ಇಷ್ಟು ಫಿಟ್ ಆಗಿರೋ ಕೃತಿ ಸನೋನ್‌ ಹೊಟ್ಟೆಗೇನು ತಿಂತಾರೆ?

Published : Mar 23, 2023, 03:13 PM IST

ಕೃತಿ ಸನೋನ್‌  (Kriti Sanon) ಬಾಲಿವುಡ್‌ನ ಫಿಟ್‌ ನಟಿಯರಲ್ಲಿ ಒಬ್ಬರು. ಕೃತಿ ಅವರ ವೀಡೀಯೋವೊಂದು ವೈರಲ್‌ ಆಗಿದ್ದು ನಟಿ ಅದರಲ್ಲಿ ತಮ್ಮ ಡಯಟ್‌ ಸೀಕ್ರೆಟ್‌ ಬಹಿರಂಗ ಪಡಿಸಿದ್ದಾರೆ. ಅಷ್ಟಕ್ಕೂ ಕೃತಿ ಅವರ ಆಹಾರ ಕ್ರಮ ಹೇಗಿದೆ ಗೊತ್ತಾ? ಒಂದು ದಿನದಲ್ಲಿ ಅವರು ಏನೇನು ತಿನ್ನುತ್ತಾರೆ ನೋಡಿ ಇಲ್ಲಿದೆ ಪೂರ್ತಿ ವಿವರ.  

PREV
19
ಇಷ್ಟು ಫಿಟ್ ಆಗಿರೋ ಕೃತಿ ಸನೋನ್‌ ಹೊಟ್ಟೆಗೇನು ತಿಂತಾರೆ?

ಬೆಳ್ಳಿಗೆ ತಿಂಡಿಗೆ ಸಾಮಾನ್ಯವಾಗಿ ಕೃತಿ ಅವರ ಆಯ್ಕೆ ಪೋಹಾ, ಪ್ಯಾನ್‌ ಕೇಕ್‌, ಓಟ್ಸ್‌ ಅಥವಾ ಪಿನಟ್‌ ಬಟರ್‌ ಟೋಸ್ಟ್‌ ಮತ್ತು ಬೇಯಿಸಿದ ಮೊಟ್ಟೆ ಆಗಿರುತ್ತವೆ. ದಿನದಲ್ಲಿ ಬ್ರೇಕ್‌ಫಾಸ್ಟ್ ಕೃತಿಯ ಅವರ ಫೇವರೇಟ್‌ ಎಂದು ಹೇಳಿಕೊಂಡಿದ್ದಾರೆ.
 

29

ಮಧ್ಯಾಹ್ನ ಮತ್ತು ರಾತ್ರಿಯ ಊಟ ಹೆಚ್ಚು ಕಡಿಮೆ ಒಂದೇ ರೀತಿ ಇರುತ್ತದೆ ಎಂದಿದ್ದಾರೆ. ಆದರೆ ಅದರಲ್ಲಿ ಒಂದು ಹೊತ್ತು ಕಡ್ಡಾಯವಾಗಿ ಸಸ್ಯಹಾರ ಇರುತ್ತದೆ.

39

ಊಟದಲ್ಲಿ ಚಿಕನ್ ಕರಿ‌, ಮಟನ್ ಕರಿ‌, ದಾಲ್‌ ಚಾವಲ್‌, ರೊಟ್ಟಿ ಸಬ್ಜಿ ಹೆಚ್ಚಾಗಿ ಮನೆಯ ಊಟ ತಿನ್ನುತ್ತಾರೆ. ಆದರೆ ಬಟರ್‌ ಚಿಕನ್‌ ಮತ್ತು ರಾಜ್ಮಾ ಚಾವೆಲ್‌ ಅವರ ಫೇವರೇಟ್‌ ಜೊತೆಗೆ ಚೈನಿಸ್‌ ಕೂಡ ಇಷ್ಷ. 

49

ಪಾತ್ರಕ್ಕೆ ಅನುಗುಣವಾಗಿ ಡಯಟ್‌ ಬದಲಾಯಿಸುವ ಇವರು ಆ ಸಮಯದಲ್ಲಿ ಕಡಿಮೆ ಕಾರ್ಬೋಹೈಡ್ರೇಟ್‌ ಹೆಚ್ಚಾಗಿ ಆಹಾರ ಸೇವಿಸುತ್ತಾರಂತೆ. 

59

ಮಾವಿನ ಹಣ್ಣು ಕೃತಿಯ ಇಷ್ಷದ ಹಣ್ಣಾದರೆ, ಆಲೂಗೆಡ್ಡೆ, ಗೋಬಿ ಮತ್ತು ಬೆಂಡೆಕಾಯಿ ಫೇವರೇಟ್ ತರಕಾರಿಗಳು. ಆದರೆ ಇವರಿಗೆ ಹಸಿ ತರಕಾರಿ ಸಲಾಡ್‌ ಇಷ್ಷವಿಲ್ಲ ಬದಲಾಗಿ ಬಾಯಿಲ್ಡ್‌ ವೆಜಿಟೇಬಲ್‌ ಆಯ್ದುಕೊಳ್ಳುತ್ತಾರೆ.

69

ಕಾಫಿ ಮತ್ತು ಟೀ ಎರಡನ್ನು ಕುಡಿಯುವ ಕೃತಿ, ಇತ್ತೀಚಿನ ದಿನಗಳಲ್ಲಿ ಗೀ ಕಾಫಿಯಿಂದ ತಮ್ಮ ದಿನವನ್ನು ಶುರುಮಾಡುತ್ತಾರೆ ಎಂದಿದ್ದಾರೆ ಕೃತಿ. ಹಾಗೇ ಅವರಿಗೆ ಏಲಕ್ಕಿ ಟೀ ಇಷ್ಟವಂತೆ.

79

ಚೀಟ್‌ ದಿನಗಳಲ್ಲಿ ಚಾಟ್ಸ್‌, ಪಿಜ್ಹಾ ಬರ್ಗರ್‌ ತಿನ್ನುವ ಇವರು ಸ್ಟ್ಟೀಟ್‌ ಫುಡ್‌  ಸಹ ಸವಿಯುತ್ತಾರೆ. ಅದೇ ಸಮಯದಲ್ಲಿ ಚಾಕೋಲೇಟ್‌ನ ತಿನಿಸಿಗಳು ಇವರಿಗೆ ಅಚ್ಚುಮೆಚ್ಚು.

89

ಚಾಕಲೋಟ್‌ ಬಿಟ್ಟರೆ ದೇಸಿ ಸೀಹಿತಿಂಡಿಗಳಾದ ಜಾಮೂನು, ಕಾಜೂ ಬರ್ಫಿ ಮತ್ತು ರಸ್ಮಲೈ ಇಷ್ಪಡುವ ಕೃತಿ ಸನೋನ್‌ ಅವರಿಗೆ ದೆಹಲಿಯ ಬೇಕರಿಯೊಂದರ ಬೇಸನ್‌ ಬರ್ಫಿ ಸಖತ್‌ ಅಚ್ಚುಮೆಚ್ಚು.

99

ದಿನದಲ್ಲಿ ಎಂಟು ಗಂಟೆ ಮಲಗುವ ಕೃತಿ ಅವರು ಬಿಡುವಿನ ಸಮಯದಲ್ಲಿ  ಇನ್ನೂ ಹೆಚ್ಚು ಅಂದರೆ 9-10 ಗಂಟೆಗಳ ನಿದ್ರೆ ಮಾಡುತ್ತಾರಂತೆ. ಯಾವಾಗಲಾದರೊಮ್ಮೆ ಅಲ್ಕೋಹಾಲ್‌ ಸೇವನೆ ಮಾಡುವ ಬಗ್ಗೆಯೂ ಹೇಳಿಕೊಂಡಿದ್ದಾರೆ. ಇವರ ಡಯಟ್ ವೀಡಿಯೊವೊಂದು ವೈರಲ್ ಆಗುತ್ತಿದ್ದು, ಅಯ್ಯೋ ಈ ನಟಿಯರೆಲ್ಲರೂ ತಿನ್ನೋದು ಇಷ್ಟೇನಾ ಎಂದು ಕೇಳುತ್ತಿದ್ದಾರೆ ನೆಟ್ಟಿಗರು. 

Read more Photos on
click me!

Recommended Stories