ಲಾಲ್ ಸಿಂಗ್ ಚಡ್ಡಾ ಗಳಿಸಿದ್ದು ಕೇವಲ ಆಮೀರ್ ಖಾನ್ ಸಂಭಾವನೆ ಮಾತ್ರ!

First Published | Aug 19, 2022, 5:06 PM IST

ಆಮೀರ್ ಖಾನ್ (Aamir Khan) ಅವರ ಚಿತ್ರ ಲಾಲ್ ಸಿಂಗ್ ಚಡ್ಡಾ (Laal Singh Chaddha) ಬಿಡುಗಡೆಯಾಗಿ 8 ದಿನಗಳು ಕಳೆದಿವೆ. ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸಾಧನೆ ತೋರಲು ವಿಫಲವಾಗಿದೆ. ಚಿತ್ರದ 8 ದಿನಗಳ ವ್ಯವಹಾರದ ಬಗ್ಗೆ ಮಾತನಾಡುವುದಾದರೆ, ಕೇವಲ 51.89 ಕೋಟಿ ರೂ ಕಲೆಕ್ಷನ್ ಮಾಡಿದೆ. ಗುರುವಾರವೂ ಚಿತ್ರಕ್ಕೆ ಕೆಲವೇ ಪ್ರೇಕ್ಷಕರು ಸಿಕ್ಕಿದ್ದು, ಕೇವಲ 1.50 ಕೋಟಿ ಬ್ಯುಸಿನೆಸ್ ಆಗಿದೆ. ಅಂದಹಾಗೆ, ಲಾಲ್ ಸಿಂಗ್ ಚಡ್ಡಾ ಅವರು 8 ದಿನಗಳಲ್ಲಿ ಗಳಿಸಿದಷ್ಟೇ ಶುಲ್ಕವನ್ನು ಆಮೀರ್ ತಮ್ಮ ಪಾತ್ರಕ್ಕೆ ಸಂಭಾವನೆ ಪಡೆದಿದ್ದಾರೆ. ಈ ಚಿತ್ರದಲ್ಲಿ ಕೆಲಸ ಮಾಡಲು ಅಮೀರ್ ಸುಮಾರು 50 ಕೋಟಿ ರೂ ಚಾರ್ಜ್‌ ಮಾಡಿದ್ದರು. ಆಮೀರ್ ಹೊರತಾಗಿ, ಕರೀನಾ ಕಪೂರ್, ಮೋನಾ ಸಿಂಗ್ ಸೇರಿ ಇತರ ತಾರೆಯರು ಎಷ್ಟು ಶುಲ್ಕವನ್ನು ಪಡೆದಿದ್ದಾರೆ ಎಂಬ ವಿವರ ಇಲ್ಲಿದೆ.

ಆಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾದ ಒಟ್ಟು ಬಜೆಟ್ 180 ಕೋಟಿ ಮತ್ತು ಇದರಲ್ಲಿ ಸುಮಾರು 70 ಕೋಟಿಗಳನ್ನು ಚಿತ್ರದ ತಾರಾ ಬಳಗಕ್ಕೆ ಸಂದಾಯ ಮಾಡಲಾಗಿದೆ. ವರದಿಗಳ ಪ್ರಕಾರ ಆಮೀರ್ ಬರೋಬ್ಬರಿ 50 ಕೋಟಿ ರೂ ಪಡೆದಿದ್ದಾರೆ

ಚಿತ್ರದಲ್ಲಿ ಕರೀನಾ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಕೆಲಸ ಮಾಡಿದ್ದಕ್ಕಾಗಿ ಅವರು ಸುಮಾರು 8 ಕೋಟಿ ರೂಪಾಯಿಗಳನ್ನು ತೆಗೆದುಕೊಂಡಿದ್ದಾರೆ. ಈ ಚಿತ್ರದ ಮೂಲಕ ಕರೀನಾ ಸುಮಾರು 2 ವರ್ಷಗಳ ನಂತರ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.

Tap to resize

ದಕ್ಷಿಣ ಭಾರತದ ಸೂಪರ್‌ಸ್ಟಾರ್ ನಾಗ ಚೈತನ್ಯ ಅವರು ಲಾಲ್ ಸಿಂಗ್ ಚಡ್ಡಾ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ವಈ ಚಿತ್ರದಲ್ಲಿ ಕೆಲಸ ಮಾಡಿದ್ದಕ್ಕಾಗಿ ಅವರು ಸುಮಾರು 6 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ವರದಿಗಳಿವೆ.

ಚಿತ್ರದಲ್ಲಿ ಆಮೀರ್ ಖಾನ್ ಅವರ ತಾಯಿಯಾಗಿ ನಟಿಸಿರುವ ಮೋನಾ ಸಿಂಗ್, ಚಿತ್ರದಲ್ಲಿ ಕೆಲಸ ಮಾಡಿದ್ದಕ್ಕಾಗಿ 2 ಕೋಟಿ ರೂ ಸಂಭಾವನೆ ಪಡೆದಿದ್ದಾರೆ. ಮೋನಾ ಈ ಹಿಂದೆ 3 ಈಡಿಯಟ್ಸ್ ಚಿತ್ರದಲ್ಲಿ ಆಮೀರ್ ಜೊತೆ ಕೆಲಸ ಮಾಡಿದ್ದರು.

ಚಿತ್ರದಲ್ಲಿ ಮಾನವ್ ವಿಜ್ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ಮಾಧ್ಯಮಗಳ ಸುದ್ದಿ ಪ್ರಕಾರ, ಈ ಚಿತ್ರದಲ್ಲಿ ಕೆಲಸ ಮಾಡಿದ್ದಕ್ಕಾಗಿ ಅವರು 1 ಕೋಟಿ ರೂ ಶುಲ್ಕ ಪಡೆದಿರುತ್ತಾರೆ.
 

ಲಾಲ್ ಸಿಂಗ್ ಚಡ್ಡಾ ಚಿತ್ರವು ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಮೊದಲ ದಿನವೇ ಚಿತ್ರ 11.7 ಕೋಟಿ ಗಳಿಸಿತ್ತು. ಚಿತ್ರದ ವ್ಯಾಪಾರ ಎರಡನೇ ದಿನದಲ್ಲಿ ಕುಸಿತ ಕಂಡಿದ್ದು, ಚಿತ್ರ 7.26 ಕೋಟಿ ಗಳಿಸಿದೆ. ಮೂರನೇ ದಿನ 9 ಕೋಟಿ ಗಳಿಸಿದೆ.

ಚಿತ್ರ ಬಿಡುಗಡೆಯಾದಾಗ ಸತತ 4 ರಜೆಗಳು ಬಂದವು, ಆದರೆ ಅದರಿಂದ ಸಿನಿಮಾಕ್ಕೆ ಯಾವುದೇ ಲಾಭವಾಗಿಲ್ಲ. ನಾಲ್ಕನೇ ದಿನಕ್ಕೆ ಚಿತ್ರ 10 ಕೋಟಿ ಗಳಿಸಿದೆ. ಐದನೇ ದಿನ 7.87 ಕೋಟಿ, ಆರನೇ ದಿನ 2.47 ಕೋಟಿ ಮತ್ತು ಏಳನೇ ದಿನ 2.09 ಕೋಟಿ. ಎಂಟನೇ ದಿನಕ್ಕೆ ಚಿತ್ರ ಬರೋಬ್ಬರಿ 1.50 ಕೋಟಿ ಗಳಿಸಿದೆ.
 

Latest Videos

click me!