ದೀಪಿಕಾ ರಿಂದ ಸೋನಂ ವರೆಗೆ: ಸಿನಿಮಾದ ಕಥೆ ಮೆಚ್ಚಿ ಉಚಿತವಾಗಿ ನಟಿಸಿದ ಸ್ಟಾರ್ಸ್‌

Published : Jun 09, 2023, 05:43 PM IST

ಬಾಲಿವುಡ್‌ ನಟಿ ಸೋನಂ ಕಪೂರ್ (Sonam Kapoor)  ಇಂದು (ಜೂನ್ 9) ತಮ್ಮ 38ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಚಿತ್ರಗಳಲ್ಲಿ ಕೆಲಸ ಮಾಡಲು ಸೋನಂ ಸಾಕಷ್ಟು ಹಣವನ್ನು ತೆಗೆದುಕೊಳ್ಳುತ್ತಾರೆ, ಆದರೆ ಸೋನಂ  ತಮ್ಮ ಒಂದು ಚಿತ್ರದಲ್ಲಿ ಕೆಲಸ ಮಾಡಲು ಯಾವುದೇ ಶುಲ್ಕವನ್ನು ವಿಧಿಸಲಿಲ್ಲ. ಆದರೆ ಈ ರೀತಿ  ಸಿನಿಮಾ ಕಥೆ ಕೇಳಿದ ನಂತರ ಯಾವುದೇ ಫೀಸ್‌ ಇಲ್ಲದೆ ನಟಿಸಲು ಒಪ್ಪಿದ ಹಲವು ಸ್ಟಾರ್ಸ್‌ ಉದಾಹರಣೆಗಳಿವೆ. 

PREV
16
ದೀಪಿಕಾ ರಿಂದ ಸೋನಂ ವರೆಗೆ: ಸಿನಿಮಾದ ಕಥೆ ಮೆಚ್ಚಿ ಉಚಿತವಾಗಿ ನಟಿಸಿದ ಸ್ಟಾರ್ಸ್‌

‘ಭಾಗ್ ಮಿಲ್ಕಾ ಭಾಗ್’ ಚಿತ್ರದಲ್ಲಿ ಸೋನಂ ಕಪೂರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ನಟಿಸಲು  ಸೋನಂ ತೆಗೆದುಕೊಂಡಿದ್ದು ಕೇವಲ 11 ರೂಪಾಯಿಗಳು ಮಾತ್ರ.

26

‘ಭಾಗ್ ಮಿಲ್ಕಾ ಭಾಗ್’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಟ ಫರ್ಹಾನ್ ಅಖ್ತರ್, ಈ ಚಿತ್ರಕ್ಕಾಗಿ ಸೋನಂ ಅವರಂತೆ ಶಗುನ್ ಅವರಿಂದ ಕೇವಲ 11 ರೂಪಾಯಿಗಳನ್ನು ತೆಗೆದುಕೊಂಡಿದ್ದಾರೆ.


 

36

ಶಾಹಿದ್ ಕಪೂರ್ ಅಭಿನಯದ 'ಹೈದರ್' ಸಿನಿಮಾ 2014ರಲ್ಲಿ ತೆರೆಕಂಡಿತ್ತು. ಕಾಶ್ಮೀರದ ಸಮಸ್ಯೆಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಶಾಹಿದ್ ಈ ಚಿತ್ರಕ್ಕಾಗಿ ತಲೆ ಬೋಳಿಸಿಕೊಂಡಿದ್ದಾರೆ. ಅದರ ಜೊತೆ ಈ ಚಿತ್ರಕ್ಕೆ ಶಾಹಿದ್ ಯಾವುದೇ ಶುಲ್ಕ ವಿಧಿಸಿಲ್ಲ.
 

46

ದೀಪಿಕಾ ಪಡುಕೋಣೆ ತಮ್ಮ ಬಾಲಿವುಡ್‌  ಚೊಚ್ಚಲ ಚಿತ್ರ 'ಓಂ ಶಾಂತಿ ಓಂ'ಗೆ ಯಾವುದೇ ಶುಲ್ಕವನ್ನು ವಿಧಿಸಿಲ್ಲ. ಈ ಚಿತ್ರದಲ್ಲಿ ಅವರೊಂದಿಗೆ ಶಾರುಖ್ ಕೂಡ ಪ್ರಮುಖ ಪಾತ್ರದಲ್ಲಿದ್ದರು. ಈ ಸಿನಿಮಾ ಸೂಪರ್‌ ಹಿಟ್‌ ಎಂದು ಸಾಬೀತಾಗಿದೆ

56

2015 ರಲ್ಲಿ ಬಿಡುಗಡೆಯಾದ 'ಪ್ರೇಮ್ ರತನ್ ಧನ್ ಪಾಯೋ' ಚಿತ್ರದಲ್ಲಿ ಕೆಲಸ ಮಾಡಲು ಸಲ್ಮಾನ್ ಖಾನ್ ಯಾವುದೇ ಫೀಸ್‌ ತೆಗೆದುಕೊಳ್ಳಲಿಲ್ಲ. ಈ ಚಿತ್ರದಲ್ಲಿ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

66

ನವಾಜುದ್ದೀನ್ ಸಿದ್ದಿಕಿ ಅವರು ಅತ್ಯುತ್ತಮ ನಟರಲ್ಲಿ ಒಬ್ಬರು. 'ಮಂಟೋ' ಚಿತ್ರದಲ್ಲಿ ಕೆಲಸ ಮಾಡಿದ್ದಕ್ಕಾಗಿ ನವಾಜುದ್ದೀನ್ ಸಿದ್ದಿಕಿ ಕೇವಲ 1 ರೂ ಚಾರ್ಜ್‌ ಮಾಡಿದ್ದರು.

Read more Photos on
click me!

Recommended Stories