ಅಂಜನಾದ್ರಿ ಬೆಟ್ಟದಲ್ಲಿ ಡಾ.ರಾಜ್ ಮೊಮ್ಮಕ್ಕಳು; ಅಪ್ಪು ಭಾವಚಿತ್ರದ ಶರ್ಟ್ ಧರಿಸಿ ಗಮನಸೆಳೆದ ಧೀರೆನ್

ಧೀರೆನ್ ರಾಮ್ ಕುಮಾರ್ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅಂದಹಾಗೆ ಧೀರೆನ್ ಶಿವ 123 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್ ಮುಗಿದಿದ್ದು ಇದೇ ತಿಂಗಳು ಅಭಿಮಾನಿಗಳ ಮುಂದೆ ಬರ್ತಿದೆ. 

ಡಾ.ರಾಜ್ ಕುಮಾರ ಕುಟುಂಬದಿಂದ ಮತ್ತೋರ್ವ ಸ್ಟಾರ್ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹೌದು ಅದು ಮತ್ಯಾರು ಅಲ್ಲ ಡಾ.ರಾಜ್ ಕುಮಾರ್ ಅವರ ಮಗಳ ಮಗ ಧೀರೆನ್ ರಾಮ್ ಕುಮಾರ್. ಮಾಸ್ ಹೀರೋ ಆಗಿ ಧೀರೆನ್ ಚಿತ್ರರಂಗದಲ್ಲಿ ಮಿಂಚಲು ಸಜ್ಜಾಗಿದ್ದಾರೆ. 

ರಾಜ್ ಕುಮಾರ್ ಮೊಮ್ಮಗಳು, ಧೀರೆನ್ ಸಹೋದರಿ ಈಗಾಗಲೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಧನ್ಯಾ ರಾಮ್ ಕುಮಾರ್ ನಟನೆಯ ಮೊದಲ ಸಿನಿಮಾ ಈಗಾಗಲೇ ರಿಲೀಸ್ ಆಗಿದೆ. ಧನ್ಯಾ ತಮಿಳು ಸಿನಿಮಾರಂಗಲ್ಲಿ ಮಿಂಚಲು ಸಜ್ಜಾಗಿದ್ದಾರೆ. 


ಇದೀಗ ಧೀರೆನ್ ರಾಮ್ ಕುಮಾರ್ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅಂದಹಾಗೆ ಧೀರೆನ್ ಶಿವ 123 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್ ಮುಗಿದಿದ್ದು ಇದೇ ತಿಂಗಳು ಅಭಿಮಾನಿಗಳ ಮುಂದೆ ಬರ್ತಿದೆ. 

ಆಗಸ್ಟ್ 26ರಂದು ಶಿವ 123 ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ. ಸದ್ಯ ಪ್ರಮೋಷನ್ ನಲ್ಲಿ ಧೀರೆನ್ ಬ್ಯುಸಿಯಾಗಿದ್ದಾರೆ. ಸಿನಿಮಾ ರಿಲೀಸ್‌ಗೂ ಮೊದಲೇ ಧೀರೆನ್ ಕುಟುಂಬದ ಜೊತೆ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ತಾಯಿ ಮತ್ತು ಸಹೋದರಿ ಜೊತೆ ಧೀರೆನ್ ಅಂಜನದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದು ವಿಶೇಷ ಪೂಜೆ ಸಲ್ಲಿಸಿದ್ದಾರೆ. 

ಧೀರೆನ್ ರಾಮ್ ಕುಮಾರ್ ಅವರನ್ನು ಹೊಸಪೇಟೆ ಜನ ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ಹೂವಿನ ಹಾರ ಹಾರಿ ಹೊಸಪೇಟೆಯ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಮೆರವಣಿಗೆ ಮಾಡಿ ಸಿಡಿಮದ್ದು ಸಿಡಿ ಹಬ್ಬ ಆಚರಿಸಿದ್ದಾರೆ.  ಹೊಸಪೇಟೆ ಜನರ ಪ್ರೀತಿಗೆ ಧೀರೆನ್ ಮೂಕವಿಸ್ಮಿತರಾಗಿದ್ದಾರೆ. 
 

ಅಂದಹಾಗೆ ಪರವ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಹೊಸಪೇಟೆ ಮೇಲೆ ವಿಶೇಷವಾದ ಪ್ರೀತಿ. ಹೊಸ ಪೇಟೆ ಜನರಿಗೂ ಸಹ ಅಪ್ಪು ಮೇಲೆ ತುಂಬಾ ಪ್ರೀತಿ. ಪುನೀತ್ ಹೊಸಪೇಟೆಗೆ ಭೇಟಿ ಕೊಟ್ಟಾಗಲೆಲ್ಲಾ ಅದ್ದೂರಿಯಾಗಿ ಸ್ವಾಗ ಮಾಡುತ್ತಿದ್ದರು. ಅಂಜನಾದ್ರಿ ಬೆಟ್ಟಕ್ಕೂ ಸಹ ಅಪ್ಪು ಆಗಾಗ ಭೇಟಿ ನೀಡುತ್ತಿದ್ದರು. ಇದೀಗ ಧೀರೆನ್ ರಾಮ್ ಕುಮಾರ್ ಭೇಟಿ ಮಾಡಿದ್ದಾರೆ. ಅಪ್ಪುಗೆ ತೋರಿದ ಪ್ರೀತಿಯನ್ನೇ ಧೀರೆನ್‌ಗೂ ಮೇಲು ಹರಿಸುತ್ತಿದ್ದಾರೆ. 
 

ಧೀರೆನ್ ರಾಮ್ ಕುಮಾರ್ ಹೊಸಪೇಟೆ ಭೇಟಿ ವೇಳೆ ಧರಿಸಿದ್ದ ಶರ್ಟ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರ ವಿರುವ ಶರ್ಟ್ ಧರಿಸಿದ್ದಾರೆ. ಶರ್ಟ್ ಮೇಲೆ ಪುನೀತ್ ರಾಜ್ ಕುಮಾರ್ ಸಿನಿಮಾಗಳ ಪೋಸ್ಟರ್ ಗಳಿವೆ. ಧೀರೆನ್ ಶರ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.        

Latest Videos

click me!