ಶಿಲ್ಪಾ ಶೆಟ್ಟಿಗೆ ನಮ್ಮ ನಡುವೆ ದೀಪಿಕಾ ಪಡುಕೋಣೆ ಬರಲು ಸಾಧ್ಯವಿಲ್ಲ ಎಂದ ರಾಜ್ ಕುಂದ್ರಾ; ಕಾರಣವೇನು?

First Published Jun 9, 2023, 4:10 PM IST

ಜೂನ್ 8 ರಂದು ಶಿಲ್ಪಾ ಶೆಟ್ಟಿ (Shilpa Shetty ) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ರಾಜ್ ಕುಂದ್ರಾ ((Raj Kundra) ಅವರೊಂದಿಗಿನ ಅವರ ಬಾಂಧವ್ಯ ತುಂಬಾ ವಿಶೇಷವಾಗಿದೆ. ರಾಜ್‌ ಕುಂದ್ರಾ ಪೋರ್ನೋಗ್ರಫಿ ಪ್ರಕರಣದಲ್ಲಿ ಆರೋಪಿಯಾಗಿದ್ದರೂ ಇಬ್ಬರ ನಡುವೆ ಯಾವತ್ತೂ ವೈಮನಸ್ಸು ಬರಲಿಲ್ಲ. ರಾಜ್‌ ಅವರು ಪತಿಯ ಹುಟ್ಟುಹಬ್ಬಕ್ಕಾಗಿ ವಿಶೇಷವಾಗಿ ವಿಶ್‌ ಮಾಡಿದ್ದಾರೆ  ಮತ್ತು ದೀಪಿಕಾ ಪಡುಕೋಣೆ ಸಹ ನಮ್ಮ ನಡುವೆ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ?

ಜೂನ್ 8 ರಂದು ಶಿಲ್ಪಾ ತನ್ನ 48 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ದಿನವನ್ನು ವಿಶೇಷವಾಗಿಸುತ್ತಿದೆ ಎಂದು ರಾಜ್ ಪತ್ನಿಗಾಗಿ ಸಿಹಿಯಾದ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಶಿಲ್ಪಾ ಶೆಟ್ಟಿ ತಮ್ಮ 48 ನೇ ಹುಟ್ಟುಹಬ್ಬವನ್ನು  ಆಚರಿಸಲು  ತನ್ನ ಕುಟುಂಬದೊಂದಿಗೆ ಲಂಡನ್‌ನಲ್ಲಿದ್ದಾರೆ. ಅಭಿಮಾನಿಗಳ ಜೊತೆಗೆ ಬಾಲಿವುಡ್‌ನ ಎಲ್ಲಾ ಸೆಲೆಬ್ರಿಟಿಗಳು ಶಿಲ್ಪಾಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.

Latest Videos


'ಕೆಲವು ಸಮಯದಿಂದ ನನ್ನ ಜೀವನವು ಏರಿಳಿತಗಳನ್ನು ಎದುರಿಸುತ್ತಿದೆ. ಈ ಎಲ್ಲಾ ಸಂದರ್ಭಗಳಲ್ಲಿ ನೀವು ಬಂಡೆಯಂತೆ ನನ್ನೊಂದಿಗೆ ನಿಂತಿದ್ದೀರಿ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ' ಎಂದು ರಾಜ್ ಕುಂದ್ರಾ ತಮ್ಮ ಸಂದೇಶದಲ್ಲಿ ಹೀಗೆ ಬರೆದಿದ್ದಾರೆ

ಪತಿ ರಾಜ್ ಕುಂದ್ರಾ ಟ್ವಿಟರ್‌ನಲ್ಲಿ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ. ಅಷ್ಷೇ ಅಲ್ಲ ಅವರು ತಮ್ಮ ವೀಡಿಯೋ ಕೊಲಾಜ್‌ನಲ್ಲಿ ದೀಪಿಕಾ ಪಡುಕೋಣೆಯನ್ನು ಹೆಸರನ್ನು ಉಲ್ಲೇಖಿಸಿದ್ದಾರೆ.

Shilpa Shetty

ವೀಡಿಯೊ ಕೊಲಾಜ್‌ನಲ್ಲಿ, ರಾಜ್ ಕುಂದ್ರಾ ದೀಪಿಕಾ ಪಡುಕೋಣೆ ಅವರೊಂದಿಗೆ ರಣವೀರ್ ಸಿಂಗ್ ಅವರ ವಿವಾಹದ ಆರತಕ್ಷತೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. 'ತನ್ನನ್ನು ಶಿಲ್ಪಾರಿಂದ ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ದೀಪಿಕಾಳಿಗೂ ಸಹ'  ಎಂದು ರಾಜ್ ಕುದ್ರಾ ಬರೆದಿದ್ದಾರೆ.

ಶಿಲ್ಪಾ ಶೆಟ್ಟಿ ಅವರ ಕೆಲಸದ ಬಗ್ಗೆ ಹೇಳುವುದಾದರೆ  2021 ರ ಹಂಗಾಮಾ 2 ಚಿತ್ರದ ಮೂಲಕ ಶಿಲ್ಪಾ ಶೆಟ್ಟಿ 14 ವರ್ಷಗಳ ನಂತರ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೋತಿತು. ಇದಾದ ನಂತರ ನಿಕಮ್ಮನಲ್ಲಿ ಕಾಣಿಸಿಕೊಂಡಿದ್ದಾರೆ.

ಮುಂದೆ, ಅವರು ಒಟಿಟಿಯಲ್ಲಿ ರೋಹಿತ್ ಶೆಟ್ಟಿ ಅವರ ಭಾರತೀಯ ಪೊಲೀಸ್ ಫೋರ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ, ನಂತರ ಅವರು ಸುಖಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪೋರ್ನ್ ಸಿನಿಮಾ ಮಾಡಿದ ಆರೋಪದ ಮೇಲೆ ರಾಜ್ ಕುಂದ್ರಾ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಸದ್ಯ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ.

click me!