಸಿರುವ ಈ ಚಿತ್ರವನ್ನು ಅಶುತೋಷ್ ಗೋವಾರಿಕರ್ ನಿರ್ದೇಶಿಸಿದ್ದಾರೆ. ಈ ಚಿತ್ರವೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿಲ್ಲ. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸುಮಾರು 5.2 ಕೋಟಿ ರೂ ಸಂಗ್ರಹಿಸಿತು.
 


 

611
ಪರಂಪರಾ (1993)

ಇದು ಬಹುತಾರಾಗಣದ ಚಿತ್ರವಾಗಿದ್ದು, ಇದರಲ್ಲಿ ಸುನಿಲ್ ದತ್ ಮತ್ತು ವಿನೋದ್ ಖನ್ನಾ ಅವರಂತಹ ಅನುಭವಿಗಳು ಆಮೀರ್ ಖಾನ್ ಅವರೊಂದಿಗೆ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ಸೈಫ್ ಅಲಿ ಖಾನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ತಯಾರಾದ ಈ ಚಿತ್ರವನ್ನು ಯಶ್ ಚೋಪ್ರಾ ನಿರ್ದೇಶಿಸಿದ್ದಾರೆ. ಆದರೆ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸೋಲು ಕಂಡಿತು. ಚಿತ್ರ ಕೇವಲ 1.50 ಕೋಟಿ ಗಳಿಸಿದೆ.

711
ಅಫ್ಸಾನಾ ಪ್ಯಾರ್ ಕಾ (1991)

ಈ ಚಿತ್ರದಲ್ಲಿ ಆಮೀರ್ ಖಾನ್ ಮತ್ತು ನೀಲಂ ಕೊಠಾರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಷಹಜಹಾನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಫುಲ್ ಫ್ಲಾಪ್. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸುಮಾರು 2.1 ಕೋಟಿ ಗಳಿಸಿತು.


 


 

811
ಜವಾನಿ ಜಿಂದಾಬಾದ್ (1990)

ಈ ಚಿತ್ರದಲ್ಲಿ ಆಮೀರ್ ಖಾನ್ ಮತ್ತು ಫರಾ ನಾಜ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇದನ್ನು ಅರುಣ್ ಭಟ್ ನಿರ್ದೇಶಿಸಿದ್ದಾರೆ. ಈ ಚಿತ್ರವು ಕನ್ನಡದ 'ಅವಳೇ ನನ್ನ ಹೆಂಡ್ತಿ'ಯ ಹಿಂದಿ ರಿಮೇಕ್ ಆಗಿತ್ತು. ಇದು ಗಲ್ಲಾಪೆಟ್ಟಿಗೆಯಲ್ಲಿ ದುರಂತ ಎಂದು ಸಾಬೀತಾಯಿತು. ವರದಿಗಳ ಪ್ರಕಾರ ಚಿತ್ರ ಕೇವಲ 1.3 ಕೋಟಿ ಗಳಿಸಿದೆ.


 

911
ಲವ್ ಲವ್ ಲವ್ (1989)

ಆಮೀರ್ ಖಾನ್ ಮತ್ತು ಜೂಹಿ ಚಾವ್ಲಾ ನಟಿಸಿರುವ ಈ ಚಿತ್ರವನ್ನು ಬಬ್ಬರ್ ಸುಭಾಷ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ವೇದ್ ಥಾಪರ್, ದಲೀಪ್ ತಾಹಿಲ್, ಗುಲ್ಶನ್ ಗ್ರೋವರ್ ಮತ್ತು ರಾಜಾ ಮುರಾದ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಸುಮಾರು 2.8 ಕೋಟಿ ಗಳಿಸಿದ ಈ ಚಿತ್ರವು ದುರಂತ ಎಂದು ಸಾಬೀತಾಯಿತು.
 

1011
ರಾಕ್‌ (1989)

ಚಿತ್ರದ ನಿರ್ದೇಶಕರು ಆದಿತ್ಯ ಭಟ್ಟಾಚಾರ್ಯ. ಆಮೀರ್ ಖಾನ್ ಜೊತೆಗಿನ ಈ ಚಿತ್ರದಲ್ಲಿ ಸುಪ್ರಿಯಾ ಪಾಠಕ್, ಪಂಕಜ್ ಕಪೂರ್ ಮತ್ತು ಜಗದೀಪ್ ಜಿ ಹಿರಿಯ ನಟರಾಗಿದ್ದರು. ಇನ್ನೂ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ತನ್ನ ವಿಶ್ವಾಸವನ್ನು ಗಳಿಸಲು ಸಾಧ್ಯವಾಗಲಿಲ್ಲ ಮತ್ತು ದುರಂತವಾಗಿ ಸಾಬೀತಾಯಿತು. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸುಮಾರು 50 ಲಕ್ಷ ರೂ ಗಳಿಕೆ ಮಾಡಿತ್ತು.

1111
ದೌಲತ್‌ ಕಿ ಜಂಗ್‌ (1992)

ಎ. ಕೇದಾರ್ ನಿರ್ದೇಶಿಸಿದ ಈ ಚಿತ್ರದಲ್ಲಿ ಆಮೀರ್ ಖಾನ್, ಖಾದರ್ ಖಾನ್, ಜೂಹಿ ಚಾವ್ಲಾ, ಕಿರಣ್ ಕುಮಾರ್, ಪರೇಶ್ ರಾವಲ್ ಮತ್ತು ದಲೀಪ್ ತಾಹಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಕೆಟ್ಟದಾಗಿ ಸೋತಿತು. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸುಮಾರು 2.3 ಕೋಟಿ ಗಳಿಸಿತು.

Read more Photos on
click me!

Recommended Stories