ಚಿಟ್ಟೆ ರೀತಿ ಹಾರಿ ಬಂದ ಉರ್ಫಿ; ಕಾಫಿ ಹಿಡ್ಕೊಳ್ಳುವ ಶೋಕಿ ಬೇಕಾ ಎಂದ ನೆಟ್ಟಿಗರು

First Published | Aug 19, 2022, 3:26 PM IST

ಲ್ಯಾವೆಂಡರ್‌ ಫ್ರಾಕ್‌ನಲ್ಲಿ ಮಿಂಚಿದ ಬಾಲಿವುಡ್‌ ಹಾಟ್ ನಟಿ ಉರ್ಫಿ ಜಾವೇದ್. ಮೊದಲ ಬಾರಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ ನೆಟ್ಟಿಗರು...

ಹಿಂದಿ ಬಿಗ್ ಬಾಸ್ ಓಟಿಟಿ ಸೀಸನ್‌ ಒಂದರಲ್ಲಿ ಕಾಣಿಸಿಕೊಂಡ ನಂತರ ಕಿರುತೆರೆ ನಟಿ ಉರ್ಫಿ ಜಾವೇದ್‌ ಜೀವನವೇ ಬದಲಾಗಿದೆ. ದೊಡ್ಡ ಸ್ಟಾರ್‌ಗಳಿಗಿಂತ ಹೆಚ್ಚಿಗೆ ಗಮನ ಸೆಳೆಯುತ್ತಿದ್ದಾರೆ.

ಉರ್ಫಿ ಜಾವೇದ್‌ ಕೈಯಲ್ಲಿ ಎಷ್ಟು ಸಿನಿಮಾ ಅಥವಾ ಸೀರಿಯಲ್ ಪ್ರಾಜೆಕ್ಟ್‌ಗಳಿದೆ ಗೊತ್ತಿಲ್ಲ ಆದರೆ ಸೋಷಿಯಲ್ ಮೀಡಿಯಾದಲ್ಲಿ ಕಲರ್‌ಫುಲ್ ಆಗಿ ಮಿಂಚುತ್ತಲೇ ಹಣ ಸಂಪಾದನೆ ಮಾಡುತ್ತಿದ್ದಾರೆ.

Tap to resize

ಹೌದು! ಈ ರೀತಿನೂ ಡ್ರೆಸ್ ಡಿಸೈನ್ ಮಾಡಬಹುದು ಎಂದು ಉರ್ಫಿ ಡಿಸೈನರ್ ತೋರಿಸಿಕೊಟ್ಟಿದ್ದಾರೆ. ಎಲೆಕ್ಟ್ರಿಕ್ ವಯರ್‌ನಿಂದ ಹಿಡಿದು ಹೂವರೆಗೂ ಎಲ್ಲವೂ ಬಳಸಿ ಡ್ರೆಸ್ ಡಿಸೈನ್ ಮಾಡಿದ್ದಾರೆ. 

ಉರ್ಫಿ ತುಂಡು ಬಟ್ಟೆ ಹಾಕಲಿ ಅಥವಾ ಮೈ ತುಂಬಾ ಸೀರೆ ಧರಿಸಲಿ ಟ್ರೋಲ್‌ಗಳಿಂದ ಮಾತ್ರ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಉರ್ಫಿ ಮಾತ್ರವಲ್ಲ ಆಕೆಯ ಡಿಸೈನರ್‌ನೂ ಟ್ರೋಲ್ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಉರ್ಫಿ ಮುಂಬೈನ ಜುಹೂವಿನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಸಿಜ್ಲಿಂಗ್‌ ಮಿನಿ ಲ್ಯಾವೆಂಡರ್‌ ಡ್ರೆಸ್‌ ಧರಿಸಿ ನೆಟ್ಟಿಗರ ಗಮನ ಸೆಳೆದಿದ್ದಾರೆ. 

ಲ್ಯಾವೆಂಡರ್‌ ಡ್ರೆಸ್‌ಗೆ ಲ್ಯಾವೆಂಡರ್‌ ಹೀಲ್ಸ್‌ ಧರಿಸಿರುವ ಕೈಯಲ್ಲಿ ಕಾಪಿ ಕಪ್ ಹಿಡಿದುಕೊಂಡಿದ್ದಾರೆ. ಪ್ಯಾಪರಾಜಿಗಳು ಎಷ್ಟೇ ಕೇಳಿದ್ದರೂ ಅದನ್ನು ಹಿಡಿದುಕೊಂಡು ಪೋಸ್ ಮಾಡಿರುವುದು ಈ ಶೋಕೆ ಬೇಕಾ ಎಂದು ಕಾಲೆಳೆದಿದ್ದಾರೆ.

Latest Videos

click me!